ವಿಡಿಯೋ: ರ‍್ಯಾಂಪ್ ವಾಕ್ ಮಾಡುತ್ತಲೇ ಪ್ರಾಣಬಿಟ್ಟ ವಿದ್ಯಾರ್ಥಿನಿ
ಬೆಂಗಳೂರು, ಅಕ್ಟೋಬರ್ 19: ವಿದ್ಯಾರ್ಥಿನಿಯೊಬ್ಬಳು ರ‍್ಯಾಂಪ್ ವಾಕ್ ಅಭ್ಯಾಸ ಮಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪೀಣ್ಯ ಸಮೀಪದ ಆಚಾರ್ಯ ಕಾಲೇಜಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಶಾಲಿನಿ ಎಂಬಿಎ ವಿದ್ಯಾರ್ಥಿನಿಯಾಗಿದ್ದಳು. ವಿದ್ಯಾರ್ಥಿನಿಯರು ಫ್ರೆಷರ್ಸ್‌ಡೇ ಅಂಗವಾಗಿ ರ‍್ಯಾಂಪ್ ವಾಕ್ ಅಭ್ಯಾಸ ಮಾಡುತ್ತಿದ್ದರು. ಶಾಲಿನಿ ಕೂಡ ರ‍್ಯಾಂಪ್ ವಾಕ್ ಮುಗಿಸಿ ಇನ್ನೇನು ಹೋಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ಕುಸಿದು ಬಿದ್ದಿದ್ದಾಳೆ.

ಘಟನೆ ಎಲ್ಲವೂ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಕೆ ಕುಸಿದುಬಿದ್ದ ತಕ್ಷಣವೇ ಸ್ನೇಹಿತೆಯರೆಲ್ಲಾ ಸೇರಿ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸೆಕ್ಷನ್ 174(ಸಿ) ಅಡಿಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡೆಪ್ಯುಟಿ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.












Click it and Unblock the Notifications