ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನಿಗೆ 20 ವರ್ಷಗಳ ಕಠಿಣ ಜೈಲು ಸಜೆ
ಬೆಂಗಳೂರು, ಜೂನ್ 20: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನಿಗೆ 20 ವರ್ಷಗಳ ಕಠಿಣ ಜೈಲು ಸಜೆಯನ್ನು ನ್ಯಾಯಾಲಯ ಘೋಷಿಸಿದೆ.
14 ವರ್ಷದ ಬಾಲಕಿಯನ್ನು ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು ಪ್ರೀತಿಸಿತ್ತಿರುವುದಾಗಿ ನಂಬಿಸಿ ಅತ್ಯಾಚಾರ ಮಾಡಿ ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ವ್ಯಕ್ತಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ನೀಡಲಾಗಿದೆ.
ನಂದಿನಿ ಲೇಔಟ್ ನಿವಾಸಿ ಮನೋಜ್(26) ಶಿಕ್ಷೆಗೆ ಗುರಿಯಾದವ. ಬಾಲಕಿ 2013ರ ನವೆಂಬರ್ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೋಜ್ ಕುಮಾರ್ ವಿರುದ್ಧ ಸಂತ್ರಸ್ತೆಯ ತಂದೆ ದೂರು ನೀಡಿದ್ದರು.

ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಫೇಸ್‌ಬುಕ್, ಮೊಬೈಲ್ ಫೋನ್‌ನಲ್ಲಿರುವ ಎಲ್ಲಾ ಸಂದೇಶಗಳು, ಚಾಟ್‌ಗಳನ್ನು ಅಳಿಸಿ ಹಾಕಿದ್ದ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆರ್ ಶಾರದಾ ಅವರು ಐಪಿಸಿ ಕಲಂ 376(3) ಜೊತೆಗೆ ಪೋಕ್ಸೊ ಕಾಯ್ದೆ ಕಲಂ 6ರ ಅಡಿ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ.












Click it and Unblock the Notifications