ಯುವತಿ ತನ್ನ ಮನೆಯಲ್ಲೇ 1 ಕೋಟಿ ಕದ್ದಿದ್ದೇಕೆ?

ಬೆಂಗಳೂರು, ಡಿಸೆಂಬರ್ 17: ಪ್ರೇಮಿಗಳು ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಒಂದು ನಿದರ್ಶನ, ತನ್ನ ಪ್ರಿಯಕರನನ್ನು ಪೈಲಟ್ ಮಾಡಲು ಯುವತಿ ತನ್ನ ಮನೆಯಲ್ಲಿಯೇ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಗುಜರಾತ್ ಮೂಲದ ಜೋಡಿ ಬೆಂಗಳೂರಲ್ಲಿ ಸಿಕ್ಕಿಬಿದ್ದಿದ್ದಾರೆ.

ಗುಜರಾತ್‌ ರಾಜ್‌ಕೋಟ್‌ನ ಉದ್ಯಮಿ ಕಿಶೋರ್ ಪರ್ಸಾನಾ ಎಂಬುವರ 20 ವರ್ಷದ ಮಗಳ ಪ್ರಿಯಾಂಕಾ ಕಳೆದ 2 ವರ್ಷಗಳಿಂದ ಹೇತ್‌ ಶಾ(20) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೇತ್ ಶಾ ಪೈಲಟ್ ಆಗಬೇಕೆಂಬ ಕನಸಿತ್ತು. ಹೀಗಾಗಿ ಬೆಂಗಳೂರಿನಲ್ಲಿರುವ ಪೈಲಟ್ ತರಬೇತಿ ಅಕಾಡೆಮಿಗೆ ಸೇರಲು ಬಯಸಿದ್ದ ಆದರೆ ಶುಲ್ಕ ಪಾವತಿಸಲು ಹಣವಿಲ್ಲ ಎಂಬ ವಿಷಯವನ್ನು ಆತ ಪ್ರಿಯಾಂಕಾಗೆ ತಿಳಿಸಿದ್ದ.

ಪೈಲಟ್ ಪ್ರವೇಶ ಪಡೆಯಲು 20 ಲಕ್ಷ ರೂ ಕಟ್ಟಬೇಕಿತ್ತು. ಹೀಗಾಗಿ ಆತನಿಗೆ ಸಹಾಯ ಮಾಡಲು ಪ್ರಿಯಾಂಕಾ ತನ್ನ ಮನೆಯಲ್ಲೇ ದರೋಡೆ ಮಾಡುವ ಉಪಾಯ ಮಾಡಿದ್ದಳು. ಇಬ್ಬರು ಸೇರಿ 64 ಸಾವಿರ ನಗದು, 3 ಕೆಜಿ ಚಿನ್ನ ಹಾಗೂ 2 ಕೆಜಿ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದರು.

Teen girl robbed her house

ಅನುಮಾನ ಬಾರದಿರಲಿ ಎಂದು ಮನೆಯ ವಸ್ತುಗಳನ್ನು ಧ್ವಂಸ ಮಾಡಿ, ಇದು ಕಳ್ಳರು ಮಾಡಿರುವ ಕೃತ್ಯವೆಂಬಂತೆ ಬಿಂಬಿಸಿದ್ದರು. ಕಳವು ಮಾಡಿ್ ಸಿನ ಮನೆಯಲ್ಲಿ ಯಾರೂ ಇರಲಿಲ್ಲ. ಕಳವು ಸಂಬಂಧ ಪ್ರಿಯಾಂಕಾ ತಂದೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ಆರಂಭಿಸಿದ ಪೊಲೀಸರಿಗೆ ಪ್ರಿಯಾಂಕಾ ಮತ್ತು ಹೆತ್ ಶಾ ಮೇಲೆಯೇ ಅನುಮಾನ ಬಂದಿತ್ತು, ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಎಫ್‌ಐಆರ್‌ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+