ಸ್ನೇಹಿತನ ಪತ್ನಿ ಮೇಲೆ ಟೆಕ್ಕಿಯಿಂದ ಅತ್ಯಾಚಾರಕ್ಕೆ ಯತ್ನ
ಬೆಂಗಳೂರು, ನವೆಂಬರ್ 27: ಸ್ನೇಹಿತನ ಪತ್ನಿ ಮೇಲೆ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ.
ಟೆಕ್ಕಿ ಯಾರೂ ಇಲ್ಲದ ಹೊತ್ತು ನೋಡಿ ಸ್ನೇಹಿತನ ಪತ್ನಿ ಇದ್ದ ಕೋಣೆಗೆ ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ, ಆಕೆ ಕಿರುಚಿಕೊಂಡು ಹೊರಗೆ ಓಡಿ ಬಂದಿದ್ದಾಳೆ.
ನೀಲಬ್ ನಯನ್ ಬಂಧಿತ ಆರೋಪಿ. ಭಾನುವಾರ ಹುಟ್ಟುಹಬ್ಬದ ಪಾರ್ಟಿ ಆಚರಿಸಲು ಸ್ನೇಹಿತರು ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್ ಗೆ ಆಗಮಿಸಿದ್ದರು. ಈ ವೇಳೆ ಆರೋಪಿ ನಯನ್ ಕಂಠಪೂರ್ತಿ ಕುಡಿದು ಶೌಚಾಲಯಕ್ಕೆ ತೆರಳಿದ್ದನು.

ಶೌಚಾಲಯದ ಪಕ್ಕದ ರೂಮಿನಲ್ಲಿ ಮಲಗಿದ್ದ ಸ್ನೇಹಿತನ ಪತ್ನಿಯ ಮೇಲೆ ನಯನ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ಆರೋಪಿಯಿಂದ ತಪ್ಪಿಸಿಕೊಂಡು ಜೋರಾಗಿ ಕಿರುಚಾಡಲು ಶುರು ಮಾಡಿದ್ದರು.
ದೂರಿನನ್ವಯ ಬೆಳ್ಳಂದೂರು ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಹಾಗೂ ಆಕೆಯ ಪತಿ ಬೆಳ್ಳಂದೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು.












Click it and Unblock the Notifications