ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

RRನಗರ: ಡಿ.ಕೆ.ಶಿವಕುಮಾರ್ ಕುಟುಂಬದ ಸದಸ್ಯ ಕಾಂಗ್ರೆಸ್ ಅಭ್ಯರ್ಥಿ? ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಅ 2: ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಮೂರು ಪಕ್ಷಗಳು ಯಾರನ್ನು ತಮ್ಮ ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಲಿದೆ ಎನ್ನುವುದು ತೀವ್ರ ಕುತೂಹಲಕ್ಕೀಡು ಮಾಡಿದೆ.

ಅದರಲ್ಲೂ ಪ್ರಮುಖವಾಗಿ, ಕಾಂಗ್ರೆಸ್ ನಲ್ಲಿ ಹೊಸಹೊಸ ಹೆಸರುಗಳು ಓಡಾಡುತ್ತಲೇ ಇದೆ. ಜೊತೆಗೆ, ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಉಪಚುನಾವಣೆ: ಡಿ.ಕೆ.ಶಿವಕುಮಾರ್ ಹೇಳಿದ ಅಚ್ಚರಿಯ ಅಭ್ಯರ್ಥಿ ಇವರೇನಾ? ಉಪಚುನಾವಣೆ: ಡಿ.ಕೆ.ಶಿವಕುಮಾರ್ ಹೇಳಿದ ಅಚ್ಚರಿಯ ಅಭ್ಯರ್ಥಿ ಇವರೇನಾ?

ಎರಡು ದಿನದ ಹಿಂದೆ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರ ಜೊತೆಗೆ ಸಭೆ ನಡೆಸಿದ್ದ ಸ್ಥಳೀಯ ಸಂಸದ ಡಿ.ಕೆ.ಸುರೇಶ್, ಯಾರೇ ಅಭ್ಯರ್ಥಿಯಾಗಲಿ, ಒಗ್ಗಟ್ಟಿನ್ನಿಂದ ಹೋರಾಡಬೇಕು ಎಂದು ಮನವಿ ಮಾಡಿದ್ದಾರೆ.

ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ವಿಚಾರದಲ್ಲಿ ಹಲವು ಹೆಸರು ಕೇಳಿ ಬಂದಿದ್ದರೂ, ಒಂದು ದಿನದ ಹಿಂದೆ, ಡಿಕೆಶಿ ಕುಟುಂಬದ ಸದಸ್ಯರೊಬ್ಬರ ಹೆಸರು ಕೇಳಿ ಬಂದಿದೆ ಮತ್ತು ಇದಕ್ಕೆ ಡಿಕೆಶಿ ಸ್ಪಷ್ಟನೆಯನ್ನು ನೀಡಿದ್ದಾರೆ. ಡಿಕೆಶಿ ಕುಟುಂಬದ ಯಾರ ಹೆಸರು ಕೇಳಿ ಬರುತ್ತಿದೆ? ಮುಂದೆ ಓದಿ..

ಶಿರಾದಲ್ಲಿ ಟಿ.ಬಿ.ಜಯಚಂದ್ರ ಬಹುತೇಕ ಅಲ್ಲಿನ ಅಭ್ಯರ್ಥಿ

ಶಿರಾದಲ್ಲಿ ಟಿ.ಬಿ.ಜಯಚಂದ್ರ ಬಹುತೇಕ ಅಲ್ಲಿನ ಅಭ್ಯರ್ಥಿ

ಶಿರಾ ಮತ್ತು ರಾಜರಾಜೇಶ್ವರಿ ನಗರ ಅಸೆಂಬ್ಲಿಯ ಉಪಚುನಾವಣೆ ನವೆಂಬರ್ ಮೂರರಂದು ನಡೆಯಲಿದೆ. ಶಿರಾದಲ್ಲಿ ಟಿ.ಬಿ.ಜಯಚಂದ್ರ ಬಹುತೇಕ ಅಲ್ಲಿನ ಅಭ್ಯರ್ಥಿ. ಆದರೆ, ಆರ್.ಆರ್.ನಗರದಲ್ಲಿ ಟಿಕೆಟ್ ಅಂತಿಮ ಮಾಡುವುದು ಕಾಂಗ್ರೆಸ್ಸಿಗೆ ಅಷ್ಟು ಸುಲಭವಾಗುತ್ತಿಲ್ಲ. ಕಾರಣ, ಟಿಕೆಟ್ ಗಾಗಿನ ಪೈಪೋಟಿ ಮತ್ತು ಕಾದು ನೋಡುವ ತಂತ್ರ.

ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ

ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ

ದಿವಂಗತ ಐಪಿಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರ ಹೆಸರೂ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಇದರ ಜೊತೆಗೆ, ಆದಿಚುಂಚನಗಿರಿ ಶ್ರೀಗಳನ್ನು ಕುಸುಮಾ ಮತ್ತು ಅವರ ತಂದೆ ಹನುಮಂತರಾಯಪ್ಪ ಭೇಟಿಯಾಗಿ, ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಡಿಕೆಶಿ ಕುಟುಂಬದ ಯಾರ ಹೆಸರು ಕೇಳಿ ಬಂದಿದ್ದು?

ಉಪಚುನಾವಣೆ: RRನಗರದಿಂದ ಡಿ.ಕೆ.ಸುರೇಶ್ ಕೊಟ್ಟ ಬ್ರೇಕಿಂಗ್ ನ್ಯೂಸ್ಉಪಚುನಾವಣೆ: RRನಗರದಿಂದ ಡಿ.ಕೆ.ಸುರೇಶ್ ಕೊಟ್ಟ ಬ್ರೇಕಿಂಗ್ ನ್ಯೂಸ್

ಡಿ.ಕೆ.ಶಿವಕುಮಾರ್ ಅವರ ಭಾವೀ ಅಳಿಯ ಅಮರ್ಥ್ಯ

ಡಿ.ಕೆ.ಶಿವಕುಮಾರ್ ಅವರ ಭಾವೀ ಅಳಿಯ ಅಮರ್ಥ್ಯ

ನಾಲ್ಕೈದು ಹೆಸರಿನ ನಡುವೆ, ಕಾಫಿ ಡೇ ಮಾಲಕ, ದಿವಂಗತ ಸಿದ್ದಾರ್ಥ್ ಅವರ ಪುತ್ರ, ಡಿ.ಕೆ.ಶಿವಕುಮಾರ್ ಅವರ ಭಾವೀ ಅಳಿಯ ಅಮರ್ಥ್ಯನ ಹೆಸರೂ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಇದಕ್ಕೆ ಡಿಕೆಶಿ ಸ್ಪಷ್ಟನೆಯನ್ನು ನೀಡಿದ್ದಾರೆ.

Recommended Video

ಒಂದು ದಿನಾನೂ ಕಡ್ಡಿ ಕರ್ಪೂರ ಹಚ್ಲಿಲ್ಲಾ!! | Oneindia Kannada
ಡಿ.ಕೆ.ಶಿವಕುಮಾರ್ ಕುಟುಂಬದ ಸದಸ್ಯ ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ? ಸ್ಪಷ್ಟನೆ

ಡಿ.ಕೆ.ಶಿವಕುಮಾರ್ ಕುಟುಂಬದ ಸದಸ್ಯ ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ? ಸ್ಪಷ್ಟನೆ

ಡಿಕೆಶಿ ತಮ್ಮ ಭಾವೀ ಅಳಿಯನನ್ನು ಕಣಕ್ಕಿಳಿಸಲು ಉತ್ಸುಕರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ, "ಇದೆಲ್ಲಾ ಗಾಳಿಸುದ್ದಿ, ಇದನ್ನು ಯಾರೂ ನಂಬಬೇಡಿ. ನನ್ನ ಕುಟುಂಬದಿಂದ ಯಾರೂ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ"ಎಂದು ಹೇಳುವ ಮೂಲಕ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ.

English summary
RR Nagar Assembly Bypoll: Congress Candidate, KPCC President DK Shivakumar Clarification,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X