ದೇಶದ ಕೊಳಕು ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ 5ನೇ ಸ್ಥಾನ

ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಹಬ್ ಎಂದೆಲ್ಲಾ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿರುವ ನಮ್ಮ ಹೆಮ್ಮೆಯ ಬೆಂಗಳೂರು ನಗರದ ಪಾಲಿಗೆ ಇದೊಂದು ತೀರಾ ಬೇಸರದ ಸುದ್ದಿಯಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಬಿಡುಗಡೆಯಾಗಿರುವ 'ಸ್ವಚ್ಛ ಸರ್ವೇಕ್ಷಣಾ 2025' ವರದಿಯಲ್ಲಿ ಸಿಲಿಕಾನ್ ಸಿಟಿಯ ಮರ್ಯಾದೆ ಹರಾಜಾಗಿರುವುದಂತು ಸತ್ಯ. ದೇಶದ ಅತಿ ಕೊಳಕು ಅಥವಾ ಸ್ವಚ್ಛತೆಯ ಕೊರತೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ 5ನೇ ಸ್ಥಾನ ಲಭಿಸಿದೆ.

ಹೌದು, ಕಸದ ಸಮಸ್ಯೆ, ತ್ಯಾಜ್ಯ ವಿಲೇವಾರಿಯಲ್ಲಿನ ವೈಫಲ್ಯ, ಹಾಗೂ ಹದಗೆಟ್ಟಿರುವ ನೈರ್ಮಲ್ಯ ವ್ಯವಸ್ಥೆಗಳು ಬೆಂಗಳೂರನ್ನು ದೇಶದ ಟಾಪ್ 5 ಕೊಳಕು ನಗರಗಳ ಪಟ್ಟಿಗೆ ಸೇರಿಸಿವೆ. ಈ ವರದಿಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಕಳವಳ ಮೂಡಿಸುವಂತೆ ಮಾಡಿದೆ.

Swachh Survekshan 2025

ದೇಶದ ಟಾಪ್ 5 ಕೊಳಕು ನಗರಗಳು ಯಾವುವು?

ಸ್ವಚ್ಛ ಸರ್ವೇಕ್ಷಣಾ 2025ರ ವರದಿಯ ಅನ್ವಯ, ದೇಶದ ಅತ್ಯಂತ ಕೊಳಕು ನಗರಗಳ ಪಟ್ಟಿಯಲ್ಲಿ ತಮಿಳುನಾಡಿನ ಪ್ರಸಿದ್ಧ ದೇವಾಲಯಗಳ ನಗರಿ 'ಮಧುರೈ' ಮೊದಲ ಸ್ಥಾನದಲ್ಲಿದೆ. ಉಳಿದಂತೆ ಟಾಪ್ 5 ನಗರಗಳ ಪಟ್ಟಿ ಈ ಕೆಳಗಿನಂತಿದೆ:

ಮಧುರೈ (ತಮಿಳುನಾಡು) - ಮೊದಲ ಸ್ಥಾನ

ಲುಧಿಯಾನ (ಪಂಜಾಬ್) - ಎರಡನೇ ಸ್ಥಾನ

ಚೆನ್ನೈ (ತಮಿಳುನಾಡು) - ಮೂರನೇ ಸ್ಥಾನ

ರಾಂಚಿ (ಜಾರ್ಖಂಡ್) - ನಾಲ್ಕನೇ ಸ್ಥಾನ

ಬೆಂಗಳೂರು (ಕರ್ನಾಟಕ) - ಐದನೇ ಸ್ಥಾನ

ಬೆಂಗಳೂರಿಗೆ ಈ ದುಸ್ಥಿತಿ ಏಕೆ ಬಂತು?

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ಹಾಗೂ ಅದಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಪ್ರತಿದಿನ ಉತ್ಪತ್ತಿಯಾಗುವ ಸಾವಿರಾರು ಟನ್ ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ರಸ್ತೆ ಬದಿಗಳಲ್ಲಿ ಕಸದ ರಾಶಿ, ಒಳಚರಂಡಿ ಸಮಸ್ಯೆಗಳು, ಕೆರೆಗಳ ಮಾಲಿನ್ಯ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯ ಕೊರತೆಯಿಂದಾಗಿ ನಗರದ ಸ್ವಚ್ಛತೆ ಸಂಪೂರ್ಣ ಹದಗೆಟ್ಟಿದೆ.

ಈ ವಿಚಾರದಲ್ಲಿ ಕೇವಲ ಆಡಳಿತ ಮಂಡಳಿಯನ್ನಷ್ಟೇ ದೂಷಿಸುವಂತಿಲ್ಲ, ಸಾರ್ವಜನಿಕರಲ್ಲೂ ನೈರ್ಮಲ್ಯದ ಬಗ್ಗೆ ನಾಗರಿಕ ಪ್ರಜ್ಞೆಯ ಕೊರತೆ ಇರುವುದು ಈ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಕಂಡ ಕಂಡಲ್ಲಿ ಕಸ ಎಸೆಯುವುದು, ಎಲ್ಲೆಂದರಲ್ಲಿ ಉಗಿಯುವುದು, ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮಾಡುವುದು ನಗರದ ಸೌಂದರ್ಯವನ್ನು ಹಾಳುಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+