ತಾಯಿಯ ಸ್ನೇಹಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಟೆಕ್ಕಿ: ಬಂಧನ

ಬೆಂಗಳೂರು, ಫೆಬ್ರವರಿ 11: ತಾಯಿಯ ಸ್ನೇಹಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಕಂಪನಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಯುವಕನೊಬ್ಬ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಕೋಲ್ಕತ್ತಸ ಮುಖರ್ಜಿ(23) ಎಂಬಾತನನ್ನು ಬಂಧಿಸಲಾಗಿದೆ.

ಎಂಜಿನಿಯರಿಂಗ್ ಪಧವೀಧರನಾಗಿರುವ ಮುಖರ್ಜಿ ಕೋಲ್ಕತ್ತಾದಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದಾರೆ. 39 ವರ್ಷದ ಸಂತ್ರಸ್ತೆ ಹಾಗೂ ಆರೋಪಿಯ ತಾಯಿ ಸ್ನೇಹಿತೆಯಾಗಿದ್ದಾರೆ. ಕೊಲ್ಕತ್ತಾ ಮೂಲದ ಕಂಪನಿಯು ನಗರದ ಯಶವಂತಪುರದಲ್ಲಿನ ತಾಜ್ ಹೋಟೆಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.

Private company employee tried to rape his mothers friend

ಆರೋಪಿ ತನ್ನ ತಾಯಿ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದ, ಇದೇ ಕಂಪನಿಯಲ್ಲಿ ಕೆಲಸ ಮಾಡುವ ಕೊಲ್ಕತ್ತಾದ ಮಹಿಳೆ ಕೂಡ ನಗರಕ್ಕೆ ಬಂದಿದ್ದು ಹೋಟೆಲ್‌ನಲ್ಲಿ ತಂಗಿದ್ದರು. ರಾತ್ರಿ 11.45ರ ಸುಮಾರಿಗೆ ಸಂತ್ರಸ್ತ ಮಹಿಳೆ ಕೊಠಡಿಗೆ ನೀರು ಕುಡಿಯುವ ನೆಪದಲ್ಲಿ ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಅಷ್ಟೇ ಅಲ್ಲದೆ ಆಕೆಯ ಬಳಿ ಬಲವಂತವಾಗಿ ದೈಹಿಕ ಸಂಪರ್ಕ ಸಾಧಿಸಲು ಒತ್ತಾಯಿಸಿದ್ದಾನೆ, ಬಾತ್‌ರೂಮಿನಲ್ಲಿ ಕೂಡಿ ಹಾಕಿ ಆಕೆಯ ಬಳಿ ಬಲವಂತವಾಗಿ ಸಿಗರೇಟ್ ಸೇದಿಸಿ ವಿಕೃತಿ ಮೆರೆದಿದ್ದಾನೆ. ಬಳಿಕ ಪೊಲೀಸರಿಗೆ ಆಕೆ ವಿಷಯ ತಿಳಿಸಿದ್ದಾಳೆ. ಆರ್‌ಎಂಸಿ ಯಾರ್ಡ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+