ಇಪ್ಪತ್ತು ಸಾವಿರ ಕ್ರಾಸ್ ಆಗಲ್ಲ ಎಂದ ರುಪ್ಸಾ ಅಧ್ಯಕ್ಷ ತಾಳಿಕಟ್ಟೆ ಅವರ ಶಾಲಾ ಶುಲ್ಕ ಡಿಟೆಲ್ಸ್ ಎಕ್ಸ್ ಪೋಸ್ !

ಬೆಂಗಳೂರು,

ಫೆಬ್ರವರಿ
02:
"ಯಾವುದೇ
ಮಗು
,
ನೀನು,
ಎಷ್ಟೇ
ಐಶರಾಮಿ
ಖರ್ಚು
ಮಾಡಿದ್ರೂ
ಇಪ್ಪತ್ತು
ಸಾವಿರ
ಕ್ರಾಸ್
ಆಗಲ್ಲ
ಸಾರ್...
"
ಗ್ರಾಮೀಣ
ಮಟ್ಟದಲ್ಲಿ
ಮೂರುವರೆ
ಸಾವಿರ
ತೆಗೆದುಕೊಂಡು
ಗುಣಮಟ್ಟದ
ಶಾಲೆ
ನಡೆಸುತ್ತಿದ್ದೇವೆ.

id="toptextpromo">
id='are-slot-1'
class='oiad
oi-axt
oiadv'>

ಖಾಸಗಿ

ವಾಹಿನಿಯಲ್ಲಿ
ಕೂತು
ಶಾಲಾ
ಶುಲ್ಕದ
ಬಗ್ಗೆ
ರಾಜ್ಯಕ್ಕೆ
ಹೀಗೆ
ಸಂದೇಶ
ಸಾರಿ
ವಿವಾದ
ಎಬ್ಬಿಸಿದ್ದ
ರುಪ್ಸಾ
ಅಧ್ಯಕ್ಷ
ಲೋಕೇಶ್
ತಾಳಿಕಟ್ಟೆ
ಒಡೆತನದ
ಶಾಲೆಯ
ಶುಲ್ಕ
ಎಷ್ಟು
ಗೊತ್ತಾ
?
ತಾಳಿಕಟ್ಟೆ
ಅವರ
ಶಾಲೆಯ
ಅಸಲಿತನವನ್ನು
ಪೋಷಕರೊಬ್ಬರು
ಬಯಲು
ಮಾಡಿದ್ದಾರೆ.
ನಾನು
ಕೂಡ
ಶಾಲೆ
ನಡೆಸುತ್ತಿದ್ದೀನಿ
,
ವಾರ್ಷಿಕ
ಒಂದು
ಮಗುವಿಗೆ
ಶಾಲೆ
ಐಶರಾಮಿ
ವೆಚ್ಚ
ಮಾಡಿದ್ರೂ
ಇಪ್ಪತ್ತು
ಸಾವಿರ
ಗಡಿ
ದಾಟಲ್ಲ
ಎಂದಿದ್ದ
ರುಪ್ಸಾ
ರಾಜ್ಯಾಧ್ಯಕ್ಷ
ಒಡೆತನದ
ಶಾಲೆಯಲ್ಲಿ
ವಾರ್ಷಿಕ
68
ಸಾವಿರ
ಶುಲ್ಕ
ವಿಧಿಸುತ್ತಿದ್ದಾರೆ
ಎಂಬ
ಅಸಲಿ
ಸತ್ಯ
ಹೊರ
ಬಿದ್ದಿದೆ.
ಕುರಿತ
ಅಡಿಯೋ
ಒನ್
ಇಂಡಿಯಾಗೆ
ಲಭ್ಯವಿದೆ.

id='are-slot-2'
class='oiad
oi-axt
oiadv'>

ಕೋವಿಡ್ ಶುಲ್ಕ ವಿವಾದ

ಕೋವಿಡ್ ಶುಲ್ಕ ವಿವಾದ

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಸಗಿ ಶಾಲಾ ಶುಲ್ಕ ವಿವಾದಕ್ಕೆ ನಾಂದಿ ಹಾಡಿತ್ತು. ಪೋಷಕರ ಒಕ್ಕೂಟ ಈ ವರ್ಷದ ಶಾಲಾ ಶುಲ್ಕದಲ್ಲಿ ಶೇ. 50 ರಷ್ಟು ಕಡಿಮೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದವು. ಇದಕ್ಕೆ ಪ್ರತಿರೋಧ ತೋರಿದ್ದ ಅನುದಾನಿತ ಶಾಲೆಗಳ ಒಕ್ಕೂಟಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ರುಪ್ಸಾ ಒಂದು ರೀತಿಯ ಪ್ರಸ್ತಾವನೆ ನೀಡಿದರೆ ಕ್ಯಾಮ್ಸ್ ಶಾಲೆಗಳಲ್ಲಿನ ಮಕ್ಕಳನ್ನು ಆಧಾರಿಸಿ ವೈಜ್ಞಾನಿಕವಾಗಿ ಶಾಲಾ ಶುಲ್ಕ ಕಡಿಮೆ ಮಾಡುವಂತೆ ಕೋರಿತ್ತು.

ಇದು ಖಾಸಗಿ ಶಾಲೆಗಳ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಟ್ಟಿತ್ತು. ಮಾಧ್ಯಮಗಳಲ್ಲಿ ಭಾರೀ ಚರ್ಚೆ ನಡೆದಿತ್ತು. ಈ ವೇಳೆ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ನೀಡಿದ್ದ ಹೇಳಿಕೆ ಭಾರೀ ಸಂಚಲನ ಮೂಡಿಸಿತ್ತು. ಇದೇ ಹಂತದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಶಾಲಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿಮೆ ಮಾಡಲು ಸೂಚಿಸಿತ್ತು. ಈ ಬಗ್ಗೆ ಕೆಲವು ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿವೆ. ಇನ್ನೂ ಕೆಲವು ಸಂಘಟನೆಗಳು ಸರ್ಕಾರದ ನಿರ್ಣಯವನ್ನು ಬೆಂಬಲಿಸಿವೆ. ಇದರ ನಡುವೆಯೇ ರುಪ್ಸಾ ಅಧ್ಯಕ್ಷರ ಮಾಲಿಕತ್ವದ ಶಾಲೆಯ ಶುಲ್ಕ ವಿವಾದ ಸೃಷ್ಟಿಸಿದೆ.

ರುಪ್ಸಾ ಅಧ್ಯಕ್ಷರ ಅಸಲಿ ಸತ್ಯ

ರುಪ್ಸಾ ಅಧ್ಯಕ್ಷರ ಅಸಲಿ ಸತ್ಯ

ನಾನು ಶಾಲೆ ನಡೆಸುತ್ತೇನೆ. ಒಂದು ಮಗುವಿಗೆ ವಾರ್ಷಿಕ ಇಪ್ಪತ್ತು ಸಾವಿರ ಮೇಲೆ ಖರ್ಚು ಬರಲ್ಲ. ಐಶರಾಮಿಯಾಗಿ ವೆಚ್ಚ ಮಾಡಿದ್ರೂ ಇದು ದಾಟಲ್ಲ. ಗ್ರಾಮೀಣ ಭಾಗದಲ್ಲಿ ಮೂರುವರೆ ಸಾವಿರ ವಾರ್ಷಿಕ ಶುಲ್ಕ ಪಡೆದು ಕೆಲವು ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ನಾನು ಕೂಡ ಶಾಲೆ ನಡೆಸುತ್ತಿದ್ದೇನೆ ಎಂದು ಖಾಸಗಿ ವಾಹಿನಿಯಲ್ಲಿ ಹೇಳಿಕೆ ನೀಡಿದ್ದರು. ಇದು ಭಾರೀ ಸಂಚಲನ ಮೂಡಿಸಿತ್ತು. ಲೋಕೇಶ್ ತಾಳಿಕಟ್ಟೆ ಒಡೆತನದ ಸಾಂದೀಪಿನಿ ಶಾಲೆ ಬೆಂಗಳೂರಿನಲ್ಲಿದೆ. ಜ್ಞಾನ ಭಾರತಿಯ ನಾಗದೇವನಹಳ್ಳಿಯಲ್ಲಿರುವ ಶಾಲೆಯಲ್ಲಿನ ವಾರ್ಷಿಕ ಶುಲ್ಕದ ಅಸಲಿ ಸತ್ಯವನ್ನು ಪೋಷಕರೊಬ್ಬರು ಬಯಲಿಗೆ ಎಳೆದಿದ್ದಾರೆ. ಈ ಕುರಿತು ಅಡಿಯೋ ಮತ್ತು ವಿಡಿಯೋ ಕೂಡ ಮಾಡಿಕೊಂಡಿದ್ದು, ಸದ್ಯ ಅದು ವೈರಲ್ ಆಗಿದೆ.

ಶಾಲಾ ಶುಲ್ಕ 68 ಸಾವಿರ ರೂ !

ಶಾಲಾ ಶುಲ್ಕ 68 ಸಾವಿರ ರೂ !

ಅಡಿಯೋದಲ್ಲಿ ಸಾಂದೀಪಿನಿ ಶಾಲೆಯ ಪ್ರಾಂಶುಪಾಲರ ಜತೆ ಮಕ್ಕಳ ಅಡ್ಮಿಷನ್ ಬಗ್ಗೆ ಮಾತುಕತೆ ನಡೆದಿದ್ದು, ಒಂದು ಮಗುವಿಗೆ ಅಡ್ಮಿಷನ್ ಫೀ 20 ಸಾವಿರ ರೂಪಾಯಿ. ವಾರ್ಷಿಕ ಶಾಲಾ ಶುಲ್ಕ 48 ಸಾವಿರ ರೂಪಾಯಿ. ವಾರ್ಷಿಕ ಒಟ್ಟು 68 ಸಾವಿರ ರೂಪಾಯಿ ಆಗುತ್ತದೆ ಎಂದು ರುಪ್ಸಾ ಅಧ್ಯಕ್ಷರ ಶಾಲೆಯ ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ. ಈ ಕುರಿತ ಅಡಿಯೋ ಎಲ್ಲಡೆ ಇದೀಗ ವೈರಲ್ ಆಗಿದೆ. ಮಾತು ಆಡಿದ್ದೇ ಬೇರೆ. ವಾಸ್ತವವೇ ಬೇರೆ ? ಕೇವಲ 20 ಸಾವಿರಕ್ಕೆ ಒಂದು ಮಗುವಿಗೆ ಖರ್ಚು ಬರಲ್ಲ ಎಂದು ಹೇಳಿದ್ದ ತಾಳಿಕಟ್ಟೆ ಎಲ್ಲರ ಹೊಟ್ಟೆ ಮೇಲೆ ಹೊಡೆಯುವ ಹೇಳಿಕೆ ನೀಡಿದ್ದಾರೆ. ಆದರೆ ಅವರು ಯಾಕೆ ಕೋವಿಡ್ ಇದ್ದರು ಇಪ್ಪತ್ತು ಸಾವಿರ ಶುಲ್ಕ ಪಡೆದು ಶಾಲೆ ನಡೆಸುತ್ತಿಲ್ಲ. ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಲು ಸುಳ್ಳು ಹೇಳುವ ಅಗತ್ಯವೇನಿತ್ತು ? ಈ ಮೂಲಕ ಎಲ್ಲರನ್ನೂ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕಿಡಿಕಾರಿವೆ.

ತಾಳಿಕಟ್ಟೆ ಪ್ರತಿಕ್ರಿಯೆ

ತಾಳಿಕಟ್ಟೆ ಪ್ರತಿಕ್ರಿಯೆ

ಕೇವಲ ಮೂರುವರೆ ಸಾವಿರ ಪಡೆದು ಶಾಲೆ ನಡೆಸುತ್ತಿದ್ದಾರೆ. ಇಪ್ಪತ್ತು ಸಾವಿರಕ್ಕೆ ಒಂದು ಮಗುವಿಗೆ ವಾರ್ಷಿಕ ಶಾಲಾ ಶುಲ್ಕ ವೆಚ್ಚವಾಗಲ್ಲ ಎಂದಿದ್ದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಮ್ಮ ಶಾಲೆಯ ಶಾಲಾ ಶುಲ್ಕದ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಎಷ್ಟೇ ಸಲ ಸಂಪರ್ಕಿಸುವ ಪ್ರಯತ್ನ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ಇನ್ನು ಅವರ ಶಾಲೆ ಪ್ರಾಂಶುಪಾಲರು ಶಾಲಾ ಶುಲ್ಕದ ಬಗ್ಗೆ ಪೋಷಕರು ಸಂಗ್ರಹಿಸಿರುವ ವಾಯ್ಸ್ ರೆಕಾರ್ಡ್ ಮತ್ತು ವಿಡಿಯೋ ಎಲ್ಲಾ ದಾಖಲೆಗಳನ್ನು ಅವರ ವಾಟ್ಸಪ್ ಗೆ ಕಳುಹಿಸಿ ಪ್ರತಿಕ್ರಿಯೆ ನೀಡಲು ಮನವಿ ಮಾಡಲಾಗಿದೆ. ಅವರು ಪ್ರತಿಕ್ರಿಯೆ ನೀಡಿದ ನಂತರ ಅದನ್ನು ಅಪ್‌ಡೇಟ್ ಮಾಡಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+