ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಬೆಂಗಳೂರಿನಲ್ಲಿ ಬೈಕ್ ರೈಡ್..ನೆಟ್ಟಿಗರು ಹೇಳೋದೇನು?
Shivashree Skandaprasad: ಬೆಂಗಳೂರಿನ ರಸ್ತೆಯಲ್ಲಿ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಕಲಾವಿದೆ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಬೈಕ್ ರೈಡ್ ಮಾಡಿ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಅವರು ಬೆಂಗಳೂರಿನ ರಸ್ತೆಯಲ್ಲಿ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಸವಾರಿ ಮಾಡುತ್ತಿರುವ ಈ ವೀಡಿಯೊ ಸಾರ್ವಜನಿಕರ ಹಾಗೂ ನೆಟ್ಟಿಗರ ಗಮನ ಸೆಳೆದಿದೆ. ಅದರಲ್ಲೂ ಶಿವಶ್ರೀ ಅವರು ಈ ವಿಡಿಯೋದೊಂದಿಗೆ ಬರೆದುಕೊಂಡಿರುವ ಸಾಲುಗಳು ಸಖತ್ ವೈರಲ್ ಆಗಿವೆ.

ಶಿವಶ್ರೀ ಸ್ಕಂದಪ್ರಸಾದ್ ಪೋಸ್ಟ್‌ನಲ್ಲಿ ಏನಿದೆ?
'ನನ್ನ ಪತಿ ನನ್ನಿಂದ ಮಾಡಿಸುವ ಕೆಲಸಗಳು... ಮತ್ತು ಕೊನೆಗೆ ನಾನೂ ಅದನ್ನೇ ಮಾಡಿಬಿಡುತ್ತೇನೆ,' (Things my husband gets me to do... and I end up doing) ಎಂಬ ಅದ್ಭುತ ಬರಹದೊಂದಿಗೆ ಶಿವಶ್ರೀ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್ನೂ ಈ ಸಾಲು ಹಾಗೂ ವೈರಲ್ ವೀಡಿಯೊಗೆ ಸಾವಿರಾರು ಕಾಮೆಂಟ್‌ಗಳು ಹಾಗೂ ಲೈಕ್ಸ್‌ಗಳು ಬಂದಿದ್ದು, ನೆಟ್ಟಿಗರು ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ನೆಟ್ಟಿಗರು ಹೇಳೋದೇನು?
ಸಂಪ್ರದಾಯ ಹಾಗೂ ಆಧುನಿಕತೆಯ ವಿಶಿಷ್ಟ ನಡೆ ಎಂದು ಬಣ್ಣಿಸಿರುವ ಅನೇಕ ನೆಟ್ಟಿಗರು, 'ಶಿವಶ್ರೀ ಅವರು ಅನೇಕ ಯುವತಿಯರು ಹಾಗೂ ಮಹಿಳೆಯರಿಗೆ ಸ್ವತಂತ್ರವಾಗಿ ಬೈಕ್ ಸವಾರಿ ಮಾಡಲು ಸ್ಫೂರ್ತಿಯಾಗಿದ್ದಾರೆ,' ಎಂದು ಹಾಡಿ ಹೊಗಳಿದ್ದಾರೆ. 'ಹಾಡುಗಾರಿಕೆಯ ಜೊತೆಗೆ ಬೈಕ್ ಚಲಾಯಿಸುವುದರಲ್ಲೂ ನೀವು ನಿಸ್ಸೀಮರು ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಶಿವಶ್ರೀ ಸ್ಕಂದಪ್ರಸಾದ್ ಅವರು ಕೇವಲ ಸಂಗೀತ ಕ್ಷೇತ್ರದಲ್ಲಷ್ಟೇ ಅಲ್ಲದೆ, ಫಿಟ್‌ನೆಸ್ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಗೋವಾದಲ್ಲಿ ನಡೆದಿದ್ದ ಪ್ರತಿಷ್ಠಿತ 'ಐರನ್‌ಮ್ಯಾನ್ 70.3' ಸ್ಪರ್ಧೆಯನ್ನು ಪತಿ ತೇಜಸ್ವಿ ಸೂರ್ಯ ಅವರೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಕಠಿಣ ಸ್ಪರ್ಧೆಯ ಭಾಗವಾಗಿ ಅವರು 60 ಕಿಲೋ ಮೀಟರ್ ಸೈಕ್ಲಿಂಗ್ ನಡೆಸಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು.
ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದಪ್ರಸಾದ್ ಅವರ ವಿವಾಹವು 2025ರ ಮಾರ್ಚ್ 6ರಂದು ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಬೆಂಗಳೂರಿನಲ್ಲಿ ಇದೀಗ ಮಾಡಿರುವ ಪ್ರಸ್ತುತ ಎಲೆಕ್ಟ್ರಿಕ್ ಬೈಕ್ ಸವಾರಿಯ ಈ ಹೊಸ ವೀಡಿಯೊ ಕೇವಲ ಮನರಂಜನೆಯಷ್ಟೇ ಅಲ್ಲದೆ, ಪರಿಸರ ಸ್ನೇಹಿ ಇವಿ (ಇವಿ) ವಾಹನಗಳ ಬಳಕೆಗೆ ಉತ್ತೇಜನ ನೀಡುವಂತೆಯೂ ಕಂಡುಬಂದಿದೆ ಅಂತಲೂ ಹಲವರು ಅಭಿಪ್ರಾಯ ವ್ಯಕ್ತಪಡಸಿದ್ದಾರೆ.
ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆ
'ಒಂದೆಡೆ ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಾ, ಇನ್ನೊಂದೆಡೆ ಆಧುನಿಕ ಕಾಲದ ಎಲೆಕ್ಟ್ರಿಕ್ ಬೈಕ್ ಏರಿ ಹೆಮ್ಮೆಯಿಂದ ಸವಾರಿ ಮಾಡುತ್ತಿರುವ ನಿಮ್ಮ ನಡೆ ನಿಜಕ್ಕೂ ಅದ್ಭುತ. ನೀವು ಇಂದಿನ ಸಾಂಪ್ರದಾಯಿಕ ಹಾಗೂ ಸಬಲ ಮಹಿಳೆಯರಿಗೆ ಸರಿಯಾದ ಉದಾಹರಣೆ,' ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಮಾಷೆಯಾಗಿ 'ಸಂಸದ ತೇಜಸ್ವಿ ಸೂರ್ಯ ಅವರು ಹೆಂಡತಿಗೆ ಹೊಸ ಹೊಸ ಟಾಸ್ಕ್ ನೀಡುತ್ತಿದ್ದಾರೆ ಅನಿಸುತ್ತೆ, ಕೊನೆಗೂ ನೀವು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೀರಿ,' ಎಂದು ಕಮೆಂಟ್ ಮಾಡಿದ್ದಾರೆ.


Click it and Unblock the Notifications
