Bengaluru Power Cut: ಬೆಂಗಳೂರಿನ ಈ ಭಾಗಗಳಲ್ಲಿ ನವೆಂಬರ್ 13ರ ಸಂಜೆವರೆಗೂ ಕರೆಂಟ್‌ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ನವೆಂಬರ್ 13ರಂದು ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಹಾಗೂ ಕಾರಣ ಏನು ಎಂದು ತಿಳಿಯಿರಿ.

ತುರ್ತ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆ ಬೆಂಗಳೂರಿನ ಈ ಭಾಗಗಳಲ್ಲಿ ಇಂದು (ನವೆಂಬರ್ 13) ಬೆಳಗ್ಗೆಯಿಂದ ಸಂಜೆಯರೆಗೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Power Cut in Bengaluru s These Areas on November 13 Know details

66/11ಕೆ.ವಿ ಬಾಣಸವಾಡಿ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕೈಗೊಳ್ಳಲಾಗಿದೆ. ಈ ಹಿನ್ನೆಲೆ ಇಂದು (ನವೆಂಬರ್ 13) ಅಂದರೆ ಗುರುವಾರ ಬೆಳಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಎಲ್ಲೆಲ್ಲಿ ಕರೆಂಟ್‌ ಕಟ್‌?: ಹೊರಮಾವು ಪಿ ಅಂಡ್ ಟಿ ಲೇಔಟ್, ನಿಸರ್ಗ ಕಾಲೋನಿ, ನಂದನ ಕಾಲೋನಿ, ಆಶೀರ್ವಾದ್ ಕಾಲೋನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್‌ಗ್ರೋವ್, ದೇವಮತ ಶಾಲೆ, ಅಮರ್‌ ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೋನಿ ಹೆಚ್.ಆರ್.ಬಿ.ಆರ್. ಲೇಔಟ್, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ.
ಕಲ್ಯಾಣನಗರ, ಎಸ್.ಬಿ ವಾಟರ್‌ ಟ್ಯಾಂಕ್, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿ.ಡಿ.ಎಸ್. ಗಾರ್ಡನ್, ಸತ್ಯಎನ್‌ಕ್ಲೇವ್, ಪ್ರಕೃತಿ ಲೇಔಟ್ ಹೊಯ್ಸಳನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅಲ್ಲದೆ, ಬೃಂದಾವನ ಲೇಔಟ್, ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥ ನಗರ ರಸ್ತೆ, ಎನ್.ಆರ್.ಐ ಲೇಔಟ್ ಸುಂದರಾಂಜನೇಯದೇವಸ್ಥಾನ, ಡಬಲ್ ರಸ್ತೆ, ಪುಣ್ಯಭೂಮಿ ಲೇಔಟ್, ಸಮದ್ ಲೇಔಟ್, ಯಾಸಿನ್‌ನಗರ, ಪಿ.ಎನ್.ಎಸ್. ಲೇಔಟ್, ಕುಳ್ಳಪ್ಪ ಸರ್ಕಲ್, 5ನೇ ಮುಖ್ಯರಸ್ತೆ, ಹೆಚ್.ಬಿ.ಆರ್. 2ನೇ ಬ್ಲಾಕ್, ರಾಜ್‌ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣರಸ್ತೆ, ನೆಹರುರಸ್ತೆ, 80 ಅಡಿ ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಮರಿಯಪ್ಪ ಸರ್ಕಲ್, ಕೆ.ಕೆ.ಹಳ್ಳಿ ಡಿಪೋ, ಸಿ.ಎಂ.ಆರ್.ರಸ್ತೆ, ನಂಜುಂಡಪ್ಪ ರಸ್ತೆ, ಕರಾವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜಮಲ್ಲಪ್ಪ ಲೇಔಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶ.

ದೊಡ್ಡ ಬಾಣಸವಾಡಿ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣರೆಡ್ಡಿ ಲೇಔಟ್, ಗೋಪಾಲರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್. 2ನೇ, 5ನೇ, 6ನೇ ಕ್ರಾಸ್, 100 ಅಡಿ ರಸ್ತೆ ಬಾಣಸವಾಡಿ, ಗ್ರೀನ್ ಪಾರ್ಕ್ ಲೇಔಟ್ ಫ್ಲವರ್‌ ಗಾರ್ಡನ್, ಎಂ.ಎ.ಗಾರ್ಡನ್, ದಿವ್ಯಉನ್ನತಿ ಲೇಔಟ್, ಪ್ರಕೃತಿ ಟೌನ್‌ಶಿಪ್, ಮಲ್ಲಪ್ಪಲೇಔಟ್, ಬೈರತಿ, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗA ಎನ್‌ಕ್ಲೇವ್, ಅಥಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್, ಗುಬ್ಬಿಕ್ರಾಸ್, ಬಾಬೂಸಾ ಪಾಳ್ಯ, ಬ್ಯಾಂಕ್‌ ಅವೆನ್ಯೂ ಲೇಔಟ್.

ನಂಜಪ್ಪ ಗಾರ್ಡನ್, ಸಿ.ಎನ್.ಆರ್. ಲೇಔಟ್, ಆರ್.ಎಸ್.ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪ ರಸ್ತೆ, ಮುನೆಗೌಡ ರಸ್ತೆ, ಸತ್ಯಮೂರ್ತಿ ರಸ್ತೆ, ಜೆ.ವಿ.ಶೆಟ್ಟಿ ರಸ್ತೆ, ಕುವೆಂಪು ರಸ್ತೆ, ಸದಾಶಿವ ದೇವಸ್ಥಾನದ ರಸ್ತೆ, ಗುರುಮೂರ್ತಿ ರಸ್ತೆ, ಗುಳ್ಳಪ್ಪ ರಸ್ತೆ, ಕಮ್ಮನಹಳ್ಳಿ ಸಂಪಣ್ಣ ರಸ್ತೆ ಎ,ಡಿ.ಎಂ.ಸಿ. ಮಿಲಿಟರಿ, ಬಂಜಾರ ಲೇಔಟ್, ಎನ್.ಪಿ.ಎಸ್, ಬೆಥೆಲ್‌ ಲೇಔಟ್, ಸಮೃದ್ಧಿ ಲೇಔಟ್, ವಾಟರ್‌ಟ್ಯಾಂಕ್, ಕಲ್ಕೆರೆ, ಜಯಂತಿನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಇನ್ನೂ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆಯೋ ಅಂತಹ ಪ್ರದೇಶಗಳ ಜನರು ಮುಂಜಾಗ್ರತಾ ಕ್ರಮವಾಗಿ ಮೊಬೈಲ್‌, ಲ್ಯಾಪ್‌ಟಾಪ್‌, ಬ್ಯಾಟರಿ ಸೇರಿದಂತೆ ಇನ್ನಿತರೆ ವಿದ್ಯುತ್ ಸಾಧನಗಳನ್ನು ಮುಂಚಿತವಾಗಿ ಚಾರ್ಜ್‌ ಮಾಡಿಟ್ಟುಕೊಳ್ಳುವಂತೆ ಸಲಹೆ ನೀಡಿದೆ. ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ ಸಹಾಯವಾಣಿಗೆ ಸಂಪರ್ಕಿಸಬಹುದು ಅಂತಲೂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+