ಬೆಂಗಳೂರಿನ ಹಲವೆಡೆ ಮಾರ್ಚ್ 6 ರಂದು ವಿದ್ಯುತ್ ವ್ಯತ್ಯಯ

ಬೆಂಗಳೂರು, ಮಾರ್ಚ್ 04: ಬೆಂಗಳೂರಿನ ಹಲವೆಡೆ ಮಾರ್ಚ್ 06 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಮಾರ್ಚ್ 6 ರ ಶನಿವಾರ ದಕ್ಷಿಣ ಬೆಂಗಳೂರಿನ ಬಹುತೇಕ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬಾರಾಜಿರುವುದಿಲ್ಲ, ಬನಶಂಕರಿ 66/11 ಸಬ್‌ಸ್ಟೇಷನ್‌ನಲ್ಲಿ ವಿದ್ಯುತ್ ಕಾಮಗಾರಿ ಇರುವ ಕಾರಣ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು: ಕತ್ರಿಗುಪ್ಪೆ ವಾಟರ್ ಟ್ಯಾಂಕ್, ಪಿಪಿ ಲೇಔಟ್, ಕೆಂಪೇಗೌಡ ಲೇಔಟ್, ವಿಎಚ್‌ಬಿಸಿಎಸ್ ಲೇಔಟ್, ಕತ್ರಿಗುಪ್ಪೆ, ರಾಮರಾವ್ ಲೇಔಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

Power Shutdown In many areas Of Bengaluru On March 06

ಹಾಗೆಯೇ ಖೋಡೆ, ಸಾರಕ್ಕಿ ಆರ್‌ಬಿಐ ಸಬ್‌ ಸ್ಟೇಷನ್‌ನಲ್ಲಿ ಒಂದು ವಾರ ಪೂರ್ತಿ ವಿದ್ಯುತ್ ಇರುವುದಿಲ್ಲ ಎಂದು ಹೇಳಲಾಗಿದೆ. ಬಿಸಿಎಂಸಿ ಲೇಔಟ್, ತಿಪ್ಪಸಂದ್ರ ಹಾಗೂ ಚನ್ನಮ್ಮ ಗಾರ್ಡನ್, ಕೊತ್ತನೂರು ಮುಖ್ಯ ರಸ್ತೆ, ಆರ್‌ಬಿಐ ಲೇಔಟ್, ರೋಸ್ ಗಾರ್ಡನ್, ಆರ್‌ಬಿಐ ಲೇಔಟ್, ಸಿಂಧನೂರು ಚೌಲ್ಟ್ರಿಯಲ್ಲಿ ವಿದ್ಯುತ್ ಇರುವುದಿಲ್ಲ.

ಬೆಸ್ಕಾಂ ನೀಡಿರುವ ಮತ್ತೊಂದು ಪ್ರಕಟಣೆಯಲ್ಲಿ, ಹೊಸಕೆರೆಹಳ್ಳಿ, ಬಿಎಸ್‌ಕೆ 7ನೇ ಬ್ಲಾಕ್‌ನ ಮೂರನೇ ಹಂತ, ವೆಂಕಟಪ್ಪ ಲೇಔಟ್, ದತ್ತಾತ್ರೇಯ ನಗರ, ಸಪ್ತಗಿರಿ ಲೇಔಟ್, ಬನಶಂಕರಿ, ಇಟ್ಟಮಡು, ಟಿಜಿ ಲೇಔಟ್‌ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Recommended Video

      ಅನಾಮಿಕ ಕರೆಗೆ ಹೆದುರಿದ ಪೊಲೀಸ್ ತಂಡ!! | TAJ MAHAL in TROUBLE | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+