ಶಾಂತಿನಗರ ಬಸ್ ನಿಲ್ದಾಣದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ

ಬೆಂಗಳೂರು, ಜುಲೈ 29 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಶಾಂತಿನಗರ ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲಿದೆ. 5 ರಿಂದ 6 ಕೋಟಿ ವೆಚ್ಚದಲ್ಲಿ ಸೋಲಾರ್ ಘಟಕ ನಿರ್ಮಾಣವಾಗಲಿದೆ.

ಸೌರ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಪ್ರಸ್ತುತ 4ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈಗಾಗಲೇ ನೂತನ ಸೋಲಾರ್ ನೀತಿ ಜಾರಿಗೆ ತರಲಾಗಿದ್ದು, ಹೆಚ್ಚಿನ ಸೌರ ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. [ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರಶಕ್ತಿ ಬಲ]

solar

ಬಿಎಂಟಿಸಿಯ ಶಾಂತಿನಗರ ಬಸ್ ನಿಲ್ದಾಣದ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲಾಗುತ್ತದೆ. 800 ಮೆಗಾವ್ಯಾಟ್ ಅಥವ ಪ್ರತಿದಿನ 1 ಲಕ್ಷ ಯೂನಿಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವಷ್ಟು ಸಾಮರ್ಥ್ಯದ ಫಲಕಗಳನ್ನು ಹಾಕಲಾಗುತ್ತದೆ. [ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ ಸೌರ ಪಾರ್ಕ್]

ಸುಮಾರು 6 ಕೋಟಿ ವೆಚ್ಚ : ಸುಮಾರು 1.20 ಲಕ್ಷ ಚದರ ಅಡಿ ವಿಸ್ತೀರ್ಣದ ಚಾವಣಿಯನ್ನು ನಿರ್ಮಾಣ ಮಾಡಲಾಗುತ್ತದೆ. ಇದಕ್ಕೆ 6 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಗುತ್ತಿಗೆ ನೀಡಿರುವ ಸಂಸ್ಥೆಯೇ 15 ವರ್ಷ ನಿರ್ವಹಣೆ ಮಾಡಲಿದೆ. ಬಸ್ ನಿಲ್ದಾಣಕ್ಕೆ ಬೇಕಾಗುವಷ್ಟು ಬಳಸಿಕೊಂಡು ಉಳಿದಿದ್ದನ್ನು ಬೆಸ್ಕಾಂಗೆ ಮಾರಾಟ ಮಾಡಲಾಗುತ್ತದೆ.

ಸೌರ ವಿದ್ಯುತ್ ಉತ್ಪಾದನೆಯಿಂದ ಬಿಎಂಟಿಸಿಯು ಪಾವತಿ ಮಾಡುವ ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಉಳಿತಾಯವಾಗಲಿದೆ. ಶಾಂತಿನಗರ ನಿಲ್ದಾಣದ ಮೇಲೆ ಹಲವು ಕಚೇರಿಗಳನ್ನು ಬಾಡಿಗೆಗೆ ನೀಡಲಾಗಿದೆ. ಸಂಪೂರ್ಣ ಬಸ್ ನಿಲ್ದಾಣದಲ್ಲಿ ತಿಂಗಳಿಗೆ 3 ಲಕ್ಷಕ್ಕೂ ಅಧಿಕ ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+