ನಮ್ಮ ಮೆಟ್ರೋ: ಸಿಲ್ಕ್ ಬೋರ್ಡ್-ಕೆಆರ್ ಪುರ ಮಾರ್ಗಕ್ಕೆ ಶೀಘ್ರ ಟೆಂಡರ್
ಬೆಂಗಳೂರು, ಫೆಬ್ರವರಿ 19 : ಬೆಂಗಳೂರಿನ ಸಿಲ್ಕ್ ಬೋರ್ಡ್ -ಕೆ.ಆರ್ ಪುರ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ವಾರದೊಳಗೆ ಟೆಂಡರ್ ಕರೆಯಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ.
ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ನೀಡಿರುವ 500 ಕೋಟಿ ಕ್ರೋಢೀಕರಣ ಗುರಿಯನ್ನು ನಿಗಮ ತಲುಪಿದೆ. ಐಟಿ ಕಾರಿಡಾರ್ ಎಂದೇ ಕರೆಸಿಕೊಂಡಿರುವ ಈ ಪ್ರದೇಶದಲ್ಲಿ 8 ಲಕ್ಷ ಉದ್ಯೋಗಿಗಳಿದ್ದಾರೆ. ಈ ಪ್ರದೇಶಕ್ಕೆ
ಮೆಟ್ರೋ ಸಂಪರ್ಕ ಕಲ್ಪಿಸುವಂತೆ 2016 ರ ಅಕ್ಟೋಬರ್ ನಲ್ಲಿ ಬಿಎಂಆರ್ ಸಿ ಎಲ್ ವಿಸ್ತೃತ ಯೋಜನಾ ವರದಿ ತಯಾರಿಸಿತ್ತು.4,202 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಯೋಜನೆಗೆ 2017 ರ ಮಾರ್ಚ್ ನಲ್ಲಿ ಸಂಪುಟ ಒಪ್ಪಿಗೆ ನೀಡಿತ್ತು. ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಬಿಎಂಆರ್ ಸಿ ಎಲ್ ಇತ್ತೀಚೆಗೆ ಹೊಸ ವಿಧಾನ
ಅನುಸರಿಸುತ್ತಿದೆ. ಪೂರ್ಣ ಮಾರ್ಗದ ಕಾಮಗಾರಿಯನ್ನು ಒಬ್ಬ ಗುತ್ತಿಗೆದಾರನಿಗೆ ನೀಡದೆ , ವಿಭಜಿಸಿ ನೀಡಲಾಗುತ್ತಿದೆ. ಸಿಲ್ಕ್ ಬೋರ್ಡ್-ಕೆ.ಆರ್ ಪುರ ಮಾರ್ಗದಲ್ಲೂ ಇದೆ ವಿಧಾನ ಅನುಸರಿಸಲು ನಿಗಮ ನಿರ್ಧರಿಸಿದ್ದು , 17

ಕಿಮೀ ಕಾಮಗಾರಿಯನ್ನು 2-3 ಗುತ್ತಿಗೆದಾರರಿಗೆ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications