• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಶುರುವಾಯ್ತು ನೀರಿಗೆ ಹಾಹಾಕಾರ, ನೀರಿನ ಟ್ಯಾಂಕರ್ ಬೆಲೆ ಗಗನಕ್ಕೆ

|

ಬೆಂಗಳೂರು, ಏಪ್ರಿಲ್ 7: ಬೆಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ, ಏಕಾಏಕಿ ನೀರಿನ ಟ್ಯಾಂಕರ್ ಬೆಲೆಯೂ ಗಗನಕ್ಕೇರಿದೆ. ಒಂದು ಟ್ಯಾಂಕರ್‌ಗೆ 500-900 ರೂ. ನೀಡಿದರೆ 6 ಸಾವಿರ ಲೀಟರ್ ನೀರು ನೀಡುತ್ತಾರೆ.

   ಗಗನಕ್ಕೆ ಏರುತ್ತಿದೆ ನೀರಿನ ಟ್ಯಾಂಕರ್ ಬೆಲೆ !! | Oneindia Kannada

   ಬೆಂಗಳೂರು ಜಲ ಮಂಡಳಿಯು 7.4 ಲಕ್ಷ ಮಂದಿಗೆ ಪೈಪ್‌ಗಳ ಮೂಲಕ 1440 ಎಂಎಲ್‌ಡಿ ಕಾವೇರಿ ನೀರನ್ನು ಸರಬರಾಜು ಮಾಡುತ್ತಿದೆ. ಕಾವೇರಿ ನೀರು ಇಲ್ಲದ ಹಳ್ಳಿಗಳಲ್ಲಿ ಟ್ಯಾಂಕರ್ ನೀರು ಬಳಕೆ ಮಾಡಲಾಗುತ್ತಿದೆ.

   ಬೆಂಗಳೂರಿಗರಿಗೆ ಗುಡ್‌ ನ್ಯೂಸ್: ಈ ಬೇಸಿಗೆಯಲ್ಲಿ ನೀರು ಪೂರೈಕೆ ನಿಲ್ಲದು!

   ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಇನ್ನೂ ಪೈಪ್‌ಗಳ ಮೂಲಕ ನೀರು ಸರಬರಾಜು ಆರಂಭವಾಗಿಲ್ಲ. ಈ ಪ್ರದೇಶಗಳಲ್ಲಿ ಬೋರ್‌ವೆಲ್ ಅಥವಾ ಟ್ಯಾಂಕರ್‌ಗಳನ್ನು ಜನ ನಂಬಿದ್ದಾರೆ.

   ಕಡಿಮೆ ಜಲ ಉತ್ಪತ್ತಿಯಿಂದಾಗಿ ಸಾಕಷ್ಟು ಬೋರ್‌ವೆಲ್‌ಗಳಲ್ಲಿ ನೀರು ಆರಿ ಹೋಗಿದೆ. ಕಳೆದ ವರ್ಷ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಲ ಮಂಡಳಿ ಹೇಳಿದೆ.

   2023-24ರಲ್ಲಿ 110 ಹಳ್ಳಿಗೆ 775 ಎಂಎಲ್‌ಡಿಯಷ್ಟು ಕಾವೇರಿ ನೀರು ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿ ಹೇಳಿದೆ.

   ಟ್ಯಾಂಕರ್‌ ನೀರನ್ನು ನಂಬಲು ಸಾಧ್ಯವಿಲ್ಲ

   ಟ್ಯಾಂಕರ್‌ ನೀರನ್ನು ನಂಬಲು ಸಾಧ್ಯವಿಲ್ಲ

   ಒಂದು ಟ್ಯಾಂಕರ್ ನೀರಿಗೆ ಸುಮಾರು 600 ರಿಂದ 900 ರೂ. ಕೊಡುವುದು ಹೌದು ಆದರೆ ನೀರಿನ ಗುಣಮಟ್ಟದ ಕುರಿತು ನಂಬಿಕೆ ಇಲ್ಲ. ನಗರದಲ್ಲಿ ಸುಮಾರು 1200 ಟ್ಯಾಂಕರ್‌ಗಳಿವೆ. ಅವುಗಳಲ್ಲಿ ಕೇವಲ 200 ಟ್ಯಾಂಕರ್‌ಗಳಿಗೆ ಮಾತ್ರ ಬಿಬಿಎಂಪಿ ಅನುಮತಿ ನೀಡಿದೆ.

   ನೀರಿನ ಗುಣಮಟ್ಟ ನೋಡಿ ಒಪ್ಪಿಗೆ

   ನೀರಿನ ಗುಣಮಟ್ಟ ನೋಡಿ ಒಪ್ಪಿಗೆ

   ಉಳಿದ ಟ್ಯಾಂಕರ್‌ಗಳಿಗೆ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಬಳಿಕ ಒಪ್ಪಿಗೆ ನೀಡಲಾಗುವುದು ಎಂದು ಬಿಬಿಎಂಪಿ ಹೇಳುತ್ತಿದ್ದು, ಇಲ್ಲಿಯವರೆಗೂ ಅನುಮತಿ ಲಭ್ಯವಾಗಿಲ್ಲ. ಹಾಗೆಯೇ ಎಲ್ಲಾ ಟ್ಯಾಂಕರ್‌ಗಳಿಗೂ ಒಂದು ದರ ನಿಗದಿ ಮಾಡುವುದಾಗಿ ಹೇಳಲಾಗಿತ್ತು ಅದೂ ಕೂಡ ಇಲ್ಲಿಯವರೆಗೂ ಸಾಧ್ಯವಾಗಿಲ್ಲ.

   ಅನಿವಾರ್ಯವಿದ್ದಲ್ಲಿ ನೀರು ಸಿಗುವುದಿಲ್ಲ

   ಅನಿವಾರ್ಯವಿದ್ದಲ್ಲಿ ನೀರು ಸಿಗುವುದಿಲ್ಲ

   ಹೆಚ್ಚು ಹಣ ನೀಡಿದರೂ ಕೂಡ ನಮಗೆ ಬೇಕಾದ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ನೀರು ಸಿಗುವುದಿಲ್ಲ. ಸಂಜೆಯೊಳಗೆ ನೀರು ಬೇಕು ಎಂದು ಕರೆ ಮಾಡಿದರೆ ಒಂದು ದಿನ ಅಥವಾ ಎರಡು ದಿನ ನೀರಿಗಾಗಿ ಕಾಯಬೇಕಾಗುತ್ತದೆ. ಇದನ್ನು ಗಮನಿಸಿದಾಗ ಮುಂದಿರುವ ದಿನಗಳು ಇನ್ನೂ ಕೆಟ್ಟದಾಗಿವೆ ಎಂಬುದು ಅರ್ಥವಾಗುತ್ತದೆ ಎಂದು ವೈಟ್‌ಫೀಲ್ಡ್ ನಿವಾಸಿಯೊಬ್ಬರು ಹೇಳುತ್ತಾರೆ.

   ಡೀಸೆಲ್ ಬೆಲೆ ಹೆಚ್ಚಳವಾಗಿದೆ

   ಡೀಸೆಲ್ ಬೆಲೆ ಹೆಚ್ಚಳವಾಗಿದೆ

   ಒಂದೆಡೆ ಡೀಸೆಲ್ ಬೆಲೆ ಹೆಚ್ಚಳವಾಗಿದೆ, ಮತ್ತೊಂದೆಡೆ ಬೋರ್‌ವೆಲ್‌ಗಳಿಂದ ಮೋಟರ್ ಮೂಲಕ ನೀರನ್ನು ಟ್ಯಾಂಕರ್‌ಗೆ ಹಾಕಬೇಕು, ವಿದ್ಯುತ್ ದರ ಕೂಡ ಹೆಚ್ಚಾಗಿದೆ, ಟ್ಯಾಂಕರ್‌ಗಳಿಗೆ ಬೇಡಿಕೆ ಇದೆ ಆದರೆ ಬೋರ್‌ವೆಲ್‌ಗಳು ಒಣಗುತ್ತಿವೆ. ನೀರು ಸಿಗುತ್ತಿಲ್ಲ ಎಂದು ಟ್ಯಾಂಕರ್‌ ಆಪರೇಟರ್‌ಗಳು ಹೇಳುತ್ತಾರೆ.

   English summary
   Bengaluru: The Sudden Demand Means That There Is No Guarantee Of The Quality Of Water, summer rises water tankers are touching new heights every day.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X