ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ- ಸರ್ಜಾಪುರ ಮಧ್ಯೆ ಮೆಟ್ರೋ ಮಾರ್ಗ: ಡಿಪಿಆರ್ ಸಲ್ಲಿಕೆಗೆ ಗಡುವು

|
Google Oneindia Kannada News

ಬೆಂಗಳೂರು ಜೂ.16: ನಗರದ ಸಂಚಾರ ದಟ್ಟಣೆಯ ಪ್ರದೇಶವಾದ ಹೆಬ್ಬಾಳ ಮತ್ತು ಸರ್ಜಾಪುರ ಮಧ್ಯೆ ಮೆಟ್ರೋ ರೈಲು ಮಾರ್ಗ ಜೋಡಣಾ ಕಾಮಗಾರಿಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ಇತ್ತೀಚೆಗೆ ಟೆಂಡರ್ ಆಹ್ವಾನಿಸಿತ್ತು. ಸದ್ಯ ಈ ಟೆಂಡರ್ ಪ್ರಕ್ರಿಯೆಯಲ್ಲಿ ಹಲವು ಸಂಸ್ಥೆಗಳು ಪಾಲ್ಗೊಂಡಿವೆ.

ರಾಜ್ಯ ಸರ್ಕಾರ ಬಜೆಟ್ ನಲ್ಲಿ ಮೆಟ್ರೋ ಮಾರ್ಗ ಕುರಿತು ಘೋಷಿಸಿದ ಬೆನ್ನಲ್ಲೇ ಬಿಎಂಆರ್ ಸಿಎಲ್ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಸರ್ಜಾಪುರದಿಂದ ಹೆಬ್ಬಾಳವರೆಗಿನ ಈ ಮೆಟ್ರೋ ಮಾರ್ಗವು ಸುಮಾರು 37ಕಿ.ಮೀ. ಅಂತರ ಹೊಂದಿದೆ. ಈ ಕಾಮಗಾರಿಗೆ ಸಮಗ್ರ ಯೋಜನಾ ವರದಿ ಸಿದ್ದಪಡಿಸಲು ಬಿಎಂಆರ್ ಸಿಎಲ್ ಎಂಟು ತಿಂಗಳ ಗಡುವು ನೀಡಿದೆ.

ಮೇ 28: ಎಂ.ಜಿ. ರಸ್ತೆ- ಬೈಯಪ್ಪನಹಳ್ಳಿ ಮಧ್ಯೆ ಮೆಟ್ರೊ ರೈಲು ಸಂಚಾರ ವ್ಯತ್ಯಯಮೇ 28: ಎಂ.ಜಿ. ರಸ್ತೆ- ಬೈಯಪ್ಪನಹಳ್ಳಿ ಮಧ್ಯೆ ಮೆಟ್ರೊ ರೈಲು ಸಂಚಾರ ವ್ಯತ್ಯಯ

ಸುಮಾರು 15ಸಾವಿರ ಕೋಟಿ ರೂ. ವೆಚ್ಚದಲ್ಲಿ ಮೆಟ್ರೋಮಾರ್ಗ್ ನಿರ್ಮಿಸಲು ಉದ್ದೇಶಿಸಲಾಗಿದೆ. ನಿರ್ಮಾಣವಾವಾದರೆ ಹೆಬ್ಬಾಳದಿಂದ ಆಗರ, ಕೋರಮಂಗಲ, ಡೈರಿ ವೃತ್ತದ ಮೂಲಕ ಮಾರ್ಗ ಹಾದು ಹೋಗಲಿದೆ. ಸುತ್ತಮುತ್ತಲಿನ ಲಕ್ಷಾಂತರ ಜನರ ಸಂಚಾರ ಮತ್ತಷ್ಟು ಸುಗಮವಾಗಲಿದೆ. ಪ್ರಸ್ತುತ ಈ ಮಾರ್ಗವು ಮೆಟ್ರೋ ಮಾರ್ಗ ನಿರ್ಮಾಣದ ಮೂರನೇ ಹಂತವಾ ಇಲ್ಲವೇ ಈ ಮಾರ್ಗವನ್ನು ಸರ್ಕಾರ ಪ್ರತ್ಯೇಕವಾಗಿ ಪರಿಗಣಿಸುತ್ತದೆಯೋ? ಎಂಬುದು ತಿಳಿಯಬೇಕಿದೆ.

Sarjapur-Hebbal Namma Metro Line: Date Extended to Submit DPR

ಟೆಂಡರ್‌ನಲ್ಲಿ ಪಾಲ್ಗೊಂಡ ಸಂಸ್ಥೆಗಳು

ಬಿಎಂಆರ್ ಸಿಎಲ್ ಕರೆದ ಟೆಂಡರ್‌ನಲ್ಲಿ ದೆಹಲಿಯ ಇಂಟಿಗ್ರೆಟೆಡ್ ಮಲ್ಟಿ ಮಾಡೆಲ್ ಟ್ರಾನ್ಸಿಸ್ಟ್ ಸಿಸ್ಟಮ್, ಕೊರೆಯಾ ರೈಲ್ ರೋಡ್ ಟೆಕ್ನಿಕಲ್ ಕಾರ್ಪೋರೇಷನ್, ಅರ್ಬನ್ ಮಾಸ್ ಟ್ರಾನ್ಸಿಸ್ಟ್ ಕಂಪನಿ, ಕನ್ಸಲ್ಟಿಂಗ್ ಎಂಜಿನಿಯರ್ ಗ್ರೂಪ್, ಆರ್ ಐಟಿಇಎಸ್ ಲಿಮಿಟೆಡ್ ಸೇರಿದಂತೆ ಇನ್ನಿತರ ಹಲವು ಕಂಪನಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ. ಇದರಲ್ಲಿ ಸರ್ಕಾರದ ಬೆಂಬಲ ಪಡೆದಿರುವ ಸಂಸ್ಥೆಯಾದ ಆರ್ ಐಟಿಇಎಸ್ ಲಿಮಿಟೆಡ್ ಸುಮಾರು ಆರು ವರ್ಷದ ಹಿಂದೆಯೇ ಈ 37ಕಿ.ಮೀ. ಮಾರ್ಗದ ಕಾರ್ಯಸಿದ್ಧತಾ ಯೋಜನೆ ಸಿದ್ದಪಡಿಸಿತ್ತು ಎನ್ನಲಾಗಿದೆ.

ಹೊಸೂರು ತನಕ ಮೆಟ್ರೋ ಮಾರ್ಗ ವಿಸ್ತರಣೆಗೆ ಸರ್ಕಾರದ ಅನುಮೋದನೆಹೊಸೂರು ತನಕ ಮೆಟ್ರೋ ಮಾರ್ಗ ವಿಸ್ತರಣೆಗೆ ಸರ್ಕಾರದ ಅನುಮೋದನೆ

ಸಂಚಾದ ದಟ್ಟಣೆ ಸಮೀಕ್ಷೆ, ಪರ್ಯಾಯ ಮಾರ್ಗ ವ್ಯವಸ್ಥೆ, ಸಾಮಾಜಿಕ ಮತ್ತು ಪರಿಸರದ ಮೇಲಿನ ಪ್ರಭಾವ, ವಿದ್ಯುತ್ ಅಗತ್ಯತೆ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಡಿಪಿಆರ್ ಯೋಜನೆಗೆ ಮೆಟ್ರೋ ಎಂಟು ತಿಂಗಳ ಗಡುವು ನೀಡಿದೆ. ಈ ಹಿಂದೆ ಮೆಟ್ರೋದ ಮೊದಲ ಹಂತದ ಒಟ್ಟುತ್ತ 42ಕಿ.ಮೀ.ಗೆ ದೆಹಲಿಯ ಮೆಟ್ರೋ ಸಂಸ್ಥೆ ಡಿಪಿಆರ್ ಸಿದ್ದಪಡಿಸಿತ್ತು. ಎರಡನೆ ಹಂತದ 72ಕಿ.ಮೀ. ಮಾರ್ಗಕ್ಕೆ ಆರ್ ಐಟಿಇಎಸ್ ಲಿಮಿಟೆಡ್ ಕಂಪನಿ ಡಿಪಿಆರ್ ಒದಗಿಸಿತ್ತು, ಪ್ರಗತಿಯಲ್ಲಿರುವ ಮೆಟ್ರೋ 2ಎ ಮತ್ತು 2ಬಿ ಯ ಒಟ್ಟು ಸುಮಾರು 58ಕಿ.ಮೀ.ಕಾಮಗಾರಿ ಡಿಪಿಆರ್ ವರದಿಯನ್ನು ಬಿಎಂಆರ್ಸಿಎಲ್ ಸಂಬಂಧಿತ ಸಂಸ್ಥೆಗಳು ಸಿದ್ಧಪಡಿಸಿವೆ ಎಂದು ತಿಳಿದು ಬಂದಿದೆ.

Sarjapur-Hebbal Namma Metro Line: Date Extended to Submit DPR

ಸುರಂಗ ಮತ್ತು ಎತ್ತರಿಸಿದ ಮಾರ್ಗ ನಿರ್ಮಾಣ

ನಗರದಲ್ಲಿ ಮೆಟ್ರೋ ಮಾರ್ಗದ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುವಾಗಲೇ ಹೆಬ್ಬಾಳ-ಸರ್ಜಾಪುರ ಮಾರ್ಗ ಕುರಿತು ಪ್ರಸ್ತಾವನೆ ಇತ್ತು. ಆದರೆ ಕಾರಣಾಂತರಳಿಂದ ಇಷ್ಟು ವರ್ಷ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಈ ಮಾರ್ಗವು ಹೆಬ್ಬಾಳದಿಂದ ಕೋರಮಂಗಲ ವರೆಗೆ ಸುರಂಗ ನಂತರ ಅಲ್ಲಿಂದ ಸರ್ಜಾಪುರವರೆಗೆ ಎತ್ತರಿಸಿದ ಮಾರ್ಗ ನಿರ್ಮಿಸಲು ಬಿಎಂಆರ್ ಸಿಎಲ್ ಉದ್ದೇಶಿಸಿದೆ ಎಂದು ಅಧಿಕಾರಿಕಗಳು ಮಾಹಿತಿ ನೀಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

Recommended Video

ಕತ್ತೆ ಹಾಲಿನಿಂದ 17 ಲಕ್ಷಕ್ಕೂ ಅಧಿಕ ದುಡಿಮೆ: ಮಂಗಳೂರಿನ ಈ ವ್ಯಕ್ತಿಯ ಯಶೋಗಾಥೆ | Oneindia Kannada

English summary
Metro Line of 37 KM from Hebbal to Sarjapur is important in the Bengaluru Metro Project. Many companies are bidding for the work. BMRCL has extended the period to submit DPR on this project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X