ಸಮಯಪ್ರಜ್ಞೆ ಮೆರೆದ ಪೊಲೀಸಪ್ಪನಿಗೆ ನಮ್ಮ ಓದುಗರ ಉಘೇ..ಉಘೇ..

ಕನ್ನಡಿಗರು ಔದಾರಿಗಳು, ಸ್ವಾಭಿಮಾನಿಗಳು, ಸಹಾಯಕ್ಕೂ ಸಿದ್ದ, ಸಮರಕ್ಕೂ ಸಿದ್ದ ಎನ್ನುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿವೆ.

'ತಮಿಳುನಾಡು' ಮೂಲದ ಮಹಿಳೆಗೆ ಹೆರಿಗೆ ನೋವು ಉಂಟಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಆಕೆಯನ್ನು ಕಾಪಾಡಿ, ಹೆಣ್ಣು ಮಗುವಿಗೆ ಜನ್ಮ ನೀಡಲು ಅನುಕೂಲ ಮಾಡಿಕೊಟ್ಟು ಬೆಂಗಳೂರಿನ ಬ್ಯಾಟರಾಯನಪುರದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಗೋಪಾಲಕೃಷ್ಣ ಮಾನವೀಯತೆ ಮೆರೆದಿದ್ದರು.

ಈ ಲೇಖವನ್ನು ನಾವು ಅಂತರ್ಜಾಲದಲ್ಲಿ ಪ್ರಕಟಿಸಿದ್ದೆವು, ಅಂತೆಯೇ ಸಾಮಾಜಿಕ ತಾಣದಲ್ಲೂ ಅದನ್ನು ಶೇರ್ ಮಾಡಿದ್ದೆವು. ಇದಕ್ಕೆ ನಮ್ಮ ಓದುಗರು ಪ್ರವಾಹೋಪಾದಿಯಲ್ಲಿ ಸ್ಪಂದಿಸಿದ್ದಾರೆ. (ಸಮಯಪ್ರಜ್ಞೆ ಮೆರೆದ ಬೆಂಗಳೂರು ಟ್ರಾಫಿಕ್ ಪೊಲೀಸ್)

Story of Police helped women for delivery, vastly appreciated by readers

ಕರ್ತವ್ಯ ನಿರತ ಪೊಲೀಸಪ್ಪನಿಗೆ ಭರಪೂರ ಶಹಬ್ಬಾಸ್ ಗಿರಿ ಕೊಟ್ಟಿರುವ ನಮ್ಮ ಓದುಗರು, ಇಂತಹ ಸುದ್ದಿಯನ್ನು ತಿಳಿಸಲು ಯಾವ ನ್ಯೂಸ್ ಚಾನಲ್ ನವರಿಗೂ ಸಮಯವಿಲ್ಲ. ಎಲ್ಲಾ ಹುಚ್ಚ ವೆಂಕಟನ ಹಿಂದೆ ಬಿದ್ದಿದ್ದಾರೆ ಎಂದು ಅಲ್ಲಲ್ಲಿ ಅಣಕವೂ ಆಡಿದ್ದಾರೆ.

ಕಚಡಾ ನಮ್ಮ ವ್ಯವಸ್ಥೆಯ ಮಧ್ಯೆ, ಇಂತಹ ಒಳ್ಳೆ ಪೊಲೀಸರೂ ಇರ್ತಾರೆ ಅಂತ ಗೊತ್ತಾಯ್ತು, ನೂರಾರು ವರ್ಷ ನಗು ನಗುತ್ತಾ ಬಾಳಿಯೆಂದು ಓದುಗರು ತುಂಬು ಹೃದಯದಿಂದ ಗೋಪಾಲಕೃಷ್ಣ ಅವರಿಗೆ ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ (ಫೇಸ್ ಬುಕ್) ಪ್ರಕಟವಾದ ಈ ಸ್ಟೇಟಸಿಗೆ ಬಂದಂತಹ ನೂರಾರು ಕಾಮೆಂಟುಗಳಲ್ಲಿ ಆಯ್ದ ಹತ್ತು ಕಾಮೆಂಟನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇವೆ.

ಚಂದನ್ ಗೌಡ
ಮಾನವೀಯತೆ ಮೆರೆದ ನಿಮಗೆ ಮತ್ತು ನಿಮ್ಮ ಕುಟುಂಬವನ್ನು ಭಗವಂತ ಚೆನ್ನಾಗಿ ಇಟ್ಟಿರ್ಲಿ.

ಶ್ರೀಪಾದ ರಾವ್
nijavaglu ivaru janapalakaru. namaskaraswamy. Devaru nimmanu 100 kala sukavagi ittiarli. nimmanthavaru irodikke innu male able channagirodu. ( ನಿಜವಾಗಲೂ ಇವರು ಜನಪಾಲಕರು, ದೇವರು ನಿಮ್ಮನ್ನು ನೂರು ಕಾಲ ಸುಖವಾಗಿ ಇಟ್ಟಿರಲಿ. ನಿಮ್ಮಂತವರು ಇರೋದಕ್ಕೆ ಇನ್ನೂ ಮಳೆ ಬೆಳೆ ಚೆನ್ನಾಗಿರೋದು)

Suresh Gowda MB
ಹೆರಿಗೆ ಸಕ್ಸಸ್ ಆಗಿದ್ದಕ್ಕೆ ಓಕೆ... ಇಲ್ಲಾ ಅಂದಿದ್ರೆ ಆ ಪೊಲೀಸಪ್ಪನ ಪರಿಸ್ಥಿತಿ ಏನ್ ಆಗುತ್ತಿತ್ತು ಅಂತ ಯೋಚಿಸಿದ್ದೀರ? ಜನ, ಮೀಡಿಯಾಗಳು ಬೈತಾ ಇದ್ರು, ಹೆರಿಗೆ ಮಾಡಿಸೋಕೆ ಇವನೇನು ಡಾಕ್ಟರ? ಅಥವಾ ನರ್ಸ? ಹಾಗೆ ಹೀಗೆ ಅಂತ.. ಆಮೇಲೆ ಪೊಲೀಸ್ ಇಲಾಖೆ ನಮ್ಮ ಇಲಾಖೆಗೆ ಕೆಟ್ಟ ಹೆಸರು ತಂದೆ ಅಂತ ಹೇಳಿ ಕೆಲಸದಿಂದ ತೆಗೆದು ಹಾಕೋರು.. ಇಷ್ಟೆಲ್ಲ ಕಷ್ಟದ ನಡುವೆ ಇಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಅದಕ್ಕೆ ಹ್ಯಾಟ್ಸಫ್ ಹೇಳಲೇಬೇಕು ..

Story of Police helped women for delivery, vastly appreciated by readers

Subhan Kag Subhan Kag
ನಾವು ಕನ್ನಡಿಗರು !!!! ಎಂತ ಸಹಾಯ ಕ್ಕೂ ನಾವು ಸಿದ್ದ ಅನ್ನೋದು ತೋರಿಸಿದ್ದೀರಿ ಸರ್ !!!! ರಿಯಲಿ ಗ್ರೇಟ್ ಜಾಬ್ !!! ಇದನ್ನ ತಿಳಿಸಲು ಯಾವ ನ್ಯೂಸ್ ಚಾನಲ್ ಗು ಸಮಯವಿಲ್ಲಾ .ಎಲ್ಲಾ ಹುಚ್ಚಾನ ಹಿಂದೆ ಬಿದ್ದಿದ್ದಾರೆ !!!!

ರಕ್ಷಿತ್ ರಕ್ಷಿ
Sar evaga kithkond thino Police sar mada nev great bedi Sar ( ಸಾರ್ ಈವಾಗ ಕಿತ್ಕೊಂಡು ತಿನ್ನೋ ಪೊಲೀಸರ ಮಧ್ಯೆ ನೀವು ಗ್ರೇಟ್ ಬಿಡಿ ಸಾರ್)

Vageesha Matad
ಈ. ಪುಣ್ಯದ ಕೆಲಸಮಾಡಿದ ಪೋಲಿಸ್ ಅಧಿಕಾರಿಗೆ ದೇವರು ಉತ್ತಮ ಆರೋಗ್ಯ ವನ್ನು ಕೊಡಲಿ.

Sunitha SA
tat is not a manaveeyate ,tat s duty of them adake taane policenavarana prajegalha rakshanegoskara nemaka madodu manaveeyate badalu kartavya andre ok! ( ಅದು ಮಾನವೀಯತೆಯಲ್ಲ, ಅದು ಅವರ ಕೆಲಸ ತಾನೇ, ಪೊಲೀಸರು ಪ್ರಜೆಗಲ ರಕ್ಷಣೆಗೋಸ್ಕರ ನೇಮಕ ಮಾಡೋದು, ಮಾನವೀಯತೆ ಬದಲು ಕರ್ತ್ಯವ್ಯ ಅಂದರೆ ಓಕೆ)

L Pavan Kumar Purushotham
Aaa tayi mathhu maguvu nimma ee runavanna endigu teerisalararu sir a great salute to you sir ( ಆ ತಾಯಿ ಮತ್ತು ಮಗುವು ನಿಮ್ಮ ಈ ಖುಣವನ್ನು ಎಂದಿಗೂ ತೀರಿಸಲಾರು ಸರ್)

Balachandra Kotralli S
sir kettdagidre tumba jana bytidro media adanne highlate madtittu adre idu highlate aglilla realy hats up sir ( ಕೆಟ್ಟದಾಗಿದ್ರೆ, ತುಂಬಾ ಜನ ಬಯ್ತತಾಯಿದ್ರು, ಮಿಡಿಯಾ ಅದನ್ನೇ ಹೈಲೈಟ್ ಮಾಡ್ತಾ ಇದ್ರು)

ಶ್ರೀಕಾಂತ ಗೋಟ ಬಡಾಕೆರೆ
Hats off to you sir and you done wonderful job than our politicians and you deserve more appreciation.. ( ಉತ್ತಮ ಕೆಲಸ ಸರ್, ನೀವು ಅಭಿನಂದನಾರ್ಹರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+