SWR: ರೈಲು ಪ್ರಯಾಣಿಕರೇ ಗಮನಿಸಿ! ಯಶವಂತಪುರ-ಮಂಗಳೂರು, ಕಾರವಾರ ರೈಲುಗಳು ಹಲವು ದಿನ ರದ್ದು

ಬೆಂಗಳೂರು: ಮೈಸೂರು ವಿಭಾಗದ ಶ್ರೀವಾಗಿಲು ಮತ್ತು ಯಡಕುಮರಿ ರೈಲು ನಿಲ್ದಾಣಗಳ ನಡುವೆ ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿ ನಡೆಲಸಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿ ರೈಲ್ವೆ ಹಳಿ ಬ್ಲಾಕ್ ಮಾಡಲಾಗಿರುವುದರಿಂದ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಎಷ್ಟು ದಿನ, ಯಾವ ಮಾರ್ಗದ ರೈಲು ಸಂಚಾರ ರದ್ದಾಗಿದೆ ಎಂಬ ಮಾಹಿತಿ ಇಲ್ಲಿದೆ.

ರದ್ದಾದ ರೈಲುಗಳ ವಿವರ

* ಯಶವಂತಪುರ - ಮಂಗಳೂರು ಜಂಕ್ಷನ್ ಮಾರ್ಗದ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ರೈಲಿನ (16575) ಸಂಚಾರ 2026ರ ಅಕ್ಟೋಬರ್ 04, 06, 08, 11, 13, 15, 22, 25, 27, 29, ನವೆಂಬರ್ 01 ಮತ್ತು 03 ರಂದು ಒಟ್ಟು 12 ದಿನಗಳು ರದ್ದುಗೊಳಿಸಲಾಗಿದೆ.

Train Cancelled

* ಮಂಗಳೂರು ಜಂಕ್ಷನ್ - ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ರೈಲು (16576) 2026 ಅಕ್ಟೋಬರ್ 05, 07, 09, 12, 14, 16, 23, 26, 28, 30, 02 ಮತ್ತು ನವೆಂಬರ್ 04 ಸೇರಿ ಒಟ್ಟು ಒಟ್ಟು 12 ದಿನಗಳು ಈ ಮಾರ್ಗದಲ್ಲಿ ಸಂಚಾರ ಮಾಡುವುದಿಲ್ಲ.

Vande Bharat Sleeper: ಬೆಂಗಳೂರು-ಮುಂಬೈ ಮಾರ್ಗದಲ್ಲಿ ಟ್ರಯಲ್ ರನ್! ಅಪ್ಡೇಟ್ ಕೊಟ್ಟ ವಿಭಾಗೀಯ ಅಧಿಕಾರಿ

* ಯಶವಂತಪುರ - ಕಾರವಾರ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ರೈಲಿನ (16515) ಸಂಚಾರವನ್ನು 2026ರ ಅಕ್ಟೋಬರ್ 05, 07, 09, 12, 14, 21, 23, 26, 28, 30 ಮತ್ತು ನವೆಂಬರ್ 02 ರಂದು ಸೇರಿ ಒಟ್ಟು 11 ದಿನ ರದ್ದುಗೊಳ್ಳಲಿದೆ.

* ಕಾರವಾರ - ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ರೈಲಿನ (16516)ಸಂಚಾರವನ್ನು 2026ರ ಅಕ್ಟೋಬರ್ 06, 08, 10, 13, 15, 22, 24, 27, 29, 31 ಮತ್ತು ನವೆಂಬರ್ 03 ಸೇರಿ 11 ದಿನಗಳು ಸಂಚಾರ ಮಾಡುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

* ಯಶವಂತಪುರ - ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿನ (16539) ಸಂಚಾರವು 2026 ಅಕ್ಟೋಬರ್‍ದ 10, 24 ಮತ್ತು 31ರಂದು ಒಟ್ಟು ಮೂರು ದಿನಗಳ ಕಾಲ ರಂದು ರದ್ದುಗೊಳ್ಳಲಿದೆ.

* ಮಂಗಳೂರು ಜಂಕ್ಷನ್ - ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲಿನ (16540) ಸಂಚಾರವು 2026 ಅಕ್ಟೋಬರ್ 11, 25 ಮತ್ತು ನವೆಂಬರ್ 01 ಒಟ್ಟು ಮೂರು ದಿನಗಳ ಕಾಲ ಸಂಚಾರ ಮಾಡುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+