Property: ಈ ಆಸ್ತಿದಾರರಿಗೆ ಶೇ 100ರಷ್ಟು ದಂಡ: ಬಿಬಿಎಂಪಿ ವಾರ್ನಿಂಗ್!

Property: ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿಯು ಬಿಗ್‌ಶಾಕ್‌ ಕೊಡಲು ಮುಂದಾಗಿದೆ. ಬೆಂಗಳೂರಿನ ಆಸ್ತಿದಾರರಿಗೆ ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಇನ್ನು ಐದು ದಿನಗಳು ಮಾತ್ರ ಬಾಕಿ ಉಳಿದಿವೆ. ಇದರ ಒಳಗಾಗಿ ಆಸ್ತಿ ತೆರಿಗೆ ಪಾವತಿ ಮಾಡಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಂಡ ಪಾವತಿ ಮಾಡಬೇಕಾಗುತ್ತದೆ. ಬೆಂಗಳೂರಿನಲ್ಲಿ 20.5 ಲಕ್ಷ ಜನರಲ್ಲಿ 3.49 ಲಕ್ಷ ಜನ ಇಲ್ಲಿಯವರೆಗೆ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಈ ರೀತಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಇದೀಗ ಆತಂಕ ಎದುರಾಗಿದೆ.

ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಕೆಲವರು ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಅದರಲ್ಲಿ 1.73 ಲಕ್ಷ ಜನರು 2 ವರ್ಷಕ್ಕೂ ಹೆಚ್ಚು ಸಮಯದಿಂದ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. 1.76 ಲಕ್ಷ ಜನ ಆಸ್ತಿದಾರರು 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಒಟ್ಟಾರೆಯಾಗಿ 3.49 ಲಕ್ಷ ಆಸ್ತಿದಾರರು ಬಿಬಿಎಂಪಿಗೆ 390 ಕೋಟಿ ರೂಪಾಯಿ ಮೊತ್ತದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Property Tax 100 Penalty for This Property Owner BBMP Warning

ಬೆಂಗಳೂರಿನಲ್ಲಿ ಯಾವ ಆಸ್ತಿದಾರರಿಗೆ ಎಷ್ಟು ದಂಡ ?

ಬೆಂಗಳೂರಿನಲ್ಲಿ ಯಾವ ಆಸ್ತಿದಾರರಿಗೆ ಎಷ್ಟು ದಂಡ ವಿಧಿಸಲಾಗುತ್ತದೆ ಎನ್ನುವ ಬಗ್ಗೆ ಬಿಬಿಎಂಪಿಯು ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಕಳೆದ 2 ವರ್ಷಗಳಿಂದಲೂ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರಿಗೆ ಶೇಕಡ 100ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ಅಂದರೆ ಒಟ್ಟಾರೆ 2 ವರ್ಷದ ಅವಧಿಯಿಂದ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರಿಗೆ ದಂಡ ವಿಧಿಸುವುದಾಗಿ ಹೇಳಲಾಗಿದೆ. ಇನ್ನು 2025-26ರ ಸಂಪೂರ್ಣ ಅವಧಿಯಲ್ಲಿ ಆಸ್ತಿಬಾಕಿದಾರರಿಗೆ ಶೇ. 15 ರಷ್ಟು ಸರಳ ಬಡ್ಡಿಯನ್ನು ಮಾತ್ರ ವಿಧಿಸಲಾಗುವುದು. ಇದಕ್ಕೆ ಶೇ. 100 ರಷ್ಟು ದಂಡ ಅನ್ವಯಿಸುವುದಿಲ್ಲ ಎಂದು ಮಾಹಿತಿ ನೀಡಿದೆ.

ಇ -ಖಾತಾ ಗುಡ್‌ನ್ಯೂಸ್‌ ಕೊಟ್ಟ ಬಿಬಿಎಂಪಿ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನ ಆಸ್ತಿದಾರರಿಗೆ ಇ -ಖಾತಾದಲ್ಲಿ ಗುಡ್‌ನ್ಯೂಸ್‌ ಕೊಟ್ಟಿದೆ. ಇ ಖಾತಾ ಪಡೆದುಕೊಳ್ಳಲು ಕೆಲವು ಆಸ್ತಿದಾರರು ಪರದಾಡುತ್ತಿದ್ದಾರೆ. ಇ ಖಾತಾವನ್ನು ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಖಾತೆ ನೀಡುವ ವಿನೂತನ ವ್ಯವಸ್ಥೆಯನ್ನು ಜಾರಿ ಮಾಡುವುದಕ್ಕೆ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ.

ಮನೆ ಮನೆಗೆ ಇ ಖಾತಾಗೆ ಏಪ್ರಿಲ್ ತಿಂಗಳಿನಿಂದ ಚಾಲನೆ ದೊರೆಯಲಿದೆ. ಪ್ರತಿಯೊಂದು ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ಯಾರದ್ದಾದರೂ ಆಸ್ತಿ ದಾಖಲೆ ತಪ್ಪಿಹೋಗಿದ್ದರೆ ಅಂತವರು ತಮ್ಮ ದಾಖಲೆಗಳನ್ನು ಮತ್ತೆ ನೀಡಬಹುದು. ಬೆಂಗಳೂರಿನಾದ್ಯಂತ ಈ ಯೋಜನೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿಯೂ ಹಾಗೂ ಜನರಿಗೆ ಶೀಘ್ರ ಇ ಖಾತಾ ನೀಡಲು ಕ್ರಮ ವಹಿಸಿರುವುದಾಗಿಯೂ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+