ಪ್ರೇಮಿಗಳ ಭಾವ ಬೆಸುಗೆಗೆ ಕೊಂಡಿಯಾಗಲು ಬರುತ್ತಿವೆ ಕೆಂಬಣ್ಣ ಗುಲಾಬಿ!

ಬೆಂಗಳೂರು, ಫೆಬ್ರವರಿ 08 : ಪ್ರೇಮಿಗಳ ದಿನ ಇನ್ನೇನು ಬಂದೇ ಬಿಟ್ಟಿತು. ಒಲಿದ ಹೃದಯಗಳ ಬೆಸುಗೆಗೆ, ಮನದಾಳದ ಮೂಲೆಯಲ್ಲಿ ಸುಪ್ತವಾಗಿರುವ ಭಾವ ಹೊರ ಹೊಮ್ಮಿಸುವ ಸುಂದರ ಘಳಿಗೆಗೆ ಸಾಕ್ಷಿಯಾಗಲು ಪ್ರೇಯಸಿಗಿಂತ ಸೊಗಸಾದ ಗುಲಾಬಿ ಕೂಡ ಈಗ ಸಿಂಗಾರಗೊಳ್ಳುತ್ತಿದೆ. ಅಂದ ಹಾಗೆ ಈ ಬಾರಿ ಗುಲಾಬಿ ಹೂವು ಪ್ರೇಮಿಗಳಿಗೆ ಮಾತ್ರವಲ್ಲ ಬೆಳೆಗಾರರಿಗೂ ಹಬ್ಬ ತಂದಿದೆ.

ಗುಲಾಬಿ ಹೂ ಬೆಳೆಗಾರರು ಲಾಭದ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 150 ಗುಲಾಬಿ ಬೆಳೆಗಾರರು 45 ಕಿ.ಮೀ ವ್ಯಾಪ್ತಿಯಲ್ಲಿ ಗುಲಾಬಿ ಬೆಳೆದಿದ್ದಾರೆ. ಅದರಲ್ಲಿ ತಾಜ್ ಮಹಲ್, ಗ್ರ್ಯಾಂಡ್ ಗಲಾ ಹಾಗೂ ಫರ್ಸ್ಟ್ ರೆಡ್ ಗೆ ಹೆಚ್ಚು ಬೇಡಿಕೆ ಇದೆ.

ಪ್ರೇಮಿಗಳ ದಿನಕ್ಕಾಗಿ ಬೆಂಗಳೂರು ಒಂದರಿಂದಲೇ ಹೊರ ರಾಷ್ಟ್ರಗಳಿಗೆ ೮ ಕೋಟಿ ರೂ. ಮೌಲ್ಯದ ಕೆಂಪು ಗುಲಾಬಿ ರಫ್ತು ಆಗಲಿದೆ. ಯೂರೋಪ್ ದೇಶಗಳಲ್ಲಿ ಚಳಿ ಅಧಿಕವಾಗಿರುವುದರಿಂದ ಆ ಭಾಗಗಳಲ್ಲಿ ಗುಲಾಬಿ ಹೂವಿನ ಉತ್ಪಾದನೆ ಕುಸಿದಿದ್ದು, ಭಾರತೀಯ ಕೆಂಪು ಗುಲಾಬಿ ಹೂವಿಗೆ ಈ ವರ್ಷ ಬೇಡಿಕೆ ಹೆಚ್ಚಾಗಿದೆ. ಈ ಮೂಲಕ ಕೋಟ್ಯಂತರ ರೂ.ವಿದೇಶಿ ವಿನಿಮಯ ನಮ್ಮ ರಾಷ್ಟ್ರಕ್ಕೆ ಹರಿದು ಬರಲಿದೆ.

Sweet smell of profit for Rose growers this Valentine's Day

ಜ.30ರಿಂದಲೇ ರಫ್ತು ಆರಂಭವಾಗಿದ್ದು, ಈಗಾಗಲೇ 30 ಲಕ್ಷಕ್ಕೂ ಹೆಚ್ಚು ಹೂವುಗಳು ರಫ್ತಾಗಿದೆ. ಫೆ.11ರವರೆಗೆ ಇನ್ನೂ 25 ಲಕ್ಷ ಹೂವು ಹೊರ ರಾಷ್ಟ್ರಗಳಿಗೆ ರಫ್ತಾಗಲಿದೆ. ಬೆಂಗಳೂರು ಹಾಗೂ ಸುತ್ತಮುತ್ತ ಗುಲಾಬಿ ಸೇರಿದಂತೆ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪೋದ್ಯಮ ವ್ಯಾಪಿಸಿಕೊಂಡಿದೆ. ಈ ಮೂಲಕ ವಾರ್ಷಿಕ ಕೋಟ್ಯಾಂತರ ರೂ. ವಹಿವಾಟು ಪುಷ್ಪೋದ್ಯಮದಿಂದ ನಡೆಯುತ್ತಿದೆ.

ಗ್ರ್ಯಾಂಡ್ ಗಲಾ, ಫರ್ಸ್ಟ್ ರೆಡ್, ತಾಜ್ ಮಹಲ್ ಗುಲಾಬಿಗಳು ಯುರೋಪ್, ಗಲ್ಫ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸಿಂಗಾಪೂರ್, ಮಲೇಶಿಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗೆ ರಫ್ತಾಗುತ್ತದೆ. ಯುರೋಪ್ ದೇಶಕ್ಕೆ ಫೆ.೮ರಂದು ಹೂವುಗಳು ರಫ್ತಾಗುತ್ತಿದ್ದು ಗಲ್ಫ್ ದೇಶಕ್ಕೆ ಫೆ.11 ರಂದು ರವಾನೆಯಾಗುತ್ತಿದೆ. ಈಗಾಗಲೇ ಒಂದು ಗುಲಾಬಿಗೆ 14 ರೂ ದಾಟಿದೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಶೇ.90 ಬೆಳೆಗಾರರು ತಾಜ್ ಮಹಲ್ ಗುಲಾಬಿಯನ್ನು ಹೆಚ್ಚಾಗಿ ಬೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+