Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ಡಿಸೆಂಬರ್ 8ರ ವರೆಗೂ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಡಿಸೆಂಬರ್ 8ರ ವರೆಗೂ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ, ಸಮಯ ಹಾಗೂ ಕಾರಣ ಏನು ಎಂದು ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಡಿಸೆಂಬರ್ 8ರ ವರೆಗೂ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

ಒಂದು ವೇಳೆ ಸಮಯಕ್ಕಿಂತ ಮುಂಚಿತವಾಗಿ ಎಲ್ಲಾ ಕಮಾಗರಿ ಪೂರ್ಣ ಆದ್ರೆ ವಿದ್ಯುತ್ ಸರಬರಾಜು ಮುಂದುವರೆಸಲಾಗುವುದು ಎಂದು ತಿಳಿಸಿದೆ. ಇನ್ನೂ ಡಿಸೆಂಬರ್ 8ರ ವರೆಗೂ ಕೆಳಗಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರದೇಶದ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿದ್ಯುತ್ ಕಡಿತ 1ರಿಂದ 5 ಗಂಟೆಗಳವರೆಗೆ ಬದಲಾವಣೆ ಆಗಬಹುದು ಎಂದು ತಿಳಿಸಲಾಗಿದೆ.
ಎಲ್ಲೆಲ್ಲಿ ಕರೆಂಟ್ ಕಟ್?: ಬೆಂಗಳೂರಿನ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಇದೆ. ವೈಟ್‌ಫೀಲ್ಡ್, ಹೂಡಿ, ಐಟಿಪಿಎಲ, ಮಹದೇವಪುರ, ಶಿವಾಜಿನಗರ, ರಿಚ್‌ಮಂಡ್ ಟೌನ್ ಮತ್ತು ಎಂಜಿ ರಸ್ತೆಯ ಕೆಲವೆಡೆ ಕರೆಂಟ್ ಕಟ್ ಆಗಲಿದೆ ಎಂದು ತಿಳಿಸಿದೆ.
ಕೆಲವೆಡೆ ಕೇಬಲ್‌ಗಳು, ಸೇವಾ ಟ್ರಾನ್ಸ್ ಫಾರ್ಮರ್‌ಗಳನ್ನು ಬದಲಾವಣೆ ಮಾಡಲಾಗುತ್ತದೆ. ಅಲ್ಲದೆ, ಫೀಡರ್ ಲೈನ್‌ಗಳನ್ನು ನವೀಕರಿಸಲು ಹಾಗೂ ನಗರದಲ್ಲಿ ವಿದ್ಯುತ್ ಲೋಡಿಂಗ್ ಇರುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುವುದು ಎಂದು ತಿಳಿಸಿದೆ.
ಜೆಪಿ ನಗರ, ಜಯನಗರ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಉತ್ತರಹಳ್ಳಿ, ಪದ್ಮನಾಭನಗರ, ಅರೇಹಳ್ಳಿ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ನಾಗರಭಾವಿ, ಚಂದ್ರ ಲೇಔಟ್, ಮಾಗಡಿ ರಸ್ತೆ, ಹೆಬ್ಬಾಳ, ಸಂಜಯನಗರ, ಯಲಹಂಕ, ವಿದ್ಯಾರಣ್ಯಪುರ, ಆರ್‌ಟಿ ನಗರ, ಸಹಕಾರ ನಗರ, ವೈಟ್ ಫೀಲ್ಡ್, ಹೂಡಿ, ಕೆಆರ್ ಪುರಂ, ಐಟಿಪಿಎಲ್, ಮಹದೇವಪುರ, ವರ್ತೂರು, ಶಿವಾಜಿನಗರ, ಶಾಂತಿನಗರ, ರಿಚ್ಮಂಡ್ ಟೌನ್, ಲ್ಯಾಂಗ್ಫೋರ್ಡ್ ರಸ್ತೆಯ ಕೆಲವಯ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದ ಎಂದು ತಿಳಿಸಿದೆ.
ಇನ್ನೂ ಯಾವೆಲ್ಲಾ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ಮುಂಚಿತವಾಗಿ ಮೊಬೈಲ್ ಫೋನ್, ಲ್ಯಾಪ್‌ಟ್ಯಾಪ್, ಬ್ಯಾಟರಿ ಸೇರಿದಂತೆ ಇನ್ನಿತರ ಚಾರ್ಜಿಂಗ್ ಸಾಧನಗಳನ್ನು ಚಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದೆ. ಇಂತಹ ಸಲಹೆಯನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ವಿದ್ಯುತ್ ಕಡಿತದ ಒಂದು ದಿನ ಮುಂಚಿತವಾಗಿ ಈ ಸಲಹೆಯನ್ನು ನೀಡುತ್ತಲೇ ಬಂದಿದೆ.












Click it and Unblock the Notifications