Bengaluru Property: ಬೆಂಗಳೂರಿನ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಕಾರಣವೇನು ?
ಬೆಂಗಳೂರು ಯಾವಾಗಲೂ ರಿಯಲ್ ಎಸ್ಟೇಟ್‌ಗೆ ಚಿನ್ನದ ಮೊಟ್ಟೆ ಅಂತಲೇ ಪರಿಗಣಿಸಲಾಗುತ್ತದೆ. ಅಭಿವೃದ್ಧಿ, ಮೆಟ್ರೋ ಹಾಗೂ ತಂತ್ರಜ್ಞಾನ ಸೇರಿದಂತೆ ವಿವಿಧ ಕಾರಣಗಳಿಗೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ಗೆ ಬಂಪರ್ ಬೆಲೆ ಬರುತ್ತಿದೆ. ಇದೀಗ ಕಳೆದ ಕೆಲವು ತಿಂಗಳು ಗಳಿಂದ ಈ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಭಾರೀ ಧಮಾಕ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ಉತ್ತರ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಪೂರಕವಾದ ವಾತಾವರಣವಿದೆ ಅಂತ ಹೇಳಲಾಗುತ್ತಿದೆ. ಇಲ್ಲಿ ವಸತಿ, ಮನೆ, ಫ್ಲಾಟ್ ಹಾಗೂ ವಾಣಿಜ್ಯ ಕಟ್ಟಡಗಳಿಗೂ ಭಾರೀ ಬೇಡಿಕೆ ಇದೆ. ಬೆಂಗಳೂರಿನ ಉತ್ತರ ಭಾಗದಲ್ಲಿ ಯಾವ ಕಾರಣಕ್ಕೆ ರಿಯಲ್ ಎಸ್ಟೇಟ್‌ಗೆ ಬಂಪರ್ ಬೆಲೆ ಬರುತ್ತಿದೆ. ಇಲ್ಲಿ ರಿಯಲ್ ಎಸ್ಟೇಟ್ ಯಾವ ರೀತಿ ಇದೆ ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಉತ್ತರ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಬಂಪರ್ ಬೆಲೆ ಬಂದಿದೆ. ಇಲ್ಲಿನ ಭೂಮಿಗೆ ಚಿನ್ನದ ಬೆಲೆ ಬರ್ತಿದೆ. ಒಂದು ಕಾಲದಲ್ಲಿ ಬೆಂಗಳೂರು ಉತ್ತರ ಭಾಗವು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಇದೀಗ ಇಲ್ಲಿ ರಿಯಲ್ ಎಸ್ಟೇಟ್‌ಗೆ ಭರ್ಜರಿ ಆದಾಯ ಹರಿದು ಬರುತ್ತಿದೆ. ಹೌದು ಇದೀಗ ಬೆಂಗಳೂರಿನ ಬಹುತೇಕ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಆದಾಯ ಬರುತ್ತಿದೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಪ್ರಸ್ತಾವನೆ ಬಂದ ಮೇಲೆ ಏಕಾಏಕಿ ರಿಯಲ್ ಎಸ್ಟೇಟ್ ಗ್ರಾಫ್ ಏರಿಕೆ ಕಾಣುತ್ತಿದೆ. ಆದರೆ ಬೆಂಗಳೂರಿನ ಉತ್ತರ ಭಾಗದಲ್ಲಿ ಇದಕ್ಕಿಂತ ಮೊದಲೇ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಆದಾಯ ಹಾಗೂ ಭರ್ಜರಿ ಬೆಲೆ ಬರ್ತಿದೆ.

ಬೆಂಗಳೂರಿನ ಉತ್ತರ ವಲಯದ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿರುವುದು ಇಲ್ಲಿ ಅಭಿವೃದ್ಧಿಯಾಗುತ್ತಿರುವ ಕೈಗಾರಿಕಾ ಪ್ರದೇಶ. ಹೆಬ್ಬಾಳ, ಯಲಹಂಕ ಹಾಗೂ ಪ್ರಮುಖ ಕೈಗಾರಿಕಾ ವಲಯವಾಗಿ ಇಲ್ಲಿ ಅಭಿವೃದ್ಧಿಯಾಗುತ್ತಿರುವಂತ ಏರೋಸ್ಪೇಸ್ ಪಾರ್ಕ್‌ನಂತಹ ಪ್ರಮುಖ ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆಯುತ್ತಿವೆ. ಅಲ್ಲದೆ ವಿವಿಧ ಪ್ರದೇಶಗಳಿಗೆ ಇಲ್ಲಿಂದ ಒಳ್ಳೆಯ ಸಂಪರ್ಕ ರಸ್ತೆಗಳಿವೆ. ಅಲ್ಲದೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತರ ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿ ಇರುವುದು ಹಾಗೂ ಇತ್ತೀಚಿನ ದಿನಗಳಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣೀಕರ ಸಂಖ್ಯೆ ಹೆಚ್ಚಳ, ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಬರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಈ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಭರ್ಜರಿ ಬರ್ತಿದೆ.
ಅಭಿವೃದ್ಧಿ ಯೋಜನೆಗಳು ಸಹ ಕಾರಣ
ಬೆಂಗಳೂರಿನ ಕೇಂದ್ರ ಹಾಗೂ ದಕ್ಷಿಣ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಆದಾಯವಿತ್ತು. ಈ ಭಾಗದಲ್ಲಿ ಮೊದಲಿನಿಂದಲೂ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಆಫರ್ ಇತ್ತು. ಆದರೆ, ಬೆಂಗೂರಿನ ಉತ್ತರ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಸಮಯ ಬಂದಿದೆ. ಬೆಂಗಳೂರಿನ ಈ ಭಾಗದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ಅಂತಲೇ ಹೇಳಬಹುದು. ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ಒಳ್ಳೆಯ ಆದಾಯ ಬಂದಿದೆ.
ಸಂಚಾರ ವ್ಯವಸ್ಥೆ ಅಭಿವೃದ್ಧಿ: ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಅಭಿವೃದ್ಧಿಯಾಗಿರುವುದು ಸಹ ಇಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಕಾರಣವಾಗಿದೆ. ಇಲ್ಲಿ ವಸತಿ ಹಾಗೂ ವಾಣಿಜ್ಯ ಆಸ್ತಿ ಮಾರಾಟದಲ್ಲಿ ಭರ್ಜರಿ ದಾಖಲೆ ಸೃಷ್ಟಿಯಾಗಿದೆ.
ಹೆಬ್ಬಾಳ ಮತ್ತು ಯಲಹಂಕದಂತ ಪ್ರದೇಶಗಳಿಂದ ನಗರದ ಮುಖ್ಯ ಭಾಗಕ್ಕೆ ಒಳ್ಳೆಯ ಸಂಚಾರ ವ್ಯವಸ್ಥೆ ಇದೆ. ಬೆಂಗಳೂರು ಉತ್ತರ ಭಾಗಕ್ಕೆ ನಮ್ಮ ಮೆಟ್ರೋ ವಿಸ್ತರಣೆ ಈ ಭಾಗದಲ್ಲಿ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆ ಸಹ ಅಭಿವೃದ್ಧಿಯಾದರೆ, ವ್ಯಾಪಾರ ಮತ್ತು ವಸತಿ ಬೆಳವಣಿಗೆಯ ಕೇಂದ್ರವಾಗಿ ಉತ್ತರ ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಬೆಂಗಳೂರಿನ ಉತ್ತರ ಭಾಗದಲ್ಲಿ ರಿಯಲ್ ಎಸ್ಟೇಟ್ ಬಂಪರ್ ಆಗುವುದಕ್ಕೆ ಮತ್ತೊಂದು ಮಹತ್ವದ ಕಾರಣವೆಂದರೆ. ಇಲ್ಲಿನ ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿ. ಟೆಕ್ ಪಾರ್ಕ್‌ಗಳು ಹಾಗೂ ವಾಣಿಜ್ಯ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ಹಲವು ಕಾರಣಗಳು ಇವೆ. ಐಟಿ ಬಿಟಿಗೆ ಹೋಗುವವರಿಗೆ ಇಲ್ಲಿನ ಕಂಪನಿಗಳು ಸಮೀಪದಲ್ಲಿ ಇರುವುದು ಸಹ ಫ್ಲಾಟ್ ಹಾಗೂ ಮನೆಗಳ ಖರೀದಿ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ ಅಂತ ಹೇಳಲಾಗಿದೆ.
ಎರಡನೇ ವಿಮಾನ ನಿಲ್ದಾಣ: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಸಹ ರಿಯಲ್ ಎಸ್ಟೇಟ್‌ಗೆ ಭರ್ಜರಿ ಧಮಾಕವನ್ನೇ ತಂದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಸಂದರ್ಭದಲ್ಲಿ ದೇವನಹಳ್ಳಿಯ ಜನ ಕೋಟ್ಯಾಧಿಪತಿಗಳಾಗಿದ್ದರು. ಅದೇ ರೀತಿ ಎರಡನೇ ವಿಮಾನ ನಿಲ್ದಾಣದಿಂದಲೂ ಲಕ್ ಬದಲಾಗುವ ನಿರೀಕ್ಷೆಯಲ್ಲಿ ನೆಲಮಂಗಲ ಹಾಗೂ ತುಮಕೂರಿನ ಜನ ಇದ್ದಾರೆ.
ಚಿನ್ನದ ಮೊಟ್ಟೆ: ಬೆಂಗಳೂರು ರಿಯಲ್ ಎಸ್ಟೇಟ್ ಅನ್ನು ಚಿನ್ನದ ಮೊಟ್ಟೆ ಅಂತಲೇ ಪರಿಗಣಿಸಲಾಗುತ್ತದೆ. ಬೆಂಗಳೂರಿನಲ್ಲಿ ನಿರಂತರ ಅಭಿವೃದ್ಧಿ ಹಾಗೂ ಮೆಟ್ರೋ, ಉಪ ನಗರ ರೈಲು ಹಾಗೂ ಸುರಂಗ ಮಾರ್ಗ ಸೇರಿದಂತೆ ವಿವಿಧ ಅಭಿವೃದ್ಧಿಗಳು ಹಾಗೂ ಹೂಡಿಕೆಯೂ ಹೆಚ್ಚಳವಾಗಿದೆ. ಈ ಎಲ್ಲಾ ಕಾರಣಗಳಿಂದ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ಗೆ ಒಳ್ಳೆಯ ಆದಾಯ ಹರಿದು ಬರ್ತಿದೆ.












Click it and Unblock the Notifications