ಬೆಂಗಳೂರಿಗೆ ಶೀಘ್ರದಲ್ಲೇ 287 ಕಿಮೀ ಉದ್ದದ ರಿಂಗ್ ರೈಲು ಯೋಜನೆ- ಮಾಹಿತಿ, ವಿವರ

ಬೆಂಗಳೂರು, ನವೆಂಬರ್‌ 28: ಬೆಂಗಳೂರಿನ ಸುತ್ತಲೂ ರಿಂಗ್ ರೈಲು ಮಾರ್ಗವನ್ನು ರಚಿಸಲು ಯೋಜನೆ ರೂಪಿಸಲಾಗಿದ್ದು, ಈ ನಿಟ್ಟಿನಲ್ಲಿ ಪ್ರಥಮ ಹಂತದ ಅಧ್ಯಯನಕ್ಕಾಗಿ 7 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸೋಮವಾರ ಯಶವಂತಪುರ ರೈಲು ನಿಲ್ದಾಣ ಹಾಗೂ ಕರ್ನಾಟಕದ ಇತರೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು, ಬೆಂಗಳೂರಿನ ಸುತ್ತಮುತ್ತ ಇರುವ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಮಾಲೂರು ಮುಂತಾದ ಪಟ್ಟಣಗಳಿಂದ ಎಂಟು ಮಾರ್ಗಗಳನ್ನೊಳಗೊಂಡ ವೃತ್ತಾಕಾರದ ರೈಲು ಮಾರ್ಗ ಇದಾಗಿದೆ ಎಂದು ತಿಳಿಸಿದರು.

Ring Rail Project For Bengaluru Soon Says Railway Minister Ashwini Vaishnav

ಈ ರಿಂಗ್ ರೈಲು ಮಾರ್ಗ ಒಟ್ಟು ಉದ್ದ 287 ಕಿ.ಮೀ. ಇರಲಿದ್ದು, ಪೂರ್ವ ಅಧ್ಯಯನ ಮತ್ತು ಜೋಡಣೆ ಅಧ್ಯಯನಕ್ಕೆ 7 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಅಧ್ಯಯನದಿಂದ ಬಂದ ವರದಿ ಪರಿಶೀಲನೆ ಬಳಿಕ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸುತ್ತೇವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಬೆಂಗಳೂರಿನಿಂದ ಸ್ಥಳೀಯ ರೈಲು ಸೇವೆ ನೀಡಲು ಹಾಗೂ ಈಗ ಕಾರ್ಯಾಚರಣೆ ಮಾಡುತ್ತಿರುವ ರೈಲು ಮಾರ್ಗಗಳ ಮೇಲೆ ಒತ್ತಡ ಕಡಿಮೆ ಮಾಡಲು ಬೆಂಗಳೂರಿನ ಹೊರವಲಯದ ಸುತ್ತ 287 ಕಿಮೀ. ಉದ್ದದ ವೃತ್ತಾಕಾರದ ರೈಲು ಮಾರ್ಗ ಸಿದ್ದವಾಗಲಿದೆ. ಈ ಯೋಜನೆಯು ಬೆಂಗಳೂರು ಸಬ್ ಅರ್ಬನ್ ರೈಲು ಮತ್ತು ನಮ್ಮ ಮೆಟ್ರೋಗೆ ಪೂರಕವಾಗಿ ಕೆಲಸ ಮಾಡಲಿದೆ. ನೈಋತ್ಯ ರೈಲ್ವೇ ಈ ಸಾಹಸ ಕಾರ್ಯಕ್ಕೆ ಮುಂದಾಗಿದ್ದು, ಅಂತಿಮ ಸ್ಥಳ ಗುರುತಿಸಲು ಮತ್ತು ದ್ವಿಪಥದ ವೃತ್ತಾಕಾರದ ರೈಲು ಸಂಪರ್ಕಕ್ಕೆ ಸಮೀಕ್ಷೆ ನಡೆಸಲು ರೈಲ್ವೇ ಸಚಿವಾಲಯ ತಿಳಿಸಿದೆ.

ಈ ರಿಂಗ್ ರೈಲು ಮಾರ್ಗ ಬೆಂಗಳೂರು ಹೊರವಲಯದ ನಿಡವಂದ, ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು, ಹೀಲಳಿಗೆ, ಸೋಲೂರು ಮತ್ತು ಮತ್ತೆ ನಿಡವಂದವನ್ನು ಸಂಪರ್ಕಿಸಲಿದೆ. ನಿಡವಂದದಿಂದ ದೊಡ್ಡಬಳ್ಳಾಪುರವರೆಗೆ 40.9 ಕಿಮೀ, ದೊಡ್ಡಬಳ್ಳಾಪುರದಿಂದ ದೇವನಹಳ್ಳಿವರೆಗೆ 28.5 ಕಿಮೀ, ದೇವನಹಳ್ಳಿಯಿಂದ ಮಾಲೂರುವರೆಗೆ 46.5 ಕಿಮೀ, ಮಾಲೂರಿನಿಂದ ಹೀಲಳಿಗೆವರೆಗೆ 52 ಕಿಮೀ, ಹೀಲಳಿಗೆಯಿಂದ ಹೆಜ್ಜಾಲವರೆಗೆ 42 ಕಿಮೀ, ಹೆಜ್ಜಾಲದಿಂದ ಸೋಲೂರುವರೆಗೆ 43.5 ಕಿಮೀ, ಸೋಲೂರಿನಿಂದ ನಿಡವಂದವರೆಗೆ 34.2 ಕಿಮೀ ಸಂಪರ್ಕ ಕಲ್ಪಿಸಲಿದೆ.

ಈ ಸ್ಥಳಗಳಿಂದ ಇತರ ರೈಲು ನಿಲ್ದಾಣಗಳಿಗೆ ಸಂಪರ್ಕವಿದ್ದೇ ಇರುತ್ತದೆ. ನಿಡವಂದದಿಂದ ಚಿಕ್ಕಬಾಣಾವಾರ ಮೂಲಕ ಬೆಂಗಳೂರಿಗೆ ಸಂಪರ್ಕವಿದೆ. ಮತ್ತೆ ಬೆಂಗಳೂರು ಕಂಟೋನ್ಮೆಂಟ್ ಮೂಲಕ ಮಾಲೂರಿಗೆ ಸಂಪರ್ಕವಿದೆ. 287 ಕಿಮೀ ಮಾರ್ಗದಲ್ಲಿ ಹೋಗುವ ಮತ್ತು ಮರಳುವ ರೈಲು ಸೇವೆ ಲಭ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+