Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ನವೆಂಬರ್ 18ರ ಸಂಜೆ 5 ಗಂಟೆವರೆಗೂ ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ನವೆಂಬರ್ 18ರ ಮಂಗಳವಾರ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎಂದು ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ನವೆಂಬರ್ 18ರ ಮಂಗಳವಾರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ತಿಳಿಯಿರಿ.

ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11 ಕೆ.ವಿ ಶೋಭಾ ಸಿಟಿ ಉಪ-ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆ ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ಎಂದು ಬೆಸ್ಕಾಂ ತಿಳಿಸಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?: ಶೊಭಾ ಸಿಟಿ, ಚೊಕ್ಕನಹಳ್ಳಿ, ಡೊಮಿನೊಸ್ ಪಿಜ್ಜಾ ಇನ್ ಪ್ಯಾರಡೈಸ್ ನೂರ್ ನಗರ, ಎಕ್ಸ್ ಸರ್ವಿಸ್‌ಮೆನ್ ಲೇಔಟ್, ಪೋಲೀಸ್ ಕ್ವಾಟ್‌ರ್ಸ್, ಆರ್‌ಕೆ ಹೆಗ್ಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ನಾಗೇನಹಳ್ಳಿ ಗ್ರಾಮ, ಎಸ್ತರ್ ಹರ‍್ಮೋನಿಕ್ ಲೇಔಟ್, ಬಾಲಾಜಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದ ಎಂದು ಬೆಸ್ಕಾಂ ತಿಳಿಸಿದೆ.
ಅಲ್ಲದೆ, ನಾಗೇನಹಳ್ಳಿ ಜಿಮ್, ಸ್ಲಂ ಬರ್ಡ್ ಮತ್ತು ಬೆಂಚ್ ರಾಯಲ್ ವುಡ್, ಅರ್ಕಾವತಿ ಲೇಔಟ್ ಥಣಿಸಂದ್ರ, ಆರ್‌ಕೆ ಹೆಗಡೆ ನಗರ, ಬೆಳ್ಳಹಳ್ಳಿ ಗ್ರಾಮ, ತಿರುಮೇನಹಳ್ಳಿ ಗ್ರಾಮ, ಮಿತ್ತಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ, ವಿಧಾನಸೌಧ ಲೇಔಟ್, ರ‍್ನಾಟಕ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಇದಕ್ಕೆ ಸಾರ್ವಜನಿಕರು ಸಹರಿಸಬೇಕು ಅಂತಲೂ ಮನವಿ ಮಾಡಿದೆ.
ಬೆಸ್ಕಾಂ ಸಲಹೆ ಏನು?: ಇನ್ನೂ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೋ ಅಂತಹ ಪ್ರದೇಶಗಳ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಮೊಬೈಲ್, ಲ್ಯಾಪ್‌ಟಾಪ್, ಬ್ಯಾಟರಿ ಸೇರಿದಂತೆ ಇನ್ನಿತರೆ ಚಾರ್ಜಿಂಗ್ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವುದು ಅಂತಾ ಸಲಹೆ ನೀಡಿದೆ. ಹೀಗೆ ವಿದ್ಯುತ್ ವ್ಯತ್ಯಯ ಮಾಡುವ ಒಂದು ದಿನದ ಮುಂಚೆಯೇ ಗ್ರಾಹಕರಿಗೆ ಬೆಸ್ಕಾಂ ಈ ಸಲಹೆಯನ್ನು ನೀಡುತ್ತಾ ಬಂದಿದೆ.












Click it and Unblock the Notifications