ಖಾಸಗಿ ಚಾಲಕರಿಗೆ ಗುಡ್ ನ್ಯೂಸ್: ಅಭಿವೃದ್ದಿ ಮಂಡಳಿ ಸ್ಥಾಪನೆಗೆ ಸರ್ಕಾರ ಅಸ್ತು

ಬೆಂಗಳೂರು, ನವೆಂಬರ್‌ 21: ಸಮಸ್ತ ಖಾಸಗಿ ಚಾಲಕರು ಹಲವು ವರ್ಷಗಳಿಂದ ಸರ್ಕಾರದ ಮುಂದಿಟ್ಟಿದ್ದ ಬೇಡಿಕೆಯನ್ನು ರಾಜ್ಯ ಸರ್ಕಾರ ಈಗ ಈಡೇರಿಸಲು ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಚಾಲಕ ವೃಂದವು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ತಮಗೂ ಒಂದು ಅಭಿವೃದ್ದಿ ಮಂಡಳಿ ಬೇಕು ಅಂತಾ ಸರ್ಕಾರದ ಮುಂದೆ ಖಾಸಗಿ ಚಾಲಕರು ಪಟ್ಟುಹಿಡಿದಿದ್ದರು. ಜೊತೆಗೆ ಹಲವು ಬಾರಿ ರಸ್ತೆಗಿಳಿದು ಹೋರಾಟವನ್ನು ಸಹ ಮಾಡಿದ್ದರು. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೆ ಸದ್ಯ ಈಗ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಮಂಡಳಿ ಸ್ಥಾಪನೆಗೆ ಮುಂದಾಗಿದೆ.

set-up-a-private-driver-development-board

ಮಂಡಳಿ ಸ್ಥಾಪನೆ ಸಂಬಂಧ ಈಗಾಗಲೇ ಕಾರ್ಮಿಕ ಇಲಾಖೆ ಜೊತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ರೆಡ್ಡಿ ಮಾತುಕತೆ ಕೂಡ ನಡೆಸಿದ್ದಾರೆ. ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಮಂಡಳಿ ಸ್ಥಾಪನೆಗೆ ಮುಂದಾಗಿರುವ ಸರ್ಕಾರ ಈಗಾಗಲೇ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಕೂಡ ಚರ್ಚೆ ನಡೆದಿದ್ದು, ಮಂಡಳಿ ಸ್ಥಾಪನೆ ಬಗ್ಗೆಯೂ ತೀರ್ಮಾನ ಆಗಿದೆ.

ಕಾರ್ಮಿಕ ಇಲಾಖೆ ಅಡಿ ಪ್ರತ್ಯೇಕ ಮಂಡಳಿಗೆ ಚರ್ಚೆ ಆಗಿದ್ದು, ಶೀಘ್ರದಲ್ಲೇ ಕ್ಯಾಬಿನೆಟ್ ನಲ್ಲೂ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದಾರೆ. ಇನ್ನೂ ಚಾಲಕರ ಅಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಅನುಕೂಲ ಆಗಲಿದೆ. ಚಾಲಕರ ಮಕ್ಕಳ ವಿದ್ಯಾಭ್ಯಾಸ ಇಂದ ಹಿಡಿದು ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಪ್ರಯೋಜನ ಆಗಲಿದೆ.

set-up-a-private-driver-development-board

ಪ್ರತ್ಯೇಕ ಮಂಡಳಿಯಿಂದ ಅನುಕೂಲ

- ಚಾಲಕ ಅಭಿವೃದ್ಧಿ ಮಂಡಳಿಯಿಂದ ಅನುಕೂಲ

- ಕಡಿಮೆ ಬಡ್ಡಿದರದಲ್ಲಿ ಚಾಲಕರಿಗೆ ಸಾಲ ಸೌಲಭ್ಯ

- ಚಾಲಕರಿಗೆ ಆರೋಗ್ಯ ವಿಮೆ, ಅಪಘಾತ ವಿಮೆ

- ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ಪ್ರೋತ್ಸಾಹ ಧನ

- ಹೆಣ್ಣು ಮಕ್ಕಳ ಮದುವೆಗೆ ಸಾಲ ಸೌಲಭ್ಯ ಲಭ್ಯ

- ಮನೆ ಖರೀದಿ ಮಾಡಲು ಸಾಲದ ಸೌಲಭ್ಯ

ಸೆಪ್ಟೆಂಬರ್ 11 ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟ ನಡೆಸಿದ ಬೆಂಗಳೂರು ಬಂದ್ ಅಲ್ಲಿ ಪ್ರಮುಖವಾಗಿ ಚಾಲಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲು ಒತ್ತಾಯ ಮಾಡಲಾಯಿತು. ಇದರಿಂದ ಏನೇನು ಲಾಭ ಅಂತ ನೋಡೋದಾದರೆ ಚಾಲಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗುತ್ತದೆ. ಚಾಲಕರಿಗೆ ಆರೋಗ್ಯ ವಿಮೆ ಹಾಗೂ ಅಪಘಾತ ವಿಮೆ ಲಭ್ಯ ಆಗುತ್ತದೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಕೂಡ ಪ್ರೋತ್ಸಾಹ ಧನ ನೀಡಲಾಗುತ್ತದೆ. ಮನೆ ಖರೀದಿ ಮಾಡಲು ಕೂಡ ಸಾಲ ಸೌಲಭ್ಯ ನೀಡಲಾಗುತ್ತದೆ.

ಇನ್ನು ಚಾಲಕರ ಅಭಿವೃದ್ಧಿ ಮಂಡಳಿ ರಚನೆ ಇರಬೇಕು ಎನ್ನುವುದರ ಬಗ್ಗೆ ಸಚಿವರಿಗೆ ಖಾಸಗಿ ಸಾರಿಗೆ ಸಂಘಟನೆ ಮನವಿ ಮಾಡಿಕೊಂಡಿದೆ. ಒಟ್ಟಿನಲ್ಲಿ ಚಾಲಕರ ಅಭಿವೃದ್ಧಿ ಮಂಡಳಿ ಮಾಡಬೇಕು ಎನ್ನುವುದು ಚಾಲಕರ ಹಲವು ದಿನದ ಒತ್ತಾಯ. ಕೊನೆಗೂ ಈ ಒತ್ತಾಯಕ್ಕೆ ಮಣಿದು ಸರ್ಕಾರ ಚಾಲಕ ಅಭಿವೃದ್ಧಿ ಮಂಡಳಿ ಮುಂದಾಗಿದ್ದು ಖುಷಿಯ ಸಂಗತಿಯೇ ಆದರೆ ಮಂಡಳಿ ರಚನೆಯೂ ವಿಳಂಬ ಮಾಡದೇ ಶೀಘ್ರ ರಚನೆ ಆಗಲಿ ಎನ್ನುವುದು ಚಾಲಕರ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+