ನಮ್ಮ ಮೆಟ್ರೋ ನಿಲ್ದಾಣದಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಗೇಟ್
ಬೆಂಗಳೂರು, ಜನವರಿ 5: ಗರ್ಭಿಣಿಯರ ಆರೋಗ್ಯದ ಹಿರದೃಷ್ಟಿಯಿಂದ ಅವರಿಗೆ ಪ್ರತ್ಯೇಕ ಗೇಟ್ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್ ಕಲ್ಪಿಸಿದೆ.
ಕೆಲವು ಮಹಿಳೆಯರು ಬಿಎಂಆರ್‌ಸಿಎಲ್ ಬಳಿ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಗರ್ಭಿಣಿಯರಿಗಾಗಿಯೇ ಮೆಟ್ರೋ ನಿಲ್ದಾಣಕ್ಕೆ ಬರುವ ಹಾಗೂ ಹೊರ ಹೋಗಲು ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈಗಿರುವ ದ್ವಾರದಲ್ಲಿ ಯಾವುದೇ ದೋಷಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಷ್ಟುದಿನ ಕಾರ್ಡ್ ಅಥವಾ ಟೋಕನ್‌ಗಳನ್ನು ಆಟೋಮೆಟಿಕ್ ಫೇರ್ ಕಲೆಕ್ಷನ್ ಗೇಟುಗಳಲ್ಲಿ ಹಾಕುತ್ತಿದ್ದರು ಆದರೆ ಇನ್ನು ಮುಂದಿನ ದಿನಗಳಲ್ಲಿ ಸರ್ವೀಸ್ ಗೇಟುಗಳ ಮೂಲಕ ಅವರಿಗೆ ಹೋಗಲು ಅವಕಾಶ ಮಾಡಿಕೊಟ್ಟರೆ ಅವರಿಂದ ಹಣ ಪಡೆಯುವುದು ಹೇಗೆ ಎನ್ನುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಒಎಫ್‌ಸಿ ಗೇಟ್ ಮೂಲಕ ತೆರಳಬೇಕಿದ್ದರೆ ಕಾರ್ಡ್ ಸ್ವೈಪ್ ಮಾಡಬೇಕು ಇಲ್ಲವೇ ಟೋಕನ್ ಇಡಬೇಕಾಗುತ್ತದೆ, ಒಂದೊಮ್ಮೆ ಚೂರು ಹೆಚ್ಚು ಕಡಿಮೆಯಾದರೂ ಅದು ಬಾಗಿಲು ಹಾಕಿಕೊಳ್ಳುತ್ತದೆ ಅದರಿಂದ ಅಪಾಯವಾಗುತ್ತದೆ ಎಂದು ಕೆಲವರು ದೂರಿದ್ದಾರೆ.
ಆದರೆ ವೈದ್ಯರು ಹೇಳುವ ಪ್ರಕಾರ ಮೆಟಲ್ ಡಿಟೆಕ್ಷನ್ ಅಷ್ಟೇ, ಯಾವುದೇ ತೊಂದರೆಯಿಲ್ಲ, ಅದರಲ್ಲಿ ಎಕ್ಸ್‌ರೇ ಇರುವುದಿಲ್ಲ, ಅದು ಕೇವಲ ಸೆನ್ಸರ್ ಅಷ್ಟೇ ಎಂದು ತಿಳಿಸಿದ್ದಾರೆ. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ನಿತ್ಯ 15ಕ್ಕೂ ಹೆಚ್ಚು ಗರ್ಭಿಣಿಯರು ಸರ್ವೀಸ್ ಗೇಟ್ ಮೂಲಕ ಪ್ರವೇಶಿಸುತ್ತಿದ್ದಾರೆ.












Click it and Unblock the Notifications