Power cut: ಬೆಂಗಳೂರಿನ ವಿವಿಧೆಡೆ ಇಂದು ಪವರ್ ಕಟ್, ಎಲ್ಲೆಲ್ಲಿ ನೋಡಿ
ಬೆಂಗಳೂರಿನ ಪ್ರಮುಖ ನಗರದ ವಿವಿಧ ಭಾಗದಲ್ಲಿ ಇಂದು ಅಂದರೆ, ನವೆಂಬರ್ 20ಕ್ಕೆ ವಿದ್ಯುತ್ ವ್ಯತ್ಯಾಸವಾಗಲಿದೆ ಎಂದು ಬೆಸ್ಕಾಂ ಸಂಸ್ಥೆ ಮಾಹಿತಿ ನೀಡಿದೆ. ಆಸ್ಟಿನ್ ಟೌನ್‌ನ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ಕೆಲಸ ಇರುವುದರಿಂದ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ನಗರದಲ್ಲಿ ಇಂದು ಬೆಳಿಗ್ಗೆಯಿಂದ ಸಂಜೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ. ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿವಿಧ ಭಾಗದಲ್ಲಿ ಪವರ್ ಕಟ್ ಆಗಲಿದೆ. ಆಸ್ಟಿನ್ ಟೌನ್‌ನ ವಿದ್ಯುತ್ ಕೇಂದ್ರದ ವ್ಯಾಪ್ತಿಯ ವಿವಿಧ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಇಂದು ಎಲ್ಲೆಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಾಸ
ಆಸ್ಪಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್ ರಸ್ತೆ, ವಿಜಾಜ್ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್, ಮ್ಯೂಸಿಯಂ ರಸ್ತೆ, ಅಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ವೈ.ಜಿ.ಪಾಳ್ಯ, ಕೆಎಸ್ಆರ್ಪಿ, ಐಟಿಸಿ ಹೋಟೆಲ್, ರಿಚ್ಮಂಡ್ ರಸ್ತೆ, ವನ್ನಾರ್‌ಪೇಟೆ, ಎಂ.ಜಿ.ರಸ್ತೆ, ಹೇಯ್ ರಸ್ತೆ, ಕಾನ್ವೆಂಟ್ ರಸ್ತೆ, ಎಸ್.ಎಲ್. ಅಪಾರ್ಟ್‌ಮೆಂಟ್, ರಿಚ್ಮಂಡ್ ಟೌನ್,ಬ್ರಂಟನ್ ರಸ್ತೆ, ಶೋಭಾ ಪರ್ಲ್, ಐಸಿಐಸಿ ಬ್ಯಾಂಕ್, ಎಂಬೆಸ್ಸಿ ಹೈಟ್ಸ್, ಆಭರಣ್ ಜ್ಯೂವೆಲರ್ಸ್. ಹರ್ಬನ್ ಲೈಫ್, ಆರ್‌ಎಂಝಡ್, ಅಶೋಕ್ ನಗರ, ಗರುಡ ಮಾಲ್, ದೊಮ್ಮಲೂರು, ನಂಜಪ್ಪ ವೃತ್ತ, ಸ್ಪೇನ್ ಗಾರ್ಡನ್, ಲಾಂಗ್‌ಫೋರ್ಡ್ ರಸ್ತೆ, ಬ್ರೆಟ್ ಸ್ಪೀಟ್. ಮಾರ್ಕಮ್ ರಸ್ತೆ, ಬ್ರಿಗೇಡ್ ರಸ್ತೆ, ವಾಣಿಜ್ಯ ಕಾಲೇಜು, ವಿಠಲ ಮಲ್ಯ ರಸ್ತೆ, ಸಿದ್ದಯ್ಯ ರಸ್ತೆ, ವುಡ್‌ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ನೀಲಸಂದ್ರ, ಆನೆಪಾಳ್ಯ, ಬಿಎಂಆರ್‌ಸಿಎಲ್,ಫುಡ್‌ವರ್ಲ್ಡ್ ರಸ್ತೆ, ಜಾನ್ಸನ್ ಮಾರುಕಟ್ಟೆ ಹಾಗೂ ಅಶೋಕನಗರ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಾಸವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಈ ಭಾಗದಲ್ಲಿ ಸಂಜೆಯ ವರೆಗೆ ಪವರ್ ಕಟ್
ಇನ್ನು ಬೆಂಗಳೂರಿನ ವಿವಿಧ ಭಾಗದಲ್ಲಿ ಸಂಜೆಯ ವರೆಗೆ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಶೋಭಾ ಇಂದ್ರಪ್ರಸ್ಥ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ದುರಸ್ತಿ ಕೆಲಸ ಇರುವುದರಿಂದ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಹಾಗೂ ಗ್ಲೋಬಲ್ ಮಾಲ್ ಸೇರಿದಂತೆ ವಿವಿಧ ಭಾಗದಲ್ಲಿ ಪವರ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಬೆಸ್ಕಾಂನಲ್ಲೂ ಬಿಲ್ ಪಾವತಿಸಬಹುದು
ಇನ್ನು ನೀವು ಇದೀಗ ವಿದ್ಯುತ್ ಬಿಲ್ ಅನ್ನು ಸುಲಭವಾಗಿ ಪಾವತಿ ಮಾಡಬಹುದು. ಇನ್ಮುಂದೆ ನೀವು ವಿದ್ಯುತ್ ಬಿಲ್ ಪಾವತಿಯನ್ನು ಬೆಸ್ಕಾಂನ ಅಧಿಕೃತ ವೆಬ್ ಸೈಟ್ ಮೂಲಕವೂ ಪಾವತಿಸಬಹುದು ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಬೆಸ್ಕಾಂನ ಅಧಿಕೃತ ವೆಬ್‌ಸೈಟ್ https://bescom.karnataka.gov.in ಗೆ ಭೇಟಿ ನೀಡಿ ಬಿಲ್ ಪಾವತಿ ಮಾಡಬಹುದು ಎಂದು ಬೆಸ್ಕಾಂ ತಿಳಿಸಿದೆ.
ಇದರ ಮೂಲಕ ನೀವು ಇನ್ಮುಂದೆ ಕಚೇರಿಗೆ ಹೋಗದೆ ಮೊಬೈಲ್‌ನ ಮೂಲಕವೂ ವಿದ್ಯುತ್ ಬಿಲ್ ಪಾವತಿ ಮಾಡಬಹುದಾಗಿದೆ. ಈಗಾಗಲೇ ಗೂಗಲ್ ಪೇನ ಮೂಲಕವೂ ನೀವು ಸರಳವಾಗಿ ವಿದ್ಯುತ್ ಬಿಲ್ ಪಾವತಿ ಮಾಡುವುದಕ್ಕೆ ಅವಕಾಶ ಇದೆ.












Click it and Unblock the Notifications