ಬೆಂಗಳೂರಿನಲ್ಲಿ ಅಚ್ಚರಿಯ ಬೆಳವಣಿಗೆ ಈ ಭಾಗದಲ್ಲಿ ಭೂಮಿ ಬೆಲೆ ಭರ್ಜರಿ ಇಳಿಕೆ!
ಬೆಂಗಳೂರಿನಲ್ಲಿ ಐಟಿ ಉದ್ಯಮಗಳು ಹೆಚ್ಚಾಗಿರುವ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಆಸ್ತಿ ಬೆಲೆ ಹೆಚ್ಚಿದೆ. ಮೊದಲಿನಿಂದಲೂ ಬೆಂಗಳೂರಿನ ವಿವಿಧ ಐಟಿ ಕಂಪನಿಗಳು ಇರುವ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಲವು ಕಾರಣಕ್ಕೆ ಈ ಭಾಗಗಳಲ್ಲಿ ಭೂಮಿ ಬೆಲೆ ಇಳಿಕೆ ಆಗುತ್ತಿದೆ. ಅದಕ್ಕೆ ಹಲವು ಕಾರಣ ಇದೆ. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್ ಆಗುತ್ತಿರುವ ಸಂದರ್ಭದಲ್ಲಿಯೇ ಪ್ರಮುಖ ಪ್ರದೇಶದಲ್ಲಿ ಭೂಮಿ ಹಾಗೂ ಆಸ್ತಿಗೆ ಬೆಲೆ ಇಳಿಕೆ ಆಗುತ್ತಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.
ಬೆಂಗಳೂರಿನ ರಿಯಲ್ ಎಸ್ಟೇಟ್ ಅನ್ನು ಸದಾ ಹಾಲು ಕೊಡುವ ಕಾಮಧೇನು ಅಂತಲೇ ಪರಿಗಣಿಸಲಾಗುತ್ತದೆ. ಒಮ್ಮೆ ಬೆಂಗಳೂರಿನಲ್ಲಿ ಭೂಮಿ ಖರೀದಿ ಮಾಡಿದರೆ ಅದರಿಂದ ಕೋಟ್ಯಾಧಿಪತಿಗಳಾಗಬಹುದು ಎನ್ನುವ ಲೆಕ್ಕಾಚಾರವಿದೆ. ಬೆಂಗಳೂರಿನ ಯಾವುದೇ ಭಾಗದಲ್ಲಿ ಭೂಮಿ ಖರೀದಿ ಮಾಡಿದರೂ ಮುಂದಿನ 5 ವರ್ಷಗಳಲ್ಲಿ ಅಥವಾ 10 ವರ್ಷಗಳ ಅವಧಿಯಲ್ಲಿ ಭೂಮಿಯ ಬೆಲೆಯು ಗಗನಮುಖಿಯಾಗಬಹುದು ಎನ್ನುವ ಲೆಕ್ಕಾಚಾರವಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದೆ.

ಇದೀಗ ನಗರದ ಪ್ರಮುಖ ಪ್ರದೇಶದಲ್ಲೇ ಭೂಮಿಯ ಬೆಲೆ ಗಣನೀಯವಾಗಿ ಕಡಿಮೆ ಆಗುವುದಕ್ಕೆ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯ ಕೊರತೆ, ಮಳೆಯಿಂದ ಕೃತಕ ಪ್ರವಾಹ ಸೃಷ್ಟಿ, ಟ್ರಾಫಿಕ್ ಜಾಮ್ ಸೃಷ್ಟಿ ಹಾಗೂ ಬೆಂಗಳೂರಿನಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಅಲ್ಲದೇ ಬೆಂಗಳೂರಿನಲ್ಲಿ ಐಟಿ ಕ್ಷೇತ್ರದಲ್ಲಿ ಭಾರೀ ಆತಂಕ ಮೂಡಿದೆ. ಎಐನಿಂದ ಹಲವರು ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಇದರಿಂದ ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿ ಬೆಲೆ ಇಳಿಕೆಯಾಗುತ್ತಿದೆ.
ಐಟಿ ಕಾರಿಡಾರ್‌ನಲ್ಲಿ ಮೂಲಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಆಗುತ್ತಿಲ್ಲ. ಹೀಗಾಗಿ, ಈ ಭಾಗದಲ್ಲಿ ಭೂಮಿ ಖರೀದಿ ಮಾಡಿದರೆ ಭವಿಷ್ಯದಲ್ಲಿ ಭೂಮಿ ಹಾಗೂ ಆಸ್ತಿಯ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇಲ್ಲ ಎಂದು ಹಲವು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಕಸದ ಸಮಸ್ಯೆ, ನೀರಿನ ಸಮಸ್ಯೆ ಹಾಗೂ ಮಳೆ ಸಂದರ್ಭದಲ್ಲಿ ಪ್ರವಾಹ ಸೃಷ್ಟಿ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ, ಸರ್ಜಾಪುರ, ಯಲಹಂಕ ಇಲ್ಲವೇ ಬಾಗಲೂರು ಸೇರಿದಂತೆ ವಿವಿಧ ಭಾಗದಲ್ಲಿ ಭೂಮಿ ಖರೀದಿ ದೀರ್ಘಕಾಲದಲ್ಲಿ ಲಾಭ ತರುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈ ಭಾಗದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಆಸ್ತಿ ಹಾಗೂ ಭೂಮಿ ಖರೀದಿ ಪ್ರಕ್ರಿಯೆ ಜೋರಾಗಿದೆ.
ಅಲ್ಲದೇ ಈ ಭಾಗದಲ್ಲಿ ಫ್ಲಾಟ್ ಅಥವಾ ಮನೆಗಳನ್ನು ಖರೀದಿ ಮಾಡುವುದಕ್ಕಿಂತಲೂ ಆಸ್ತಿ / ಜಾಗವನ್ನು ಖರೀದಿ ಮಾಡುವುದು ಉತ್ತಮ ಆಯ್ಕೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಬೆಂಗಳೂರಿನ ಒಂದು ಕಡೆ ಭೂಮಿ ಹೆಚ್ಚಾದರೆ ಮತ್ತೊಂದು ಕಡೆ ಭೂಮಿ ಬೆಲೆ ಇಳಿಕೆಯಾಗುತ್ತಿದೆ. ಇದು ರಿಯಲ್ ಎಸ್ಟೇಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications