ಹಸೆಮಣೆ ಏರುವ ಕೆಲವೇ ಕೆಲವು ಹೊತ್ತಿನ ಮುಂಚೆ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು, ಜೂನ್ 3: ಮದುವೆಯ ಕೆಲವೇ ಕೆಲವು ನಿಮಿಷಗಳ ಮೊದಲು ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮದುವೆಯಾಗುವ ಹುಡುಗಿಯಿಂದ ಕಿರುಕುಳ ತಾಳಲಾರದೆ 24 ವರ್ಷದ ಎಂಜಿನಿಯರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.ಡೊಮ್ನಿಕ್ ರಿಜಾರಿಯೋ ವಸಂತನಗರದ ನಿವಾಸಿಯಾಗಿದ್ದಾರೆ. ಅವರು ಮಾರತ್ತಹಳ್ಳಿಯಲ್ಲಿರುವ ಎಚ್‌ಪಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಜೆ 3 ಗಂಟೆಗೆ ಅವರು ರಿಜಿಸ್ಟರ್ ಮದುವೆಯಾಗುವವರಿದ್ದರು. ಆದರೆ ಬೆಳಗ್ಗೆ 11 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೀಲಿಂಗ್‌ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ, ಪೋಷಕರು ಸಂಜೆ ವೇಳೆಗೆ ಮನೆಗೆ ಮರಳಿದಾಗ ವಿಷಯ ಗೊತ್ತಾಗಿದೆ. ಒಂದೊಮ್ಮೆ ಆಕೆಯನ್ನು ಮದುವೆಯಾಗುವುದಿಲ್ಲವೆಂದಾದರೆ ನೀನು ಸತ್ತುಹೋಗು ಎಂದು ಆಕೆ ಹೇಳಿದ್ದಳು ಆಕೆಯ ಕಿರುಕುಳ ತಾಳಲಾರದೆ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಪೋಷಕರು ತಿಳಿಸಿದ್ದಾರೆ.

 Techie suicide hour before marriage

ಡೊಮ್ನಿಕ್ ಹಾಗೂ ಯುವತಿ ಒಂದೇ ಏರಿಯಾದವರಾಗಿದ್ದರು, ಇಬ್ಬರೂ ಸಂಪರ್ಕದಲ್ಲಿದ್ದರು ಆದರೆ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಬಂದು ದೂರವಾಗಿದ್ದರು, ಬಳಿಕ ಯುವತಿಯು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಬಳಿಕ ಡೊಮ್ನಿಕ್ ಹಾಗೂ ಯುವತಿ ರಾಜಿಯಾಗಿದ್ದರು. ಆದರೆ ಏಪ್ರಿಲ್‌ನಲ್ಲಿ ಯುವತಿ ಮತ್ತೆ ಡೊಮ್ನಿಕ್ ವಿರುದ್ಧ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಳು. ಡೊಮ್ನಿಕ್ ಆತನ ಮೊಬೈಲ್ ನಂಬರ್ ಚೇಂಜ್ ಮಾಡಿದ್ದ, ಆತನ ಬೇರೊಂದು ಹುಡುಗಿಯ ಜೊತೆಗೆ ಸಂಪರ್ಕದಲ್ಲಿದ್ದಾನೆ ಎಂದು ಆರೋಪಿಸಿದ್ದಳು.

ಬಳಿಕ ಆಕೆಯನ್ನೇ ಮದುವೆಯಾಗಲು ಆತ ಒಪ್ಪಿದ್ದ, ಮದುವೆ ಕೆಲವೇ ಕೆಲವು ಗಂಟೆಗಳ ಹಿಂದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+