ಹೌದು ನಾನು ರಾಜೀನಾಮೆ ನೀಡಿದ್ದೇನೆ ಎಂದ ರಾಮಲಿಂಗಾರೆಡ್ಡಿ
Recommended Video
ಬೆಂಗಳೂರು, ಜುಲೈ 6: ಹೌದು ನಾನು ರಾಜೀನಾಮೆ ನೀಡಿರುವುದು ಸತ್ಯ ಎಂದು ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ನಾನು ರಾಜೀನಾಮೆ ನೀಡಿರುವುದು ಸತ್ಯ ಆದರೆ ಕಾಂಗ್ರೆಸ್ ಮುಖಂಡರ ಮೇಲೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನನಗೆ ಬೇರೆ ಶಾಸಕರ ಬಗ್ಗೆ ಗೊತ್ತಿಲ್ಲ, ನನಗೆ ಪಕ್ಷ ಬಗ್ಗೆ ಕೆಲವು ಅಸಮಾಧಾನವಿದೆ ಹಾಗಾಗಿ ನಾನೊಬ್ಬನೇ ಬಂದು ರಾಜೀನಾಮೆ ನೀಡಿದ್ದೇನೆ, ಯಾವ ಗುಂಪಿಗೂ ನಾನು ಸೇರಿಕೊಂಡಿಲ್ಲ ಎಂದಿದ್ದಾರೆ.
ಮುಂದೆ ಯಾವ ಪಕ್ಷಕ್ಕೆ ಹೋಗುತ್ತೇನೆ ಎಂದು ನನಗೆ ಗೊತ್ತಿಲ್ಲ, ಸದ್ಯಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಅಷ್ಟೇ ಎಂದು ಹೇಳಿದ ಅವರು ಹೆಚ್ಚಿನ ವಿವರಣೆ ನೀಡಲು ಮುಂದಾಗಿಲ್ಲ.

ರಾಮಲಿಂಗಾರೆಡ್ಡಿಯವರು ನಾಲ್ಕು ಬಾರಿ ಸಚಿವರಾಗಿ, ಏಳು ಮಂದಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಸರ್ಕಾರದಲ್ಲಿ ತಮಗೆ ಮಂತ್ರಿ ಸ್ಥಾನ ಸಿಗದಿರುವುದೇ ತಮ್ಮ ರಾಜೀನಾಮೆಗೆ ಕಾರಣವಾ ಅಥವಾ ಅಂಥ ಬಲವಾದ ಕಾರಣವಾದರೂ ಏನಿತ್ತು ಎಂಬುದನ್ನು ತಿಳಿಸಲು ಹಿಂಜರಿದಿದ್ದಾರೆ.
ಮೊದಲನೇ ಹಂತದಲ್ಲಿ 13 ಮಂದಿ ಕಾಂಗ್ರೆಸ್ ಹಾಗೂ ಎರಡು ಜೆಡಿಎಸ್ ಶಾಸಕರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದು ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನದ ಕಡೆಗೆ ತೆರಳಿದ್ದಾರೆ.
ಎರಡನೇ ಹಂತದಲ್ಲಿ ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ, ಎಸ್‌ಟಿ ಸೋಮಶೇಖರ್ ರಾಜೀನಾಮೆ ಸಲ್ಲಿಸಲು ವಿಧಾನಸೌಧಕ್ಕೆ ಬಂದಿದ್ದಾರೆ.












Click it and Unblock the Notifications