ವೃದ್ಧ ದಂಪತಿ ಕೊಲೆ ರಹಸ್ಯ ಬಯಲು: ಕ್ರೈಂಸ್ಟೋರಿ ನೋಡಿ ಕೊಲೆ ಮಾಡ್ತಿದ್ರು

ಬೆಂಗಳೂರು, ಅಕ್ಟೋಬರ್ 29: ನಗರದಲ್ಲಿ ನಡೆದ ವೃದ್ಧ ದಂಪತಿ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳು ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕ್ರೈಂಸ್ಟೋರಿ ನೋಡಿಕೊಂಡು ಕೊಲೆ ಮಾಡುತ್ತಿದ್ದರು ಎನ್ನುವುದು ತಿಳಿದುಬಂದಿದೆ.

ಆರೋಪಿಗಳು ಮಕ್ಕಳಿಲ್ಲದ ದಂಪತಿಗಳನ್ನೇ ಕೊಲೆ ಮಾಡಿ ಆಭರಣ ದೋಚುತ್ತಿದ್ದರು.ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕು ಚೌಡಘಟ್ಟ ಗ್ರಾಮದ ವೆಂಕಟೇಶ್ ಅಲಿಯಾಸ್ ಅರುಣ 30 ಈತನ ಪತ್ನಿ ಅರ್ಪಿತಾ ಬಂಧಿತ ಆರೋಪಿಗಳು.

ಆರೋಪಿಗಳು 16ರಂದು ವೈಟ್‌ಫೀಲ್ಡ್ ಆರ್‌ಎಚ್‌ಬಿ ಕಾಲೊನಿಯಲ್ಲಿ ವಾಸವಿದ್ದ ಖಾಸಗಿ ಕಂಪನಿ ನಿವೃತ್ತ ನೌಕರರಾದ ಚಂದ್ರೇಗೌಡ ಮತ್ತು ಅವರ ಪತ್ನಿ ಲಕ್ಷ್ಮಮ್ಮ ರಾಡಿನಿಂದ ಹೊಡೆದು ಕೊಲೆ ಮಾಡಿ 305 ಗ್ರಾಂ ಚಿನ್ನದ ಆಭರಣ ಹಾಗೂ 95000 ರೂಪಾಯಿ ದೋಚಿದ್ದರು.

The Murder Of An Elderly Couple In The City Is Revealed

ಕೊಲೆಯಾದ ಲಕ್ಷ್ಮಮ್ಮ ಬಂಧಿತ ವೆಂಕಟೇಶ್‌ ದೂರದ ಸಂಬಂಧಿ ಮೈಸೂರಿನಲ್ಲಿ ನಡೆದಿದ್ದ ಮದುವೆಯೊಂದರಲ್ಲಿ ಪರಿಚಯವಾಗಿತ್ತು ನಂತರ ವೆಂಕಟೇಶ್ ಪತ್ನಿ ಜೊತೆಗೂಡಿ ಎರಡು ಸಲ ಅವರ ಮನಗೆ ಹೋಗಿದ್ದ, ಇದೇ 16ರಂದು ಸಂಜೆ ಕಾರಿನಲ್ಲಿ ಪತ್ನಿ ಹಾಗೂ ಮಗು ಸಹಿತ ಆರ್‌ಎಚ್‌ಬಿ ಕಾಲೊನಿಗೆ ಆರೋಪಿ ಹೋಗಿದ್ದ. ಆ ಸಮಯದಲ್ಲಿ ಲಕ್ಷ್ಮಮ್ಮ ಅವರೊಬ್ಬರೇ ಮನೆಯಲ್ಲಿದ್ದರು.

ಜುಲೈ 12ರಂದು ರಾತ್ರಿ ಕೆಆರ್ ಪೇಟೆ ತಾಲೂಕು ರಾಯಸಮುದ್ರದ ಲಲಿತಮ್ಮ ಗುಂಡೇಗೌಡ ದಂಪತಿಯನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿ 60 ಗ್ರಾಂ ಚಿನ್ನದ ಆಭರಣ ಹಾಗೂ 2 ಸಾವಿರ ರೂ ಲೂಟಿ ಮಾಡಿದ್ದರು.

ಪತಿ ಚಂದ್ರೇಗೌಡ ವಾಯುವಿಹಾರಕ್ಕೆ ಹೋಗಿದ್ದರು. ಈ ಸಮಯಕ್ಕಾಗಿ ಕಾಯುತ್ತಿದ್ದ ವೆಂಕಟೇಶ್ ವೀಲ್ ರಾಡಿನಿಂದ ಲಕ್ಷ್ಮಮ್ಮ ಅವರ ತಲೆಗೆ ಹೊಡೆದು ಕೊಲೆ ಮಾಡಿ ಶವವನ್ನು ಬೆಡ್‌ರೂಂಗೆ ಸಾಗಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೃತಹಳ್ಳಿ ವಾಸವಿದ್ದ ವೆಂಕಟೇಶ್ ಓಲಾ ಕ್ಯಾಬ್ ಚಾಲಕನಾಗಿದ್ದ, ಖಾಸಗಿ ಹಣಕಾಸು ಸಂಸ್ಥೆ ಹಾಗೂ ಗೆಳೆಯರಿಂದ 10 ಲಕ್ಷ ಸಾಲ ಮಾಡಿಕೊಂಡಿದ್ದ, ಸಾಲ ತೀರಿಸಿ ಸ್ವಂತ ಕಾರು ಖರೀದಿಸಿ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಮಕ್ಕಳಿಲ್ಲದ ವೃದ್ಧ ಸಂಪತಿಯನ್ನು ಕೊಲೆ ಮಾಡುತ್ತಿದ್ದ. ಈತನ ಕೃತ್ಯಕ್ಕೆ ಪತ್ನಿ ನೆರವಾಗುತ್ತಿದ್ದಳು. 2016ರಲ್ಲಿ ಮದುವೆಯಾಗಿದ್ದ ಇವರಿಗೆ ಒಂದೂವರೆ ವರ್ಷದ ಮಗುವಿದೆ ಎಂದು ತಿಳಿಸಿದೆ.

ಆರೋಪಿ ಪತ್ನಿ ಅರ್ಪಿತಾ ಮಗು ಎತ್ತಿಕೊಂಡು ಹೊರಗೆ ನಿಂತಿದ್ದರು. ವಾಯುವಿಹಾರ ಮುಗಿಸಿ ಚಂದ ಚಂದ್ರೇಗೌಡ ಅವರನ್ನು ಮಾತನಾಡಿಸಿ , ಮಗುವನ್ನು ತೆಗೆದುಕೊಂಡು ಅಂಗಡಿಗೆ ಹೋಗಿ ಚಾಕಲೇಟ್ ಕೊಡಿಸಿಕೊಂಡು ಬಂದರು.

ಅವರು ಮನೆಯೊಳಗೆ ಹೋಗುತ್ತಿದ್ದಂತೆ, ಬಾಗಿಲ ಹಿಂದೆ ನಿಂತಿದ್ದ ಆರೋಪಿ ತಲೆಗೂ ರಾಡಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+