ಬ್ರಿಗೇಡ್, ಎಂಜಿ ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ, ಅಂಗಡಿ ಮಾಲೀಕರ ಪರದಾಟ

ಬೆಂಗಳೂರು, ಜೂನ್ 18: ಒಂದೆಡೆ ಮೆಟ್ರೋ ಕಾಮಗಾರಿಗಾಗಿ ಕಾಮರಾಜ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಸಿಲಾಗಿದೆ. ಇನ್ನೊಂದೆಡೆ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲದ ಕಾರಣ ಸುತ್ತಮುತ್ತಲಿನ ಅಂಗಡಿ ಮಾಲೀಕರು, ಗ್ರಾಹಕರೂ ಪರದಾಡುವಂತಾಗಿದೆ.

ಟ್ರಾಫಿಕ್ ಡೈವರ್ಷನ್‌ಗಳು, ಪಾರ್ಕಿಂಗ್ ನಿರ್ಬಂಧಗಳಿಂದ ಎಂಜಿ ರಸ್ತೆ, ಬ್ರಿಗೆಡ್ ರಸ್ತೆ ಆಸುಪಾಸಿನಲ್ಲಿರುವ ಶಾಪ್‌ ಮಾಲೀಕರಿಗೆ ಬಿಜಿನೆಸ್ ಕಳೆದುಕೊಳ್ಳುವ ಚಿಂತೆ ಆರಂಭವಾಗಿದೆ.

ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಯಲ್ಲಿ ಸಾಕಷ್ಟು ಹೋಟೆಲ್‌ಗಳಿವೆ ಜನರು ಮಕ್ಕಳು, ಕುಟುಂಬದವರನ್ನು ಕರೆದುಕೊಂಡು ಅಲ್ಲಿಗೆ ಬರುತ್ತಾರೆ ವಾಹನಗಳನ್ನು ನಿಲ್ಲಿಸಲು ಜಾಗವೇ ಇಲ್ಲದಿದ್ದರೆ ಯಾರೂ ಕೂಡ ಬರುವುದಿಲ್ಲ.

ಈ ಪ್ರದೇಶದಲ್ಲಿ ವಾಹನಗಳ ನಿಷೇಧ ಬೇಡ ಎಂದು ಸರ್ಕಾರ ಪತ್ರ ಬರೆಯಲಾಗಿದೆ.

ಪಾರ್ಕಿಂಗ್‌ಗೆ ಅವಕಾಶವೇ ಇಲ್ಲ ಗ್ರಾಹಕರು ಹೇಗೆ ಬರ್ತಾರೆ

ಪಾರ್ಕಿಂಗ್‌ಗೆ ಅವಕಾಶವೇ ಇಲ್ಲ ಗ್ರಾಹಕರು ಹೇಗೆ ಬರ್ತಾರೆ

ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಿಮಿತ್ತ ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲದಂತೆ ಮಾಡಿದ್ದಾರೆ, ಈಗಾಗಲೇ ಬ್ರಿಗೆಡ್ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಅಂಗಡಿಗಳ ಆಸುಪಾಸಿನಲ್ಲಿ ಎಲ್ಲೂ ವಾಹನ ನಿಲುಗಡೆಗೆ ಅವಕಾಶವಿಲ್ಲದಿರುವಾಗ ಗ್ರಾಹಕರು ಯಾರೂ ಕೂಡ ಅಲ್ಲಿಗೆ ಬರಲು ಇಚ್ಛಿಸುವುದಿಲ್ಲ ಎನ್ನುವುದು ಮಾಲೀಕರ ವಾದವಾಗಿದೆ.

ಗ್ರಾಹಕರು ಕಮ್ಫರ್ಟ್ ನೋಡ್ತಾರೆ

ಗ್ರಾಹಕರು ಕಮ್ಫರ್ಟ್ ನೋಡ್ತಾರೆ

ಬ್ರಿಗೆಡ್ ರಸ್ತೆಯಲ್ಲಿರುವ ಅಂಗಡಿಗಳು ಹಾಗೂ ಎಸ್ಟಾಬ್ಲಿಶ್‌ಮೆಂಟ್ ಅಸೋಸಿಯೇಷನ್‌ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್ ಹೆಚ್ಚಳವೂ ಕೂಡ ನಮ್ಮ ಬಿಜಿನೆಸ್ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತಾರೆ ಮಾಲೀಕರು.

ಗ್ರಾಹಕರು ತಮಗೆ ಆರಾಮದಾಯಕವಾಗಿರಲಿ ಎಂದು ಕಮರ್ಷಿಯಲ್ ಹಬ್‌ಗಳಿಗೆ ತೆರಳುತ್ತಾರೆ. ಆದರೆ ಈಗ ಆ ಪರಿಸ್ಥಿತಿ ಇಲ್ಲ, ಮೆಟ್ರೋ ಕೆಲಸವೇ ಪ್ರಮುಖವಾಗಿದೆ.

ಕಡಿಮೆ ಅವಧಿಯ ಮಾರ್ಗವಿದ್ದರೂ ಸುತ್ತಿಬಳಸಿ ಚಾಲನೆ

ಕಡಿಮೆ ಅವಧಿಯ ಮಾರ್ಗವಿದ್ದರೂ ಸುತ್ತಿಬಳಸಿ ಚಾಲನೆ

ಈಗ ಕಡಿಮೆ ಅವಧಿಯಲ್ಲಿ ತಲುಪಬಹುದಂತಹ ಮಾರ್ಗವಿದ್ದರೂ ಅನಿವಾರ್ಯವಾಗಿ ಸುತ್ತಿ ಬಳಸಿ ಪ್ರವೇಶಿಸಬೇಕಿದೆ.ಬ್ರಿಗೆಡ್ ರಸ್ತೆಯಲ್ಲಿ 85 ಪಾರ್ಕಿಂಗ್ ಪ್ರದೇಶಗಳಿದ್ದು ಅದರಲ್ಲಿ ಕಾರುಗಳನ್ನು ನಿಲ್ಲಿಸಬಹುದಾಗಿದೆ. ನಿತ್ಯ 1300 ವಾಹನಗಳು ನಿಲುಗಡೆ ಮಾಡಲಾಗುತ್ತಿದೆ.

ಚರ್ಚ್‌ ಸ್ಟ್ರೀಟ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ ಬೇಕು

ಚರ್ಚ್‌ ಸ್ಟ್ರೀಟ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ ಬೇಕು

ಕಾಮರಾಜ ರಸ್ತೆಯಲ್ಲಿ ವಾಹನ ನಿಷೇಧವಾಗಿರುವುದರಿಂದ ಬೇರೆ ಮಾರ್ಗಗಳ ಮೂಲಕ ಆಗಮಿಸುವುದು ಜನರಿಗೆ ದೊಡ್ಡ ತಲೆನೋವಾಗಿದೆ. ಒಂದೊಮ್ಮೆ ಕಷ್ಟ ಪಟ್ಟು ಬಂದರೂ ಕೂಡ ವಾಹನಗಳ ನಿಲುಗಡೆಗಾಗಿ ಪರದಾಡುವಂತಾಗುತ್ತದೆ.

ಟೆಂಡರ್ ಶ್ಯೂರ್ ಕಾಮಗಾರಿ ಮುಗಿದ ಬಳಿಕ ಚರ್ಚ್ ಸ್ಟ್ರೀಟ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಟ್ಟರೆನಮ್ಮ ಮೆಟ್ರೋ ಸುರಂಗ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಎಂಜಿ ರಸ್ತೆ, ಕಬ್ಬನ್ ರಸ್ತೆ ನಡುವಿನ ಕಾಮರಾಜ ರಸ್ತೆಯನ್ನು ಬಂದ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+