ಪ್ರೇಯಸಿಯನ್ನು ಕೊಂದು ಚರಂಡಿಗೆ ಎಸೆದಿದ್ದ ಟೆಕ್ಕಿ ಸಿಕ್ಕಿ ಬಿದ್ದಿದ್ದು ಹೇಗೆ?

ಬೆಂಗಳೂರು, ಏ.15: ಪ್ರೇಯಸಿಯನ್ನು ಕೊಂದು ಚರಂಡಿಗೆ ಎಸೆದಿದ್ದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.

25 ವರ್ಷದ ಟೆಕ್ಕಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು ಸ್ಯೂಟ್‌ಕೇಸ್‌ನೊಳಗೆ ಹಾಕಿ ಚರಂಡಿಗೆ ಎಸೆದಿದ್ದ.ಮದುವೆಯಾಗು ಎಂದು ಒತ್ತಾಯಿಸಿದ ಕಾರಣ ಆಕೆಯನ್ನು ಕೊಲೆ ಮಾಡಿದ್ದೆ ಎಂದು ಆತ ಬಾಯ್ಬಿಟ್ಟಿದ್ದಾನೆ.

ಸುನಿಲ್ ಕುಮಾರ್ ಆರೋಪಿ, ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಿಸ್ಟಂ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆತ ಯುವತಿಯೊಂದಿಗೆ ಸಾಕಷ್ಟು ವರ್ಷಗಳಿಂದ ಸಂಬಂಧ ಹೊಂದಿದ್ದ.

ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದ ಅವರು ಆಗಲೇ ಪ್ರೀತಿಯಲ್ಲಿ ಬಿದ್ದಿದ್ದರು.

Techie kills lover dumps body in drain

ಓದು ಮುಗಿದ ಬಳಿಕ ಇಬ್ಬರೂ ಕೆಲಸಕ್ಕೆ ಸೇರಿದ್ದರು, ಸುನಿಲ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ.

ದಿನಗಳು ಕಳೆದಂತೆ ನಿನ್ನನ್ನು ನಾನು ಯಾಕೆ ಮದುವೆಯಾಗಬೇಕು ಎನ್ನುವ ಪ್ರಶ್ನೆಯನ್ನು ಆಕೆಯ ಮುಂದಿಟ್ಟಿದ್ದ. ಎಲ್ಲೋ ದಾರಿ ತಪ್ಪುತ್ತಿದೆ ಎಂದು ತಿಳಿದಾಗ ಆಕೆ ಮದುವೆಯಾಗುವಂತೆ ಒತ್ತಾಯಿಸಿದ್ದಳು.

ಫೆಬ್ರವರಿಯಲ್ಲಿ ಯುವತಿ ಮನೆಗೆ ತೆರಳಿ ಆತಿಗೆ ಮಸ್ಕಟ್‌ನಲ್ಲಿ ಕೆಲಸ ಸಿಕ್ಕಿದೆ ಇನ್ನು ಆಕೆಯನ್ನು ಮದುವೆಯಾಗುತ್ತೇನೆ.

ಹಾಗೆಯೇ ಆಕೆಗೆ ಅಲ್ಲೇ ಲ್ಲಾದರೂ ಕೆಲಸ ಕೊಡಿಸುತ್ತೇನೆ ಎಂದಿದ್ದ. ಅಂತೆಯೇ ಆತ ಮಸ್ಕಟ್‌ಗೆ ಹೊರಟಿದ್ದ, ಆಕೆಯ ಮನೆಯವರೂ ಯುವತಿಯನ್ನು ಬಿಡಲು ಏರ್‌ಪೋರ್ಟ್‌ಗೆ ಬಂದಿದ್ದರು.

ಸುನಿಲ್ ಆಗ ಇಲ್ಲ ಇಂದಿನ ಫ್ಲೈಟ್ ಕ್ಯಾನ್ಸಲ್ ಆಗಿದೆ ನಾಳೆಯ ಫ್ಲೈಟ್‌ಗೆ ಹೋಗೋಣ ಎಂದು ಸಬೂಬು ಹೇಳಿ ವಾಪಸ್ ಬಂದಿದ್ದರು.

ಅಂದು ಲಾಡ್ಜ್‌ನಲ್ಲಿ ಉಳಿದುಕೊಂಡಾಗ ಆಕೆ ಮತ್ತೆ ಮದುವೆಯಾಗುವಂತೆ ಒತ್ತಾಯಿಸಿದಾಗ ಕೋಪಗೊಂಡ ಸನಿಲ್ ಆಕೆಯನ್ನು ಕೊಲೆ ಮಾಡಿದ್ದ.

ಬಳಿಕ ಸೂಟ್‌ಕೇಟ್‌ಗೆ ಹಾಕಿ ಚರಂಡಿಗೆ ಬಿಸಾಡಿದ್ದ ನಂತರ ಆಕೆ ಎಲ್ಲೂ ಕಾಣಿಸುತ್ತಿಲ್ಲ ಎಂದು ಸುಳ್ಳು ಹೇಳಿದ್ದ. ಯುವತಿಯ ತಂಗಿಗೆ ಯುವತೀಯೇ ಮಸೇಜ್ ಮಾಡಿದಂತೆ ಹೈದರಾಬಾದ್‌ಗೆ ಬಂದಿದ್ದೇನೆ ಎಂದು ಮೆಸೇಜ್ ಮಾಡಿದ್ದ ಬಳಿಕ ಸ್ವಿಚ್ಡ್ ಆಫ್ ಮಾಡಿದ್ದ.

ಅಲ್ಲಿಗೆ ಬಾರದ ಕಾರಣ ಮನೆಯವರು ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಇಬ್ಬರ ಮೊಬೈಲ್ ಪರಿಶೀಲಿಸಿದ ಬಳಿಕ ಸತ್ಯ ಗೊತ್ತಾಗಿದೆ.ಪೊಲೀಸರು ಸುನಿಲ್‌ನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+