ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ತಂಪೆರೆದ ಮಳೆ: ಇನ್ನೂ ಎರಡು ದಿನ ಮುಂದುವರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ನಗರದಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದ್ದಂತೆ ಹಲವೆಡೆ ಗುಡುಗು ಸಹಿತ ಮಳೆ ಆರಂಭವಾಗಿದೆ. ಇನ್ನೂ ಒಂದು ವಾರ ಬಿಟ್ಟು ಬಿಟ್ಟು ಮಳೆ ಬರುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನಲ್ಲಿ ಇನ್ನೂ ಇರುವ ಟ್ರಫ್ ನಿಂದಾಗಿ ನಗರದಲ್ಲಿ ಮಳೆ ಆರಂಭವಾಗಿದೆ. ಗುಡುಗು ಸಮೇತ ಮಳೆ ಆರಂಭವಾಗಿದೆ. ಜಯನಗರ, ಮಲ್ಲೇಶ್ವರಂ, ಕೆಂಗೇರಿ, ವಿಧಾನಸೌಧ , ಚಾಮರಾಜಪೇಟೆ, ಯಲಹಂಕದಲ್ಲಿ, ಯಶವಂತಪುರ ಸೇರಿದಂತೆ ಎಲ್ಲೆಡೆ ಮಳೆಯಾಗುತ್ತಿದೆ.

ಬೆಂಗಳೂರಲ್ಲಿ ಮತ್ತೆ ಎರಡು ದಿನ ಮಳೆ ಬರುವ ಸಾಧ್ಯತೆಬೆಂಗಳೂರಲ್ಲಿ ಮತ್ತೆ ಎರಡು ದಿನ ಮಳೆ ಬರುವ ಸಾಧ್ಯತೆ

ಏಪ್ರಿಲ್ ಆರಂಭದಲ್ಲೇ ಸೃಷ್ಟಿಯಾದ ಟ್ರಫ್ ನಿಂದಾಗಿ ಕೆಲ ದಿನಗಳವರೆಗೆ ಮಳೆ ಸುರಿದಿತ್ತು. ಟ್ರಫ್ ( ದಟ್ಟ ಮೋಡಗಳ ಸಾಲು) ಇನ್ನೂ ಮುಂದುವರೆದಿರುವುದರಿಂದ ಏ. 21 ರಿಂದ 23ರವರೆಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಎಂದು ಹವಮಾನ ಇಲಾಖೆ ನೀಡಿದೆ.

Rain brings pleasure to Bengaluru

ಏ.20ರಿಂದ 23ರವರಂದು ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ. ಏ.19ರಂದು ನಗರದಲ್ಲಿ 73 ಮಿ.ಮೀ ಮಳೆ ದಾಖಲಾಗಿತ್ತು. ಇದು ವಾಡಿಕೆಗಿಂತ 38ಮಿ.ಮೀ ಅಧಿಕವಾಗಿದೆ. ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಏ.23ರಿಂದ ಒಂದೆರೆಡು ದಿನ ಮಳೆಯಾಗುವ ಸಾಧ್ಯತೆ ಇದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬೆಂಗಳೂರು ನಗರದಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ಗರಿಷ್ಠ 34.8ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.2 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್ ನಲ್ಲಿ ಗರಿಷ್ಠ 34.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.9ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಲಬುರಗಿಯಲ್ಲಿ ಗರಿಷ್ಠ 41.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

English summary
As humidity increased for the past few days rain has brought some relief for the residents on Friday. Indian Meteorological Department has told that two more days rain fall expected in Bangalore and surrounding areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X