ಕಮಿಷನರೇಟ್ ವ್ಯಾಪ್ತಿ ಪೊಲೀಸರಿಗೆ ಬಿಗ್ ರಿಲೀಫ್: ಕಡ್ಡಾಯ ವರ್ಗ ಇಲ್ಲ

ಬೆಂಗಳೂರು, ನವೆಂಬರ್ 15: ಐದು ವರ್ಷ ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕೆಂಬ ನಿಯಮವನ್ನು ಸರ್ಕಾರ ರದ್ದುಪಡಿಸಿ ಆದೇಶ ಹೊರಡಿಸಿದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಕಮಿಷನರೇಟ್ ವ್ಯಾಪ್ತಿಯಲ್ಲಿ ಐದು ವರ್ಷ ಕೆಲಸ ಮಾಡಿದ ಪೊಲೀಸರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕೆಂಬ ನಿಯಮವನ್ನು ಜಾರಿಗೊಳಿಸಿತ್ತು. ಇತ್ತೀಚೆಗೆ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಸಿಸಿಬಿಗಳನ್ನು ಈ ನಿಯಮದಿಂದ ಹೊರಗಿಟ್ಟು ಕುಮಾರಸ್ವಾಮಿ ಸರ್ಕಾರ ಆದೇಶ ಹೊರಡಿಸಿತ್ತು. ಬುಧವಾರ ಕಮಿಷನರೇಟ್ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗಗಳಿಗೆ ಅನ್ವಯಿಸುವಂತೆ ಈ ನಿಯಮಗಳನ್ನು ಸರ್ಕಾರ ಹಿಂಪಡೆದಿದೆ.

ಇದರ ಮೂಲಕ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಿಂದಿನ ಸರ್ಕಾರದ ಬಹುಮುಖ್ಯ ಆದೇಶವನ್ನು ಹಿಂಪಡೆದಂತಾಗಿದೆ.

Relief for police staff under city Commissionerates

ವಾರದ ಹಿಂದೆ ಐದು ವರ್ಷ ಸೇವಾವಧಿ ನಿಯಮದಿಂದ ಸಿಸಿಬಿಯನ್ನು ಪ್ರತ್ಯೇಕಗೊಳಿಸಿದ ಸರ್ಕಾರವು ಈಗ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗಗಳಿಗೂ ಆ ನಿಯಮಗಳನ್ನು ಹಿಂಪಡೆದುಕೊಂಡಿದೆ, ಇದರೊಂದಿಗೆ ಬೆಂಗಳೂರು ಹಳೆ ಅಧಿಕಾರಿಗಳ ದಂಡು ಮರು ಪ್ರವೇಶಕ್ಕೂ ಬಾಗಿಲು ತೆರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+