Bengaluru Airport Metro: ಬೆಂಗಳೂರು ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಕುರಿತು ರಾಜ್ಯ ಸರ್ಕಾರ ಮಹತ್ವದ ಸೂಚನೆ
Bengaluru Airport Metro: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ನಗರದ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನೇ ಅವಲಂಬನೆ ಮಾಡಿದ್ದರೆ. ಇನ್ನು ನಗರದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಮೆಟ್ರೋ ಮಾರ್ಗ ವಿಸ್ತರಣೆ ಆಗುತ್ತಲೇ ಇದೆ. ಇದೀಗ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದ ಕುರಿತು ರಾಜ್ಯದ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಬಹುನಿರೀಕ್ಷಿತ ಯೋಜನೆಗಳಲ್ಲಿ ಇಂದಾಗಿದೆ. ಇನ್ನು ಇಷ್ಟು ದಿನ ಈ ಮಾರ್ಗದ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದನ್ನು ಅತೀ ಬೆಗನೇ ಮುಗಿಸುವಂತೆ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.

ಸಿಲ್ಕ್ ಬೋರ್ಡ್-ಕೆ.ಆರ್ ಪುರ, ಕೆ.ಆರ್ ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಆಮೇಗತಿಯಲ್ಲಿ ಸಾಗಿದೆ. ಈ ಹಿನ್ನೆಲೆ ಇದೀಗ ರಾಜ್ಯ ಸರ್ಕಾರ ಕಾಮಗಾರಿಗೆ ವೇಗ ನೀಡಲು ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದು, 2026ರ ಜೂನ್‌ನೊಳಗೆ ಕಾಮಗಾರಿ ಮುಗಿದು ಮೆಟ್ರೋ ರೈಲು ಸಂಚಾರ ಮಾಡಬೇಕೆಂದು ಸೂಚನೆ ನೀಡಿದೆ.
ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಕಾಮಗಾರಿಯನ್ನು ವೇಗ ನೀಡಲು ಮುಂದಾಗಿದ್ದಾರೆ. ಈ ಮೂಲಕ ಏರ್ಪೋರ್ಟ್ ಮಾರ್ಗದಲ್ಲಿ ಸಂಚಾರ ಮಾಡುವವರಿಗೆ ಗುಡ್ ನ್ಯೂಸ್ ಕೊಡಲು ಸರ್ಕಾರ ಮುಂದಾಗಿದೆ. ಸಿಲ್ಕ್ ಬೋರ್ಡ್-ಕೆ.ಆರ್ ಪುರ-ಏರ್ಪೋರ್ಟ್ ಮೆಟ್ರೋ 58.19 ಕಿಲೋ ಮೀಟರ್ ವಿಸ್ತೀರ್ಣ ಇದ್ದು, ಈ ಮಾರ್ಗದಲ್ಲಿ 30 ಮೆಟ್ರೋ ನಿಲ್ದಾಣಗಳಿರಲಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್ ಪುರ 19.75 ಕಿಲೋ ಮೀಟರ್ ಇರಲಿದ್ದು, 13 ಮೆಟ್ರೋ ನಿಲ್ದಾಣಗಳಿರಲುದೆ. ಕೆ.ಆರ್ ಪುರ-ಏರ್ಪೋರ್ಟ್ 38.44 ಕಿಲೋ ಮೀಟರ್ ವಿಸ್ತೀರ್ಣ ಆಗಿದ್ದು, 17 ಮೆಟ್ರೋ ನಿಲ್ದಾಣಗಳಿರಲಿವೆ.
ನೀಲಿ ಮಾರ್ಗವನ್ನು ಬರೋಬ್ಬರಿ 14,788 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುಯತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಟರ್ಮಿನಲ್ 1 ಮತ್ತು 2 ನಡುವೆ ಮೆಟ್ರೋ ನಿಲ್ದಾಣ ನಿರ್ಮಾಣ ಆಗಲಿದೆ. ಎರಡು ಟರ್ಮಿನಲ್‌ಗೆ ಬರುವ ಮತ್ತು ಹೋಗುವಾಗ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೆಂಪೇಗೌಡ ವಿಮಾನ ನಿಲ್ದಾಣದ ಎರಡು ಟರ್ಮಿನಲ್‌ಗಳ ನಡುವೆ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಎರಡು ಟರ್ಮಿನಲ್‌ಗಳಿಗೆ ಸಂಪರ್ಕ ಕಲ್ಪಿಸಲು ಫ್ಲೈ ಓವರ್ ಮತ್ತು ಎಸ್ಕಲೇಟರ್ ಅನ್ನು ಸಹ ಮಾಡಲಾಗುತ್ತದೆ.
ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ ಕ್ಯಾಬ್‌ನಲ್ಲಿನಲ್ಲಿ 1,000-3,000 ರೂಪಾಯಿವರೆಗೆ ಹಣ ನೀಡಬೇಕಾಗುತ್ತದೆ. ಇಷ್ಟೆಲ್ಲ ಹಣ ಕೊಟ್ಟರೂ ಸಹ ಕೆಲವು ವೇಳೆ ಗಂಟೆಗಟ್ಟಲ್ಲೇ ಟ್ರಾಫಿಕ್‌ನಲ್ಲೇ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿಡುತ್ತದೆ. ನೀಲಿ ಮಾರ್ಗದ ಮೆಟ್ರೋ ಸಂಚಾರ ಆರಂಭ ಆದರೆ ಈ ಯಾವ ಸಮಸ್ಯೆಗಳು ಇಲ್ಲದಂತಾಗುತ್ತದೆ. ಅಲ್ಲದೆ, ಹಣ ಕೂಡ ಉಳಿತಾಯ ಆದಂತಾಗಲಿದ್ದು, ಪ್ರಯಾಣಿಕರು ಯಾವುದೇ ಕಿರಿಕಿರಿ ಇಲ್ಲದೆ ವಿಮಾನ ನಿಲ್ದಾಣ ತಲುಪಲು ಈ ಮಾರ್ಗದ ಮೆಟ್ರೋ ತುಂಬಾ ಅನುಕೂಲವಾಗಲಿದೆ. ಆದ್ದರಿಂದ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಯಾವಾಗ ಆರಂಭವಾಗಲಿದೆಯೋ ಎಂದು ಪ್ರಯಾಣಿಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ.












Click it and Unblock the Notifications