ವಿದ್ಯಾರ್ಥಿಗಳೇ ಬಿಎಂಟಿಸಿ ಬಸ್‌ಪಾಸ್ ಬೇಕಿದ್ದರೆ ಶಾಂತಿನಗರಕ್ಕೆ ಹೋಗಿ
ಬೆಂಗಳೂರು, ಡಿಸೆಂಬರ್ 5: ಬಿಎಂಟಿಸಿ ವಿದ್ಯಾರ್ಥಿಗಳ ಬಸ್‌ಪಾಸ್ ವಿತರಣೆಗೆ ಸರ್ಕಾರ ಸಾಕಷ್ಟು ವಿಳಂಬ ಮಾಡಿತ್ತು, ಸ್ಮಾರ್ಟ್ ಕಾರ್ಡ್ ಮಾದರಿಯ ಬಸ್‌ಪಾಸ್ ವಿತರಣೆಗೆ ಇದೀಗ ಕಾಲ ಕೂಡಿಬಂದಿದೆ.
ಇಂದು(ಡಿಸೆಂಬರ್ 5)ರಿಂದಲೇ ಬಸ್‌ಪಾಸ್ ವಿತರಣೆ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಎಂಟಿಸಿ ಇದೇ ಮೊದಲ ಬಾರಿಗೆ ಸ್ಮಾರ್ಟ್ ಕಾರ್ಡ್ ಮಾದರಿಯ ರಿಯಾಯಿತಿ ದರದ ವಿದ್ಯಾರ್ಥಿ ಬಸ್‌ಪಾಸ್ ಪರಿಚಯಿಸಿತ್ತು. ವಿದ್ಯಾರ್ಥಿಗಳು ಪಾಸ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.
ಅಂಚೆ ಮೂಲಕ ಹಾಗೂ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಶಾಂತಿನಗರದಲ್ಲಿ ಪಾಸ್ ವಿತರಣೆಗೆ ಕೌಂಟರ್ ತೆರೆಯಲಾಗಿತ್ತು. ಇದೀಗ ಇದುವರೆಗೂ ಪಾಸ್ ಪಡೆಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಂತಿದ ಟಿಟಿಎಂಪಿಯಲ್ಲಿ ಮಾತ್ರ ಬಸ್‌ಪಾಸ್ ವಿತರಣೆ ಕ್ರಮ ಕೈಗೊಳ್ಳಲಾಗಿದೆ.

ಬಸ್‌ಪಾಸ್ ಪಡೆಯಲು ಆನ್‌ಲೈನ್ ವ್ಯವಸ್ಥೆಯನ್ನು ಆರಂಭಿಸಿದರೂ ಕೂಡ ಎರಡು ತಿಂಗಳುಗಳ ಕಾಲ ವಿದ್ಯಾರ್ಥಿಗಳು ರಶೀದಿಯನ್ನೇ ಹಿಡಿದುಕೊಂಡು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.












Click it and Unblock the Notifications