ಸಿಡಿ ಸಂತ್ರಸ್ತ ಯುವತಿ ಜಾರಕಿಹೊಳಿಗೆ ಕರೆ ಮಾಡಲು ಹೊಸ ಸಿಮ್ ಹಾಗೂ ಮೊಬೈಲ್ ಬಳಸಿದ್ದಳು?

ಬೆಂಗಳೂರು, ಮೇ. 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ನಡೆಸಿದ ತನಿಖೆಯಲ್ಲಿ ಕೆಲವು ಅತಿ ರೋಚಕ ಸಂಗತಿಗಳು ಬೆಳಕಿಗೆ ಬಂದಿದೆ. ಅಶ್ಲೀಲ ವಿಡಿಯೋ ಮಾಡಿದ್ದ ಸಿಡಿ ಸಂತ್ರಸ್ತ ಯುವತಿ ಅದನ್ನು ರಮೇಶ್ ಜಾರಕಿಹೊಳಿ ಮೊಬೈಲ್‌ಗೆ ಕಳುಹಿಸಿದ್ದಳು. ರಮೇಶ್ ಜಾರಕಿಹೊಳಿ ಜತೆ ಸಂಪರ್ಕ ಸಾಧಿಸಲು ಸಂತ್ರಸ್ತ ಯುವತಿ ಬಳಸಿದ್ದ ಮೊಬೈಲ್ ನಂಬರ್ ಆಕೆಯ ಹೆಸರಿನಲ್ಲೇ ಇರಲಿಲ್ಲ! ಆಕೆ ಶಂಕಿತ ಆರೋಪಿಯ ಮೊಬೈಲ್ ಸಿಮ್ ಹಾಗೂ ಮೊಬೈಲ್ ಬಳಸಿದ್ದಳು ಎಂಬ ಸಂಗತಿ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗಿದೆ.

Recommended Video

      ಬೆಡ್ ರೂಮಿನ ಅಸಲಿ ಕಹಾನಿ ಬಿಚ್ಚಿಟ್ಟ Ramesh jarakiholi! | Oneindia Kannada

      ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ತನಿಖಾ ಸಂಸ್ಥೆ ಮುಂದೆ ಹಾಜರಾಗಿ ರೋಚ ಸಂಗತಿಗಳನ್ನು ಬಿಚ್ಚಿಟ್ಟ ಬಳಿಕ ತನಿಖೆ ಹೊಸ ಆಯಾಮ ಪಡೆದುಕೊಂಡಿದೆ. ಸಂತ್ರಸ್ತ ಯುವತಿ ದಾಖಲಿಸಿದ್ದ ಅತ್ಯಚಾರ ಪ್ರಕರಣ "ಹನಿಟ್ರ್ಯಾಪ್ - ಬ್ಲಾಕ್ ಮೇಲ್" ಸ್ವರೂಪ ಪಡೆದುಕೊಂಡಿದೆ. ತಾನು ಆಕೆಯ ಜತೆ ಸಹಮತದ ದೈಹಿಕ ಸಂಪರ್ಕ ಹೊಂದಿರುವುದು ನಿಜ. ಇದು ಅತ್ಯಾಚಾರವಲ್ಲ, ನನಗೆ ಮೊದಲೇ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿದ್ದರು. ವಿಡಿಯೋ ಬಗ್ಗೆ ಹೆದರಿ ಹಣ ನೀಡಿದ್ದಾಗಿ ರಮೇಶ್ ಜಾರಕಿಹೊಳಿ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೇ ಆಕೆ ಜಾರಕಿಹೊಳಿಯನ್ನು ಭೇಟಿ ಮಾಡಲು ಬಂದಿದ್ದು ಇಬ್ಬರ ನಡುವಿನ ಸಂಭಾಷಣೆ, ಚಾಟಿಂಗ್, ದೂರವಾಣಿ ಕರೆ ಎಲ್ಲದರ ಬಗ್ಗೆ ಜಾರಕಿ ಹೊಳಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ.

      ಸಂತ್ರಸ್ತ ಯುವತಿ ಮೊದಲು ಬೆಳಗಾವಿಯ ಡ್ಯಾಮ್ ಡ್ರೋನ್ ಮೂಲಕ ಚಿತ್ರೀಕರಿಸುವ ಪ್ರಾಜೆಕ್ಟ್ ಹೆಸರಿನಲ್ಲಿ ಭೇಟಿ ಮಾಡಿದ್ದಾಗಿ ರಮೇಶ್ ಜಾರಕಿಹೋಳಿ ಎಸ್ಐಟಿ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ನಾವು ಡಾಕುಮೆಂಟರಿ ಮಾಡುತ್ತೀವಿ. ಬೆಳಗಾವಿಯಲ್ಲಿ ಡ್ಯಾಮ್ ಶೂಟ್ ಮಾಡಲಿಕ್ಕೆ ಜಲ ಸಂಪನ್ಮೂಲ ಇಲಾಖೆ ಅನುಮತಿ ಬೇಕಾಗಿದೆ ಎಂದು ಕೇಳಿಕೊಂಡು ಬಂದಿದ್ದಳು. ಡ್ರೋನ್ ನಲ್ಲಿ ಶೂಟ್ ಮಾಡಿ ಸೋಷಿಯಲ್ ಮೀಡಿಯದಲ್ಲಿ ಹಾಕುತ್ತೇವೆ. ನಮ್ಮದು ನಾಲ್ಕು ಜನರ ಟೀಮ್ ಇದೆ ಎಂದು ಹೇಳಿದ್ದಳು.

      Ramesh Jarkiholi CD case: Victim Girl used New SIM & Mobile for trap?


      ಇದರ ಬಗ್ಗೆ ಪರಿಶೀಲನೆ ಮಾಡಿ ಅಂತ ನನ್ನ ಆಪ್ತ ಕಾರ್ಯದರ್ಶಿಗೆ ತಿಳಿಸಿದ್ದೆ. ಅವರು ಪರಿಶೀಲನೆ ಮಾಡಿ ಆಕೆಗೆ ಡ್ರೋನ್ ಬಗ್ಗೆ ಯಾವ ಗಾಳಿ ಗಂಧ ಗೊತ್ತಿಲ್ಲ ಅಂತ ನನ್ನ ಗಮನಕ್ಕೆ ತಂದಿದ್ದರು. ಆನಂತರ ನಮ್ಮ ತಂಡದಲ್ಲಿ ಅನೇಕರು ಇದ್ದಾರೆ. ಅವರು ಡ್ರೋನ್ ಬಳಕೆ ಮಾಡುತ್ತಾರೆ ಎಂದೇಳಿಕೊಂಡು ಕೆಲವರು ಬಂದಿದ್ದರು ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ಸಂಭಾಷಣೆಯ ಅಡಿಯೋಗಳು ಸಿಡಿ ಸ್ಫೋಟದ ವೇಳೆ ಬಹಿರಂಗಗೊಂಡಿದ್ದು ಇಲ್ಲಿ ಗಮನಾರ್ಹ.

      ಇನ್ನು ಸಂತ್ರಸ್ತ ಉದ್ಯೋಗದ ಬಗ್ಗೆ ಮಾತುಕತೆ ಮಾಡಿದ್ದಾಳೆ. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿ ಅಮೇಲೆ ಕಾಣಲು ನೋಡಿದ್ದೆ. ಪದೇ ಪದೇ ನನ್ನನ್ನು ಭೇಟಿ ಮಾಡುತ್ತಿದ್ದಳು. ಇಬ್ಬರು ಸಮ್ಮತಿ ಮೇರೆಗೆ ಲೈಂಗಿಕ ಕ್ರಿಯೆ ನಡೆಸಿದ್ದೇವೆ. ಲೈಂಗಿಕ ಕ್ರಿಯೆ ನಡೆಸುವ ದೃಶ್ಯಗಳನ್ನು ರೆಕಾರ್ಡಿಂಗ್ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಯಾವ ಜಾಗದಲ್ಲಿ ಕ್ಯಾಮರಾ ಇಟ್ಟಿದ್ದರೊ ಕೂಡ ಗೊತ್ತಾಗಿಲ್ಲ. ಇದ್ದಕ್ಕಿದ್ದಂತೆ ಆಕೆ ನನ್ನ ಸಂಪರ್ಕದಿಂದ ದೂರವಾಗಿದ್ದಳು. ಆನಂತರ ನನ್ನ ಮೊಬೈಲ್ ಗೆ ವಿಡಿಯೋ ಬಂದಿತ್ತು. ಅದನ್ನು ಕೇಳಿದಾಗ, ತಮಾಷೆಗೆ ಮಾಡಿದ್ದಾಗಿ ಹೇಳಿದ್ದಳು. ನನಗೆ ಹಣಕ್ಕೆ ಬ್ಲಾಕ್ ಮೇಲ್ ಮಾಡಿದ್ದು ಅದನ್ನು ಕೊಟ್ಟಿದ್ದೇನೆ ಎಂದು ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

      ರಮೇಶ್ ಜಾರಕಿಹೊಳಿ ಹೇಳಿಕೆಗೂ, ಎಸ್ಐಟಿ ತನಿಖಾ ತಂಡ ಸಂಗ್ರಹಿಸಿರುವ ಸಾಂದರ್ಭಿಕ ಸಾಕ್ಷಿಗಳಿಗೂ ಹೋಲಿಕೆಯಾಗಿದ್ದು, ಎಸ್ಐಟಿ ಪೊಲೀಸರು ಪ್ರಕರಣ ಸಂಬಂಧ ಅಂತಿಮ ವರದಿ ತಯಾರಿಸುತ್ತಿದ್ದಾರೆ. ಸಿಡಿ ಸಂತ್ರಸ್ತ ಯುವತಿ ದಾಖಲಿಸಿರುವ ಅತ್ಯಾಚಾರ ಪ್ರಕರಣ ಸಂಬಂಧ ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+