ವಿದ್ಯಾರ್ಥಿ ತಾಯಿಗೆ ಶಾಲಾ ಬಸ್ ಚಾಲಕನಿಂದ ಬ್ಲಾಕ್‌ಮೇಲ್

ಬೆಂಗಳೂರು, ಫೆಬ್ರವರಿ 8: ಸ್ನಾನದ ವಿಡಿಯೋವನ್ನಿಟ್ಟುಕೊಂಡು ವಿದ್ಯಾರ್ಥಿ ತಾಯಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಶಾಲಾ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿಯ ತಾಯಿ ಸ್ನಾನ ಮಾಡುತ್ತಿರುವುದನ್ನು ಚಿತ್ರೀಕರಿಸಿ ಬಳಿಕ ಆತನೊಂದಿಗೆ ಸಹಕರಿಸದಿದ್ದರೆ ಆ ವಿಡಿಯೋ ಬಹಿರಂಗಪಡಿಸುತ್ತೇನೆ ಆಕೆಗೆ ಬ್ಲಾಕ್‌ ಮೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿಯು ವಿದ್ಯಾರ್ಥಿಯನ್ನು ಶಾಲೆಗೆ ಕರೆದೊಯ್ಯಲು ನಿತ್ಯ ಮನೆಯ ಹತ್ತಿರ ಬರುತ್ತಿದ್ದ, ಒಂದು ದಿನ ವಿದ್ಯಾರ್ಥಿಗಳನ್ನು ಪಿಕ್ ಅಪ್ ಮಾಡಲು ನಿಂತಿರುವಾಗ ಅವರ ಮನೆ ಬಳಿ ಹೋದಾಗ ಆಕೆ ಸ್ನಾನ ಮಾಡುತ್ತಿರುವುದು ಗೊತ್ತಾಗಿದೆ ತಕ್ಷಣ ಹೋಗಿ ಚಿತ್ರೀಕರಿಸಿದ್ದ ಆದರೆ ಆಕೆಗೆ ಅದು ತಿಳಿದಿರಲಿಲ್ಲ. ಬಳಿಕ ಆ ವಿಡಿಯೋವನ್ನು ಕಳುಹಿಸಿ ಆಕೆಗೆ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದ.

School bus driver films student’s mom taking a bath, blackmail

ತುಮಕೂರಿನ ನಿವಾಸಿ ಕಿಶೋರ್(35) ಬಂಧಿತ ಆರೋಪಿ, ಆಂದ್ರಹಳ್ಳಿ ಮುಖ್ಯರಸ್ತೆಯಲ್ಲಿರುವ ಖಾಸಗಿ ಶಾಲೆಯಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಒಂದು ವರ್ಷದ ಹಿಂದೆ ಆಕೆ ಸ್ನಾನ ಮಾಡುತ್ತಿರುವಾಗ ವಿಡಿಯೋವನ್ನು ಚಿತ್ರೀಕರಿಸಿದ್ದ.

ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ, ಕುಡಿದು ಆಕೆಯ ಮನೆಯ ಬಳಿ ಬರುತ್ತಿದ್ದ, ಬಳಿಕ ಆಕೆಯ ಪತಿ ಆತನನ್ನು ತಡೆದು ವಾರ್ನ್ ಮಾಡಿದ್ದ ಬಳಿಕ ಆತ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ಹಾಗಾಗಿ ಪೊಲೀಸರಿಗು ದೂರು ನೀಡಿ ಆತನನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+