ರಾಜ್ಯ ವಕೀಲರ ಪರಿಷತ್ ಚುನಾವಣೆ: ವೃತ್ತಿ ನಿರತ ವಕೀಲರಿಗೆ ಅವಕಾಶ

ಬೆಂಗಳೂರು, ಮಾರ್ಚ್ 27: ರಾಜ್ಯ ವಕೀಲರ ಪರಿಷತ್ 25 ಸದಸ್ಯ ಸ್ಥಾನಗಳಿಗೆ ಮಂಗಳವಾರ(ಮಾ.27) ಚುನಾವಣೆ ನಡೆಯಲಿದೆ.

ರಾಜ್ಯಾದ್ಯಂತ ಇರುವ 280 ಮತದಾನ ಕೇಂದ್ರಗಳಲ್ಲಿ 43,886 ವೃತ್ತಿನಿರತ ವಕೀಲರು ಮತ ಚಲಾಯಿಸಲಿದ್ದಾರೆ. ಬೆಂಗಳೂರು ನಗರದ 12 ಸಾವಿರ ಮತದಾರರು ನಗರ ಸಿವಿಲ್ ಕೋರ್ಟ್ ಆವರಣದ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸುವರು.

ರಾಜ್ಯದ ಇತರೆ ಸ್ಥಳೀಯ ವಕೀಲರ ಸಂಘಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. 99 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ರಾಜ್ಯದ ವಕೀಲರ ಪರಿಷತ್ ನಲ್ಲಿ 88 ಸಾವಿರಕ್ಕೂ ಅಧಿಕ ವಕೀಲರು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ವೃತ್ತಿನಿರತ ದೃಢೀಕರಣ ಪತ್ರ ಸಲ್ಲಿಸಿದ ವಕೀಲರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ ಎಂದು ಚುನಾವಣಾಧಿಕಾರಿ ಎ.ಜಿ. ಶಿವಣ್ಣ ತಿಳಿಸಿದ್ದಾರೆ.

State Bar council election today

ಸಿಒಪಿ ಜಾರಿಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಚುನಾವಣೆಯ ಫಲಿತಾಂಶವು ಬಾಕಿ ಇರುವ ಅರ್ಜಿಗಳ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುವುದಾಗಿಯೂ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. 2016ರ ನವೆಂಬರ್ 30ರೊಳಗೆ ಸಿಒಪಿ ಸಲ್ಲಿಸಿರುವ ವಕೀಲರಿಗೆ ಮಾತ್ರ ಮತದಾನದ ಹಕ್ಕು ಕಲ್ಪಿಸುವಂತೆ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+