ಗೆಳತಿಯೊಂದಿಗೆ ಕಲಹ: ಲಿವಿಂಗ್ ಟುಗೆದರ್ ನಲ್ಲಿದ್ದ ಟೆಕ್ಕಿ ಆತ್ಮಹತ್ಯೆ
ಬೆಂಗಳೂರು, ಸೆ.26: ಗೆಳತಿಯ ಜತೆ ಲಿವಿಂಗ್ ಟುಗೆದರ್ ನಲ್ಲಿದ್ದ ಎಂಜಿನಿಯರ್ ಗೆಳತಿಯ ಜತೆ ಕಿತ್ತಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿ ನಡೆದಿದೆ.
ಮೈಸೂರು ಮೂಲದ ಟೆಕ್ಕಿ ಚಂದ್ರಶೇಖರ್(3) ಮೃತರು.ಗೆಳತಿಯ ಜತೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ, ತನ್ನದೇ ವೃತ್ತಿಯ ಗೆಳತಿ ಜತೆ ಒಂದು ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿದ್ದ, ಗೆಳತಿಯ ಜತೆ ಜಗಳವಾಡಿ ಕೊನೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಬ್ಬರಿಗೂ ಮದುವೆ ಆಗುವ ಉದ್ದೇಶವಿತ್ತು, ಆದರೆ ಇಬ್ಬರ ನಡುವ ಆಗಾಗ ಮನಸ್ತಾಪ ಮೂಡುತ್ತಿತ್ತು ಅಂದು ಕೂಡ ಇದೇ ರೀತಿಯಾಗಿತ್ತು ಎಂದು ತಿಳಿದುಬಂದಿದೆ. ಗೆಳತಿ ಅಡುಗೆಮನೆಯಲ್ಲಿ ಇದ್ದಾಗಲೇ ಚಂದ್ರಶೇಖರ್ ಮಲಗುವ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಊಟಕ್ಕೆಂದು ಗೆಳತಿ ಕರೆಯಲು ಹೋದಾಗ ಚಂದ್ರು ನೇಣಿನ ಕುಣಿಕೆಯಲ್ಲಿದ್ದರು, ಅಕ್ಕಪಕ್ಕದ ಫ್ಲಾಟ್ ನಿವಾಸಿಗಳು ಸ್ಥಳಕ್ಕೆ ಬಂದು ನೇಣಿನ ಕುಣಿಕೆಯಿಂದ ಅವರನ್ನು ಇಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗಾಗಲೇ ಆತಮ ಮೃತಪಟ್ಟಿದ್ದ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications