Property: ಬೆಂಗಳೂರು ಆಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹ: ವಿಧಾನಸಭೆಯಲ್ಲಿ ಗಂಭೀರ ಚರ್ಚೆ!

Property Tax: ಬೆಂಗಳೂರಿನಲ್ಲಿ ಆಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಿಸುವ ಬಗ್ಗೆ ವಿಧಾನಸಭೆಯಲ್ಲಿ ಗಂಭೀರವಾದ ಚರ್ಚೆಗಳು ನಡೆದಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಆಸ್ತಿದಾರರಿಂದ ಭರ್ಜರಿ ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡುತ್ತಿದೆ. ಆದರೆ ಬೆಂಗಳೂರಿನಲ್ಲಿ ಇ ಖಾತಾ ಹಾಗೂ ಆಸ್ತಿ ತೆರಿಗೆಯಲ್ಲಿ ಆಗುತ್ತಿರುವ ಸಮಸ್ಯೆಗಳು ಹಾಗೂ ಗೊಂದಲಗಳಿಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗಂಭೀರವಾದ ಚರ್ಚೆ ನಡೆದಿದ್ದು. ಬಿಜೆಪಿ ಈ ವಿಚಾರವನ್ನು ಪ್ರಸ್ತಾಪಿಸಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ವಿಧಾನವು ಮೈಕ್ರೋಫೈನಾನ್ಸ್‌ ಮಾದರಿಯಲ್ಲಿ ಇದೆ ಎಂದು ಹೇಳಲಾಗಿದೆ. ಅಲ್ಲದೆ ಖಾತಾಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆದಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಇತಿಹಾಸದಲ್ಲೇ ಅನುಸರಿಸದೆ ಇರುವಂತಹ ಹೊಸ ವಿಧಾನಗಳನ್ನು ಅನುಸರಿಸುತ್ತಿದೆ. ಬಿಬಿಎಂಪಿಯ ಇ ಖಾತಾ ಮಾದರಿಯಿಂದ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವವರು ಸಹ ಇದೀಗ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿದ್ದಾರೆ. ಆದರೆ, ಆಸ್ತಿ ಹರಾಜು ಹಾಗೂ ದುಪ್ಪಟ್ಟು ದಂಡದಂತಹ ಅತ್ಯಂತ ಕಠಿಣ ಕ್ರಮಗಳನ್ನು ಬಿಬಿಎಂಪಿ ಅನುಸರಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

Property Tax Collection From Bengaluru Property Owners and E Khata Serious Debate in Assembly

ಬಿಬಿಎಂಪಿಯು ಖಾಸಗಿ ಸಂಸ್ಥೆಗಳಂತೆ ಹಾಗೂ ಮೈಕ್ರೊಫೈನಾನ್ಸ್‌ ಮಾದರಿ ಅನುಸರಿಸುತ್ತಿದೆ ಎಂದು ಬಿಜೆಪಿ ಹೇಳಿದೆ. ಈ ವಿಷಯವಾಗಿ ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾವನೆ ಮಾಡಲಾಗಿದೆ. ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳಿಗೆ ಟಾರ್ಗೆಟ್‌ ನೀಡಲಾಗಿದೆ ಎನ್ನುವ ವಿಷಯ ಗಂಭೀರ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಅವಧಿಯಲ್ಲಿ ಬೆಂಗಳೂರಿನಲ್ಲಿ ಆಸ್ತಿದಾರರಿಂದ 3 ಸಾವಿರ ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಮಾಡಿದ್ದಾರೆ. ನಮ್ಮ್ (ಕಾಂಗ್ರೆಸ್‌) ಅವಧಿಯಲ್ಲಿ ಇಲ್ಲಿಯ ವರೆಗೆ 4,556 ಕೋಟಿ ರೂಪಾಯಿ ಸಂಗ್ರಹ ಮಾಡಿದ್ದೇವೆ. ಇದೇ ಆರ್ಥಿಕ ವರ್ಷ ಮುಕ್ತಾಯ ಆಗುವುದರ ಒಳಗಾಗಿ 6 ಸಾವಿರ ಕೋಟಿ ರೂಪಾಯಿ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಂಡಿರುವುದಾಗಿ ಹೇಳಲಾಗಿದೆ. ಆದರೆ ಈ ನೆಪದಲ್ಲಿ ಆಸ್ತಿದಾರರಿಗೆ ಕಿರುಕುಳು ಕೊಡಲಾಗುತ್ತಿದೆ ಎಂದು ಬಿಜೆಪಿ ದೂರಿದೆ.

Take a Poll

10 ಸಾವಿರ ಪ್ರಾಪರ್ಟಿಗಳಿಗೆ ಬೀಗ: ಬೆಂಗಳೂರಿನಲ್ಲಿ ಈಗ ಬರೋಬ್ಬರಿ 10,000 ಸಾವಿರ ಪ್ರಾಪರ್ಟಿಗಳಿಗೆ ಬೀಗ ಹಾಕಲಾಗಿದೆ. ಕೆಲವು ಐಎಎಸ್‌ ಅಧಿಕಾರಿಗಳು ಶೇ9ರಷ್ಟು ದಂಡವನ್ನು ಹಾಕುತ್ತಿದ್ದಾರೆ. ಸಾವಿರಾರು ಮನೆಗಳಿಗೆ ಬಲವಂತವಾಗಿ ಬೀಗ ಜಡಿಯಾಗುತ್ತಿದೆ ಹಾಗೂ ಬಲವಂತವಾಗಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲಾಗುತ್ತಿದೆ ಎನ್ನುವ ಗಂಭೀರ ವಿಷಯ ಚರ್ಚೆಯಾಗಿದೆ.

Property Tax Collection From Bengaluru Property Owners and E Khata Serious Debate in Assembly

ಬಿಬಿಎಂಪಿ ಮೈಕ್ರೋಫೈನಾನ್ಸ್‌ ಮಾದರಿ ಅನುಸರಿಸುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ದಿನವೂ ಲಿಸ್ಟ್‌ ಹಾಕುತ್ತಿದ್ದಾರೆ. ಇಷ್ಟು ಆಸ್ತಿ ತೆರಿಗೆ ಸಂಗ್ರಹಿಸಬೇಕು ಎಂದು ಹೇಳುತ್ತಿದ್ದಾರೆ. 7,000 ಸಾವಿರ ರೂಪಾಯಿ ಟ್ಯಾಕ್ಸ್‌ ಇದ್ದರೆ ಸೆಸ್‌ 2 ಸಾವಿರದ ವರೆಗೆ ಇದೆ. 8,000 ಸಾವಿರದಿಂದ 10,000 ಸಾವಿರ ರೂಪಾಯಿ ಆಸ್ತಿ ತೆರಿಗೆ ಬಾಕಿ ಆಸ್ತಿಗಳಿಗೂ ಬೀಗ, ನೋಟಿಸ್ ಕೊಡಲಾಗುತ್ತಿದೆ. ಬೆಂಗಳೂರಿಗರು ಶೇ 60ರಷ್ಟು ತೆರಿಗೆ ಪಾವತಿ ಮಾಡುತ್ತಿದ್ದಾರೆ. ಇದೆನಾ ಅವರಿಗೆ ನಾವು ಕೊಡುತ್ತಿರುವ ಕೊಡುಗೆ ಎಂದು ಪ್ರಶ್ನೆ ಮಾಡಲಾಗಿದೆ.

Property Tax Collection From Bengaluru Property Owners and E Khata Serious Debate in Assembly

ಇ ಖಾತಾ ಬಗ್ಗೆಯೂ ಚರ್ಚೆ: 5 ಲಕ್ಷ ಖಾತಾಗಳು ಕ್ರ್ಯಾಶ್‌ ಆಗಿವೆ. ಜನ 145 ರೂಪಾಯಿ ಪಾವತಿ ಮಾಡಿದ ಖಾತಾ ಮಾಡಿಸಿಕೊಳ್ಳುತ್ತಿದ್ದಾರೆ. ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಇ ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನು ತಪ್ಪಿಸಬೇಕು. ಜನ ಇ ಖಾತಾ ಪಡೆದುಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+