ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮ್ಯಾ ಟ್ವೀಟ್ ಗೆ ಮೌನ ಮುರಿದು ಉತ್ತರಿಸಿದ ರಾಜೀವ್ ಚಂದ್ರಶೇಖರ್

|
Google Oneindia Kannada News

Recommended Video

ರಮ್ಯಾ ಟ್ವೀಟ್ ಗೆ ಕೊನೆಗೂ ಮೌನ ಮುರಿದು ಉತ್ತರಿಸಿದ ರಾಜೀವ್ ಚಂದ್ರಶೇಖರ್ | Oneindia Kannada

ಬೆಂಗಳೂರು, ಫೆಬ್ರವರಿ 07: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಕೆಸರೆರಚಾಟ ಆರಂಭವಾಗಿದೆ.

ಪ್ರಧಾನಿ ಮೋದಿಯವರ ಬೆಂಗಳೂರು ಭೇಟಿಯನ್ನು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್ ಸಾಲು ಸಾಲು ಟ್ವೀಟ್ ಗಳನ್ನು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ, "ಇಲ್ಲಿ ಸಂಪೂರ್ಣ ಪಟ್ಟಿ ಇದೆ. ಇದಕ್ಕೆ ನಿಮ್ಮಿಂದ ಉತ್ತರ ಬೇಕಾಗಿದೆ," ಎಂದು ಟ್ಟೀಟ್ ಮಾಡಿದ್ದರು.

ರಮ್ಯಾ ಟ್ವೀಟ್ ಗೆ ಉತ್ತರಿಸದೆ ಮೌನಕ್ಕೆ ಜಾರಿದ ರಾಜೀವ್ ಚಂದ್ರಶೇಖರ್ರಮ್ಯಾ ಟ್ವೀಟ್ ಗೆ ಉತ್ತರಿಸದೆ ಮೌನಕ್ಕೆ ಜಾರಿದ ರಾಜೀವ್ ಚಂದ್ರಶೇಖರ್

ಇದರಲ್ಲಿ ಅವರು ನಾಲ್ಕು ಅಂಶಗಳನ್ನು ಉಲ್ಲೇಖಿಸಿದ್ದರು. "1. ಕೆಎಂಎಫ್ ಗೆ ಕೋರಮಂಗಲದಲ್ಲಿ ಹಂಚಿಕೆ ಮಾಡಿದ ಭೂಮಿ 2. ಹಾಸನದಲ್ಲಿ ಹಂಚಿಕೆ ಮಾಡಿದ ಎಸ್ಇಝಡ್ ಜಮೀನು 3. ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಹಂಚಿಕೆಯಾದ 75 ಎಕರೆ ಭೂಮಿ 4. ದಾಬಸ್ ಪೇಟೆಯಲ್ಲಿ ಘಟಕ ಸ್ಥಾಪಿಸಲು ಕೆಐಎಡಿಬಿಯಿಂದ ವಶಕ್ಕೆ ಪಡೆದುಕೊಂಡ ಜಾಗ" ಎಂದಜು ಪಟ್ಟಿಗಳನ್ನು ಉಲ್ಲೇಖಿಸಿ ರಾಜೀವ್ ಚಂದ್ರಶೇಖರ್ ಅವರಿಗೆ ಉತ್ತರಿಸುವಂಥ ಪಂಥಾಹ್ವಾನ ಮಾಡಿದ್ದರು.

ಖಡಕ್ ಉತ್ತರ ನೀಡಿದ ರಾಜೀವ್ ಚಂದ್ರಶೇಖರ್

ಕೆಲ ಕಾಲ ಮೌನವಾಗಿಯೇ ಇದ್ದ ರಾಜೀವ್ ಚಂದ್ರಶೇಖರ್ ಇದೀಗ ಟ್ವೀಟ್ ಮೂಲಕ ಉತ್ತರಿಸಿದ್ದು, "ಸಿದ್ದರಾಮಯ್ಯನವರೇ, ನಿಮ್ಮಿಂದ ಏನೆಲ್ಲ ಮಾಡಲಾಗುತ್ತದೆಯೋ ಎಲ್ಲವನ್ನೂ ಮಾಡಿ. ನೀವು ಏನೇ ಮಾಡಿದರೂ ಫಲಿತಾಂಶ ಒಂದೇ. ನೀವು ನಮ್ಮ ಬೆಂಗಳೂರಿನಿಂದ ಮತ್ತು ಕರ್ನಾಟಕ ಸರ್ಕಾರದಿಂದ ನಿರ್ಗಮನದೆಡೆಗೆ ಸಾಗುತ್ತೀರಾ ಅಷ್ಟೇ" ಎಂದಿದ್ದಾರೆ. ಅಂದರೆ ಸಿದ್ದರಾಮಯ್ಯ ಅವರನ್ನು ಯಾರೇ ಸಮರ್ಥಿಸಿಕೊಂಡರೂ ಅಷ್ಟೇ, ಈ ಚುನಾವಣೆಯಲ್ಲಿ ಅವರಿಗೆ ಸೋಲು ಕಟ್ಟಿಟ್ಟಬುತ್ತಿಯೇ ಎಂದು ಪರೋಕ್ಷವಾಗಿ ರಮ್ಯಾ ಅವರನ್ನೂ ಟೀಕಿಸಿದ್ದಾರೆ.

ವಿವಾದ ಸೃಷ್ಟಿಸಿದ್ದ ಸಿದ್ದರಾಮಯ್ಯ ಟ್ವೀಟ್

ಫೆ.4 ರ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲೆಳೆದಿದ್ದರು. 'ಬಂಡವಾಳ ಹೂಡಿಕೆ ಮತ್ತು ಪ್ರಗತಿಯಲ್ಲಿ ನಂ.1 ಸ್ಥಾನದಲ್ಲಿರುವ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸ್ವಾಗತ' ಎಂಬ ಸಿದ್ದರಾಮಯ್ಯನವರ ಟ್ವೀಟ್ ವಿವಾದ ಸೃಷ್ಟಿಸಿತ್ತು. ಇದಕ್ಕೆ ಹಲವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.

ಸಿದ್ದರಾಮಯ್ಯ ದುರಾಡಳಿತಕ್ಕೆ ಅಂತ್ಯ ಬೇಕಿದೆ

ಸನ್ಮಾನ್ಯ ನರೇಂದ್ರ ಮೋದಿಯವರೇ - ನಮ್ಮ ಬೆಂಗಳೂರಿಗೆ ಆಗಮಿಸುತ್ತಿರುವ ನಿಮಗೆ ನನ್ನ ಆದರದ ಸ್ವಾಗತ - 450 ವರ್ಷ ಇತಿಹಾಸ ಹೊಂದಿರುವ ನಮ್ಮೆಲ್ಲರ ಹಮ್ಮೆಯ ಬೆಂಗಳೂರನ್ನು ಲೂಟಿ ಮಾಡುತ್ತಿರುವ ಸಿದ್ದರಾಮಯ್ಯನವರ ದುರಾಡಳಿತದ ಅಂತ್ಯಕ್ಕೆ ನಿಮ್ಮ ಭೇಟಿ ನಾಂದಿ ಹಾಡಲಿದೆ ಎಂದು ರಾಜೀವ್ ಚಂದ್ರಶೇಖರ್

ರಮ್ಯಾ ಅವರಿಗೂ ಟಾಂಗ್ ನೀಡಿದ್ದ ರಾಜೀವ್ ಚಂದ್ರಶೇಖರ್

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿಯ ನಂತರ 'ಪ್ರಧಾನಿ ನಶೆಯಲ್ಲಿ ಮಾತನಾಡಿದ್ದಾರೆ' ಎಂಬ ಬಾಲಿಶ ಹೇಳಿಕೆ ನೀಡಿದ್ದ ರಮ್ಯಾ ಅವರನ್ನೂ ರಾಜೀವ್ ಚಂದ್ರಶೇಖರ್ ತರಾಟೆಗೆ ತೆಗೆದುಕೊಂಡಿದ್ದರು. ಇಂಥ ಬಾಲಿಶ ನಡೆಯಿಂದ ಹಿಡಿದು, ವಯಸ್ಕರ ಭ್ರಷ್ಟಾಚಾರದವರೆಗೆ ಸಿದ್ದರಾಮಯ್ಯನವರ ದೂರದೃಷ್ಟಿ ವಿಸ್ತಾರವಾಗಿದೆ. ಆದರೆ ಜನರು ಸಿದ್ದರಾಮಯ್ಯ ಅವರ ದೂರದೃಷ್ಟಿಗೆ ಸದ್ಯದಲ್ಲೇ ಬೀಳ್ಕೊಡುಗೆ ನೀಡುತ್ತಾರೆ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದರು.

English summary
Rajeev Chandrasekhar on twitter responded to Congress social media head Divya spandana alias Ramya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X