ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವ ಆರಂಭ
ಬೆಂಗಳೂರು, ಆಗಸ್ಟ್ 27: ಇಂದಿನಿಂದ (ಸೋಮವಾರ) ಆರಂಭವಾದ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವದಲ್ಲಿ ಎಲ್ಲ ಜಾತಿಯ ಮಂದಿ ಭಾಗವಹಿಸಿದ್ದು ಕಂಡುಬಂತು. ಬೆಂಗಳೂರಿನಲ್ಲಿರುವ ಹಲವು ರಾಯರ ಮಠಗಳಲ್ಲಿ ವೃಂದಾವನಕ್ಕೆ ವಿಶೇಷ ಅಲಂಕಾರವೂ ಸೇರಿದ ಹಾಗೆ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.
ಮೂರು ದಿನಗಳ ಕಾಲ ಆರಾಧನಾ ಮಹೋತ್ಸವ ನಡೆಯಲಿದ್ದು, ಹಲವೆಡೆ ನಾಲ್ಕನೇ ದಿನದಂದು ಸ್ವಯಂಸೇವಕರಾಗಿ ದುಡಿದವರಿಗೆ ಸನ್ಮಾನ ಮತ್ತು ವಿಶೇಷ ಭೋಜನ ವ್ಯವಸ್ಥೆ ಮಾಡಲಾಗುತ್ತದೆ. ಎನ್.ಆರ್.ಕಾಲೋನಿಯಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಕೂಡ ಸೋಮವಾರದಂದು ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ಹೊಸಕೆರೆಹಳ್ಳಿ, ಶ್ರೀನಗರ, ಎಜಿಎಸ್ ಲೇಔಟ್, ಕಲ್ಯಾಣಿ ರಾಯರ ಮಠ, ಬಸವನಗುಡಿಯ ನವ ಮಂತ್ರಾಲಯ ಮೃತ್ತಿಕಾ ವೃಂದಾವನ, ಕೆಂಗೇರಿ ಉಪನಗರ ರಾಯರ ಮಠ, ಜಯನಗರ ಐದನೇ ಬ್ಲಾಕ್ ನಲ್ಲಿರುವ ರಾಯರ ಮಠವೂ ಸೇರಿದಂತೆ ನಾನಾ ಕಡೆ ಉಚಿತವಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆಯಂತೂ ಸಂಜೆ ನಾಲ್ಕರ ಹೊತ್ತಿಗೂ ಪ್ರಸಾದ ಸ್ವೀಕರಿಸಲು ಜನರು ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮಧ್ಯಾರಾಧನೆಗೆ ವಿಶೇಷ ಮಹತ್ವ
ಮೂರು ದಿನಗಳ ಆರಾಧನಾ ಕಾರ್ಯಕ್ರಮವನ್ನು ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಕರೆಯಲಾಗುತ್ತದೆ. ಅದರಲ್ಲಿ ಮಧ್ಯಾರಾಧನೆಗೆ ವಿಶೇಷ ಮಹತ್ವ ಇದೆ. ಏಕೆಂದರೆ, ಆ ದಿನದಂದೇ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾದರು.

ಮೂರು ದಿನಗಳ ಕಾಲ ಉಚಿತವಾಗಿ ಪ್ರಸಾದ ವ್ಯವಸ್ಥೆ
ರಾಘವೇಂದ್ರ ಸ್ವಾಮಿಗಳು ಮಾಧ್ವ ಮಠದ ಪರಂಪರೆಗೆ ಸೇರಿದವರಾದರೂ ಅವರಿಗೆ ಇತರ ಜಾತಿ, ಧರ್ಮದವರೂ ಕೂಡ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಈ ಆರಾಧನೆ ವೇಳೆ ಮೂರು ದಿನಗಳ ಕಾಲ ಉಚಿತವಾಗಿ ಪ್ರಸಾದ ವ್ಯವಸ್ಥೆ ಇರುವುದರಿಂದ ಅದಕ್ಕೆ ಬೇಕಾದ ಆಹಾರ ವಸ್ತುಗಳು ಹಾಗೂ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಾರೆ.

ಸ್ವಯಂ ಸೇವಕರಾಗಿ ದುಡಿಯುತ್ತಾರೆ
ರಾಘವೇಂದ್ರ ಸ್ವಾಮಿಗಳು ಆರಾಧನೆ ನಡೆಯುವ ಮೂರು ದಿನಗಳ ಕಾಲ ಕೆಲವರು ಅಡುಗೆ ಬಡಿಸುವುದಕ್ಕೆ ಸೇರಿದಂತೆ ಇತರ ಕೆಲಸ-ಕಾರ್ಯಗಳಿಗೆ ಅಂತಲೇ ಸ್ವಯಂ ಸೇವಕರಾಗಿ ದುಡಿಯುತ್ತಾರೆ. ತಮ್ಮ ಇತರ ಕೆಲಸ-ಕಾರ್ಯಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಸೇವೆ ಸಲ್ಲಿಸುವವರೂ ಇದ್ದಾರೆ.

ಟೇಬಲ್ ಗಳ ಮೇಲೆ ಕೂಡ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ
"ಟೇಬಲ್ ಗಳ ಮೇಲೆ ಕೂಡ ಸಾರ್ವಜನಿಕರಿಗೆ ಪ್ರಸಾದ (ಊಟದ) ವ್ಯವಸ್ಥೆ ಮಾಡಲಾಗಿದೆ. ಸೋಮವಾರದಂದು ಐದಾರು ಸಾವಿರಕ್ಕೂ ಹೆಚ್ಚು ಮಂದಿ ಬಂದಿದ್ದಾರೆ. ನಾಳೆ ಹಾಗೂ ನಾಡಿದ್ದು ಇನ್ನೂ ಹೆಚ್ಚು ಮಂದಿ ಬರುವ ಸಾಧ್ಯತೆ ಇದೆ. ರಾಯರ ಕೃಪೆಗೆ ಪಾತ್ರರಾಗಲು ಸ್ವಯಂಸೇವಕರಾಗಿ ಕೂಡ ಸಾಕಷ್ಟು ಮಂದಿ ಬಂದಿದ್ದಾರೆ" ಎಂದು ನವ ಮಂತ್ರಾಲಯ ಎಂದು ಕರೆಸಿಕೊಳ್ಳುವ ಧರ್ಮಸ್ಥಳ ಛತ್ರದ ಎದುರಿಗೆ ಇರುವ ರಾಯರ ಮಠದಲ್ಲಿ ವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದವರ ಪೈಕಿ ಒಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.












Click it and Unblock the Notifications