ವೋಲ್ವೋ ಬಸ್ ಗಳ ಪ್ರಯಾಣ ದರ ಮತ್ತೆ ಇಳಿಕೆ

ಬೆಂಗಳೂರು, ಮಾರ್ಚ್ 1: ಸಾರ್ವಜನಿಕರು ಪ್ರಾಯೋಗಿಕವಾಗಿ ಸಮೂಹ ಸಾರಿಗೆ ಬಳಸುವಂತೆ ಪ್ರೋತ್ಸಾಹಿಸಲು ವಜ್ರ ಬಸ್ ಸೇವೆಯ ಪ್ರಯಾಣ ದರದಲ್ಲಿ ಶೇ.37 ರಷ್ಟು ಕಡಿತಗೊಳಿಸಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಾ.1 ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

2018 ರ ಜನವರಿ ತಿಂಗಳಿನಲ್ಲಿ ಪ್ರಾಯೋಗಿಕವಾಗಿ ವಜ್ರ ಸೇವೆಗಳ ಪ್ರಯಾಣ ದರವನ್ನು ಶೇ.5 ರಷ್ಟು ಇಳಿಕೆ ಮಾಡಲಾಗಿತ್ತು. ಈ ದರ ಪರಿಷ್ಕರಣೆಯನ್ನು ಒಂದು ತಿಂಗಳ ಅವಧಿಗೆ ಅಂದರೆ ಫೆ.28 ರ ವರೆಗೆ ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಶೇ.37 ರಷ್ಟು ದರ ಇಳಿಕೆ ಮಾಡಲಾಗಿದ್ದು ಈ ದರ ಪರಿಷ್ಕರಣೆಯನ್ನು ಮೇ31 ರವರೆಗೆ ವಿಸ್ತರಿಸಲಾಗಿದೆ.

Revised fair of Volvo buses extended till may 31

ಮೇಖ್ರಿ ವೃತ್ತ, ಹೆಬ್ಬಾಳ, ಎಸ್ಟೀಮ್ ಮಾಲ್, ಕೋಗಿಲು ಕ್ರಾಸ್ ನಿಂದ ಕೆಐಎಗೆ ಸಂಚರಿಸುವ ವಾಯುವಜ್ರ ಬಸ್ ಗಳಲ್ಲಿ ಜಿಎಸ್ ಟಿ (ಶೇ.5 ) ಮತ್ತು ಟೋಲ್ ದರ ಪ್ರತಿ ಪ್ರಯಾಣಿಕರಿಗೆ 12 ರೂ ಹೊರತುಪಡಿಸಿ, ಪ್ರಯಾಣ ದರ ಪರಿಷ್ಕರಿಸಲಾಗಿದೆ. ಹುಣಸಮಾರನಹಳ್ಳಿಯಿಂದ ಕೆಐಎ ಗೆ ಹೊಸದಾಗಿ ದರ 100 ರೂ ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+