'ನಮ್ಮ ಮೆಟ್ರೋ' ಕೋಚ್‌ನೊಳಗೆ ನುಗ್ಗಿದ ಮಳೆ ನೀರು
ಬೆಂಗಳೂರು, ಮೇ 07: ಬೆಂಗಳೂರಿನಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಕೋಚ್‌ಗಳಿಗೆ ಮಳೆ ನೀರು ನುಗ್ಗಿ ಪ್ರಯಾಣಿಕರನ್ನು ಸ್ಪಲ್ಪ ಹೊತ್ತು ಆತಂಕವನ್ನು ಉಂಟು ಮಾಡಿರುವ ಘಟನೆ ನಗರದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮನಲ್ಲಿ ನಡೆದಿದೆ.
ರೈಲುಗಳಿಗೆ ನೀರು ನುಗ್ಗಿ ಬೋಗಿಗಳ ನೆಲದ ಮೇಲೆ ನೀರು ತುಂಬಿ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂದು ಪ್ರಯಾಣಿಕರು ಆತಂಕ ಪಟ್ಟಿದ್ದರು. ಮಳೆ ನೀರು ನುಗ್ಗಿರುವುದನ್ನು ಕಂಡು ಪ್ರಯಾಣಿಸುತ್ತಿದ್ದ ವೇಳೆ ಹೆದರಿ ಆತಂಕ ಪಟ್ಟಿದ್ದರು.
ಪ್ಲಾಟ್‌ಫಾರ್ಮ್ 3ರ ಒಂದು ಭಾಗವು ಓವರ್‌ಹೆಡ್ ಕವರ್ ಹೊಂದಿಲ್ಲದ ಕಾರಣ ಬೆಂಗಳೂರಿನಲ್ಲಿ ಸುರಿಯುವ ಮಳೆ ಸಮಯದಲ್ಲಿ ರೈಲುಗಳ ಕೊನೆಯ ಎರಡು ಮೆಟ್ರೋ ಬೋಗಿಗಳಿಗೆ ನೀರು ಪ್ರವೇಶಿಸುತ್ತದೆ. ಹೀಗಾಗಿ ಮಟ್ರೋ ರೈಲಿಗೆ ಭಾರಿ ಮಳೆ ನೀರು ನುಗ್ಗಿ ನಿಲ್ಲುವ ನಿಂತ ನೀರಿನ ಸ್ಥಳಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಬೋಗಿ ತುಂಬಿದರೆ ನೀರು ಇಡೀ ರೈಲಿನ ಬೋಗಿಗಳು ತುಂಬಿ ಪ್ರವಾಹ ಎದುರಾಗಬಹುದು ಎಂದು ಮೆಟ್ರೋ ಪ್ರಯಾಣಿಕರು ಆತಂಕ ಪಟ್ಟಿದ್ದರು.

ಇನ್ನು ಆತಂಕ್ಕಕೆ ಒಳಗಾಗಿದ್ದ ಪ್ರಯಾಣಿಕರೊಬ್ಬರು "ಇಂತಹ ಘಟನೆಗಳು ತುಂಬಾ ಅಪಾಯಕಾರಿ ಬಿಎಂಆರ್ಸಿಎಲ್ ಈ ಕುರಿತು ಗಂಭೀರವಾಗಿ ಈ ಸಮಸ್ಯೆಯನ್ನು ಸರಿಪಡಿಸಬೇಕು'' ಎಂದು ಆಗ್ರಹಿಸಿದರು.

"ಈ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಬಹಳ ದಿನಗಳಿಂದ ತಿಳಿದಿತ್ತು. ಉಳಿದ ಪ್ಲಾಟ್‌ಫಾರ್ಮ್‌ಗಳಿಗೆ ಅವರು ಏಕೆ ಓವರ್‌ಹೆಡ್ ಶೆಲ್ಟರ್ ನಿರ್ಮಿಸಲು ಸಾಧ್ಯವಾಗಲಿಲ್ಲ? ಮೆಟ್ರೊ ರೈಲಿನ ನೆಲ ನುಣುಪಾಗಿದ್ದು, ಅಂತಹ ಮಹಡಿಯಲ್ಲಿ ನೀರು ನುಗ್ಗುವ ವೇಳೆ ಅವಘಡಗಳಿಗೆ ಕಾರಣವಾಗಬಹುದು. ಆದರೆ, ಇಂತಹ ಘಟನೆಗಳಿಂದ ಪ್ರಯಾಣಿಕರಿಗೆ ಸಾವು-ನೋವುಗಳು ಘಟನೆಗಳು ಸಂಭವಿಸಿದರೆ ಯಾರು ಹೊಣೆ,'' ಎಂದು ಮೆಟ್ರೋ ಪ್ರಯಾಣಿಕರು ಬಿಎಂಆರ್‍ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈಲಿನ ಕೋಚ್ ಒಳಗೆ ನೀರು ನುಗ್ಗಿರುವ ಬಗ್ಗೆ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ ಚವಾಣ್ ಅವರನ್ನು ಪ್ರಶ್ನಿಸಿದಾಗ, "ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಮೆಟ್ರೋ ಬೋಗಿಗಳಲ್ಲಿ ಮಳೆ ನೀರು ನುಗ್ಗಿದರೆ ಯಾವುದೇ ರೀತಿಯ ವಿದ್ಯುತ್ ಅಪಾಯಗಳು ಸಂಭವಿಸುವುದಿಲ್ಲ,'' ಎಂದು ಅವರು ತಿಳಿಸಿದರು.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
ಬೆಂಗಳೂರು vs ದೆಹಲಿ ಮೆಟ್ರೋ: ಲಗೇಜ್ ಶುಲ್ಕದ ವ್ಯತ್ಯಾಸಗಳ ಚರ್ಚೆ, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
IPL ಪ್ರೇಕ್ಷಕರಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ನಮ್ಮ ಮೆಟ್ರೋ ಸೇವೆ ವಿಸ್ತರಣೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ












Click it and Unblock the Notifications