ಬಿಡಿಎ ಜಾಗದಲ್ಲಿರುವ ಅಕ್ರಮ ನಿವೇಶನ, ಮನೆ ಸಕ್ರಮಕ್ಕೆ ಶಿಫಾರಸು

ಬೆಂಗಳೂರು, ಏಪ್ರಿಲ್ 15: ಬಿಡಿಎ ಜಾಗದಲ್ಲಿರುವ ಅಕ್ರಮ ನಿವೇಶನ, ಮನೆ ಸಕ್ರಮಕ್ಕೆ ಸಚಿವ ಸಂಪುಟ ಉಪ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದೆ.

ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿರುವ ಅಕ್ರಮ ಮನೆ ಮತ್ತು ನಿವೇಶನಗಳನ್ನು ಸಕ್ರಮಗೊಳಿಸುವ ಸಂಬಂಧ 1976ರ ಬಿಡಿಎ ಕಾಯ್ದೆಗೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಮಿತಿ ತೀರ್ಮಾನಿಸಿದೆ.

ಒಂದೊಂದು ಅಳತೆಯ ನಿವೇಶನಗಳಿಗೆ ಒಂದೊಂದು ರೀತಿಯ ದಂಡಕ್ಕೆ ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಗರಿಷ್ಠ 120/100 ಚದರಡಿ ಅಳತೆವರೆಗಿನ ನಿವೇಶನಗಳು ಮತ್ತು ಅವುಗಳಲ್ಲಿ ಕಟ್ಟಿರುವ ಮನೆಗಳನ್ನು ಸಕ್ರಮಗೊಳಿಸಬಹುದೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

Recommendation For BDA Illegal Home And Sites Into Legal

ಈ ತೀರ್ಮಾನದಿಂದ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ವಶಪಡಿಸಿಕೊಂಡಿರುವ ಜಮೀನುಗಳಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡವರು ದಂಡವನ್ನು ಪಾವತಿಸಿ ಸಕ್ರಮ ಮಾಡಿಕೊಳ್ಳಬಹುದಾಗಿದೆ.

ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳ ಪೈಕಿ ಕೆಲವು ಭೂ ಮಾಲೀಕರು ಪರಿಹಾರದ ಮೊತ್ತ ಪಡೆದ ನಂತರವೂ ಬೇರೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದರು. ಅಂತಹ ನಿವೇಶನಗಳಲ್ಲಿ ಈಗ ಮನೆಗಳನ್ನು ನಿರ್ಮಿಸಿದ್ದು, ಇವುಗಳನ್ನು ಸಕ್ರಮಗೊಳಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಬಿಡಿಎ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ ಅಕ್ರಮ ಮನೆ ಮತ್ತು ನಿವೇಶನಗಳನ್ನು ಸಕ್ರಮ ಕುರಿತು ಮಂಗಳವಾರ ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ರಚಿಸಿರುವ ಸಂಪುಟ ಸಮಿತಿ ತೀರ್ಮಾನಕ್ಕೆ ಬಂದಿದೆ.

ಕಾನೂನು ಇಲಾಖೆ ಸಲಹೆ ಪ್ರಕಾರ 12 ವರ್ಷಗಳ ಹಿಂದೆ ಪಡೆದ ನಿವೇಶನದಾರರಿಗೆ ಅನ್ವಯವಾಗುವ ಹಾಗೆ ಸಕ್ರಮ ಮಾಡಬೇಕೆನ್ನುವ ಸಲಹೆ ನೀಡಿದೆ. ಈ ರೀತಿಯ ಗಡುವು ವಿಧಿಸುವುದರ ಬದಲು ಇತ್ತೀಚಿನವರೆಗೆ ಯಾರ್ಯಾರು ಮನೆ ಕಟ್ಟಿಕೊಂಡಿರುತ್ತಾರೋ ಅಂತವರ ಮನೆಗಳನ್ನೂ ಸಕ್ರಮ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+