ಪೊಲೀಸ್ ಉನ್ನತ ಅಧಿಕಾರಿಯ ರಾಸಲೀಲೆ ವಿಡಿಯೋ ಕರ್ಮಕಾಂಡ
ಬೆಂಗಳೂರು, ಜುಲೈ 15: ಐಪಿಎಸ್ ಅಧಿಕಾರಿಯೊಬ್ಬರು ಮಹಿಳೆಯೊಬ್ಬರ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದ್ದು ಖಾಸಗಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ಐಪಿಎಸ್ ಅಧಿಕಾರಿ ಯೊಂದಿಗೆ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯ ಪತಿಯೇ ಐಪಿಎಸ್ ಅಧಿಕಾರಿ ವಿರುದ್ಧ ಆರೋಪ ಮಾಡಿದ್ದು, ಐಪಿಎಸ್ ಅಧಿಕಾರಿ ಭೀಮಾಶಂಕರ ಗುಳೇದ್ ಅವರು ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾರೆ ಎಂದು ಅವರು ಖಾಸಗಿ ಸುದ್ದಿವಾಹಿನಿಯಲ್ಲಿ ಆರೋಪಿಸಿದ್ದಾರೆ.
'ಐಪಿಎಸ್ ಅಧಿಕಾರಿ ನನಗೆ ಕಿರುಕುಳ ನೀಡುತ್ತಿದ್ದು, ಆತನ ಮತ್ತು ನನ್ನ ಪತ್ನಿಯ ಸಂಬಂಧದ ಬಗ್ಗೆ ಬಹಿರಂಗ ಪಡಿಸಿದರೆ ಸುಮ್ಮನೆ ಬಿಡುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ' ಎಂದು ಆತ ಆರೋಪಿಸಿದ್ದಾನೆ.

ಆದರೆ ಇದನ್ನು ಅಲ್ಲಗಳೆದಿರುವ ಆತನ ಪತ್ನಿ 'ನನ್ನ ಪತಿ ಹೇಳುತ್ತಿರುವುದು ಸುಳ್ಳು ಐಪಿಎಸ್ ಅಧಿಕಾರಿಯಿಂದ ನಮಗೆ ಯಾವುದೇ ಕಿರುಕುಳ ಆಗಿಲ್ಲ, ಬದಲಾಗಿ ನನ್ನ ಪತಿಯಿಂದಲೇ ನನಗೆ ಕಿರುಕುಳವಾಗಿದೆ, ಆತನೇ ನನಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾನೆ' ಎಂದಿದ್ದಾರೆ.












Click it and Unblock the Notifications