SIR ವಿವಾದ: "ಪ್ರಕ್ರಿಯೆ ಮುಖ್ಯ, ನಾಟಕವಲ್ಲ" ಪ್ರಕಾಶ್ ರಾಜ್‌ಗೆ ಪತ್ರಕರ್ತ ವಿಶ್ವೇಶ್ವರ ಭಟ್ ತಿರುಗೇಟು; “ಕಾನೂನು ಎಲ್ಲರಿಗೂ ಒಂದೇ
SIR: ನಟ ಪ್ರಕಾಶ್ ರಾಜ್ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಎಸ್‌ಐಆರ್ ಬಗ್ಗೆ ನಟ ಪ್ರಕಾಶ್ ರಾಜ್ ಅವರ ಮಾತಿಗೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ತಿರುಗೇಟು ಕೊಟ್ಟಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಪ್ರಕಾಶ್ ರಾಜ್ ಅವರಿಗೆ ಶಾಕ್ ನೀಡಿತ್ತು. ಬೆಂಗಳೂರಿನ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರು ಕೈಬಿಡಲಾಗಿದೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರ ವೋಟರ್ ಐಡಿ ವಿಚಾರಕ್ಕೆ ಸಾಕಷ್ಟು ಚರ್ಚೆ ನಡೆದಿತ್ತು. ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವುದಕ್ಕೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ನಟ ಪ್ರಕಾಶ್ ರಾಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಪ್ರಕಾಶ್ ರಾಜ್ ಅವರು, ಬೆಂಗಳೂರಿನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮಾಡುವಾಗ ನನ್ನ ಹೆಸರು ಅಳಿಸಲಾಗಿದೆ. ನನ್ನ ಮತದಾನದ ಹಕ್ಕನ್ನು ವಾಪಸ್ ಪಡೆಯುವುದಕ್ಕೆ ಮುಂದಿನ ಪ್ರಕ್ರಿಯೆ ಏನು ಎಂಬುದನ್ನು ಎದುರು ನೋಡುತ್ತಿದ್ದೇನೆ. ನಾನು ಇದೇ ಕ್ಷೇತ್ರದಲ್ಲೇ ಹುಟ್ಟಿದ್ದೇನೆ. ಇಲ್ಲಿಯೇ ವಾಸಿಸಿದ್ದೇನೆ. ಇಲ್ಲಿಂದನೇ ನಾನಯ ಶಾಲಾ - ಕಾಲೇಜು ಹಾಗೂ ರಂಗಭೂಮಿಯಲ್ಲಿ ನಡೆಸಿದ್ದೇನೆ. ನಿಮ್ಮ ಮಾಹಿತಿಗಾಗಿ ಹೇಳುವುದಾದರೆ, ಇದೇ ಕ್ಷೇತ್ರದಿಂದ ನಾನು ಲೋಕಸಭೆ ಅಭ್ಯರ್ಥಿ ಆಗಿಯೂ ಸ್ಪರ್ಧಿಸಿದ್ದೆ ಎಂದು ನಟ ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.

ಈ ವಿಡಿಯೋದ ಪ್ರಾರಂಭದಲ್ಲಿ ನಟ ಪ್ರಕಾಶ್ ರಾಜ್ ಅವರು, ಸ್ನೇಹಿತರೇ ನಿಮಗೆಲ್ಲ ಒಂದು ಜೋಕ್ ಹೇಳಬೇಕು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೆಂಗಳೂರಿನ ಮತದಾರರ ಪಟ್ಟಿಯಿಂದ ಮತದಾನದ ಹಕ್ಕು ಕಳೆದುಕೊಂಡಿರುವ 65 ಲಕ್ಷ ಮತದಾರರಲ್ಲಿ ನಾನೂ ಸಹ ಒಬ್ಬನಾಗಿದ್ದೇನೆ. ಚೆನ್ನಾಗಿದೆ ಅಲ್ಲವೇ?. ಹೌದು ಇದು ಒಳ್ಳೆಯ ಜೋಕ್,ಆಟ ಶುರುವಾಗಿದೆ. ನನ್ನ ಮತದಾರರ ಗುರುತಿನ ಚೀಟಿಯನ್ನು ಮರಳಿ ಪಡೆಯಲು ಯಾವ ಪ್ರಕ್ರಿಯೆ ಅನುಸರಿಸಬೇಕು ಅಂತ ನೋಡೋಣ. ಆಟ ಮುಂದುವರಿಯಲಿ ಅಂತ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಮುಂದುವರಿದು ಕೆಲವರು ತಮಗೆ ವೋಟ್ ಹಾಕುವುದಿಲ್ಲ ಎನ್ನುವ ಕಾರಣಕ್ಕೆ ಕೆಲವು ಸಾರ್ವಜನಿಕರಿಗೆ ಮತದಾನದ ಹಕ್ಕನ್ನೇ ನಿರಾಕರಿಸುವ ಅಧಿಕಾರವನ್ನು ಬಳಸಬಹುದು. ಆದರೆ, ಅಂತಿಮವಾಗಿ ಅಧಿಕಾರದಿಂದ ಕೆಳಗಿಳಿಸುವ ಜನರ ಶಕ್ತಿಯನ್ನು ತಡೆಯಲು ಯಾರಿಂದಲಾದರೂ ಸಾಧ್ಯವೇ ಎಂದೂ ನಟ ಪ್ರಕಾಶ್ ರಾಜ್ ಅವರು ಪ್ರಶ್ನೆ ಮಾಡಿದ್ದಾರೆ.
ನಟ ಪ್ರಕಾಶ್ ರಾಜ್‌ಗೆ ಪತ್ರಕರ್ತ ವಿಶ್ವೇಶ್ವರ ಭಟ್ ತಿರುಗೇಟು
ನಟ ಪ್ರಕಾಶ್ ರಾಜ್‌ಗೆ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ತಿರುಗೇಟು ನೀಡಿದ್ದಾರೆ. ಪ್ರಿಯ ಪ್ರಕಾಶ್ ರಾಜ್ ಅವರೇ, ಬೆಂಗಳೂರಿನಲ್ಲಿ ಹುಟ್ಟಿರುವುದು, ವಿದ್ಯಾಭ್ಯಾಸ ಮಾಡಿರುವುದು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಿರುವುದು (ಠೇವಣಿ ಕಳೆದುಕೊಂಡಿದ್ದರೂ) ಮತದಾರರ ಪಟ್ಟಿಯ ಕಾನೂನುಬದ್ಧ ಪರಿಷ್ಕರಣೆಯಿಂದ ಶಾಶ್ವತ ವಿನಾಯಿತಿ ಕೊಡುವುದಿಲ್ಲ ಎಂದಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಎನ್ನುವುದು ಮತದಾರರ ಪಟ್ಟಿಯಲ್ಲಿರುವ ನಕಲಿ, ಸ್ಥಳಾಂತರವಾದವರು ಅಥವಾ ಸಕ್ರಿಯ ಮತದಾರರಲ್ಲದವರ ಮತದಾರರ ಗುರುತಿನ ಚೀಟಿ ಪರಿಶೀಲಿಸಿ, ನಿಖರ ಹಾಗೂ ಪಾರದರ್ಶಕ ಚುನಾವಣೆಗಳನ್ನು ಖಚಿತಪಡಿಸುವ ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ.
ಹಳೆಯ ಮತದಾರರು ಗುರುತಿನ ಚೀಟಿ ಹೊಂದಿರುವುದು ಅಥವಾ ಬೆಂಗಳೂರಿನೊಂದಿಗೆ ಹಿಂದಿನ ಸಂಬಂಧವಿರುವುದು, ವಿಳಾಸ ಬದಲಾಗಿದ್ದರೆ ಅಥವಾ ನೋಂದಣಿಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ, ಪರಿಶೀಲನೆಯಿಂದ ವಿನಾಯಿತಿ ನೀಡಲಾಗುವುದಿಲ್ಲ. ಭಾರತೀಯ ಚುನಾವಣಾ ಆಯೋಗದ ಸಾಮಾನ್ಯ ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆಯನ್ನು ರಾಜಕೀಯ ಸಂಚು ಎಂದು ಬಿಂಬಿಸುವ ಬದಲು, ಕಾನೂನುಬದ್ಧ ಮಾರ್ಗವನ್ನು ಅನುಸರಿಸಿ.
ನಿಮ್ಮ ಮತದಾರರ ವಿವರಗಳನ್ನು ಮರುಪರಿಶೀಲಿಸಲು ಅಥವಾ ಪುನಃ ಪಡೆಯಲು Form 6/8 ಮೂಲಕ ಅರ್ಜಿ ಸಲ್ಲಿಸಬಹುದು. ಕಾನೂನು ಎಲ್ಲರಿಗೂ ಒಂದೇ ಆಗಿದೆ ಜನಪ್ರಿಯ ವ್ಯಕ್ತಿಗಳಿಗೂ ಸಾಮಾನ್ಯ ನಾಗರಿಕರಿಗೂ ಸಮಾನವಾಗಿ ಅನ್ವಯಿಸಲಿದೆ. ಇಲ್ಲಿ ಪ್ರಕ್ರಿಯೆ ಮುಖ್ಯ, ನಾಟಕವಲ್ಲ ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Dear @prakashraaj, being born, educated, or contesting (lost deposit) an election in Bengaluru doesn’t grant permanent immunity from statutory electoral roll updates.
— Vishweshwar Bhat (@VishweshwarBhat) August 11, 2026
The Special Intensive Revision (SIR) by the Election Commission is a routine administrative exercise designed to… https://t.co/GjfDhMzPmJ


Click it and Unblock the Notifications
