Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಮಾರ್ಚ್ 1ರಂದು ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ನಾಳೆ ಅಂದರೆ ಮಾರ್ಚ್ 2ರಂದು ಭಾನುವಾರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಇದಕ್ಕೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಸ್ಕಾಂ ಪೀಣ್ಯ ಸ್ಟೇಷನ್‌ನಲ್ಲಿ ತುರ್ತು ಕಾಮಗಾರಿ ಹಿನ್ನೆಲೆ ಮಾರ್ಚ್ 2ಎಂದು ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. 220/66/11 kV ಎಸ್.ಆರ್.ಎಸ್ ಪೀಣ್ಯ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಮಾರ್ಚ್ 2, 2025ರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಕರೆಂಟ್ ಕಟ್?: ಗೃಹಲಕ್ಷ್ಮಿ ಅಪಾರ್ಟ್‌ಮೆಂಟ್, ಎಸ್.ಎಂ ರಸ್ತೆ, ಜಾಲಹಳ್ಳಿ ಕ್ರಾಸ್, ಚೊಕ್ಕಸಂದ್ರ, ಮಾರುತಿ ಲೇಔಟ್, ಕೆಂಪಯ್ಯ ಲೇಔಟ್, ಜಿಜಿ ಪಾಳ್ಯ, ಇಸ್ರೋ, ನಾರಾಯಣಪುರ, ಟಿಟಿಎಫ್ ಸರ್ಕಲ್, ಗಣಪತಿನಗರ ಮುಖ್ಯ ರಸ್ತೆ, ಪೋಲಿಸ್ ಠಾಣೆ ರಸ್ತೆ, ಚಾಮುಂಡಿಪುರ, ರಾಜೇಶ್ವರಿನಗರ, ಆಕಾಶ್ ಥೀಯೇಟರ್ ರಸ್ತೆ, ವಿಜ್ಞಾನ ಪಬ್ಲಿಕ್ ಸರ್ಕಲ್ ರಸ್ತೆ, ಬೈರವೇಶ್ವರ ನಗರ, ಬ್ಯಾಂಕ್ ಕಾಲೋನಿ, ಮುನೇಶ್ವರ ಲೇಔಟ್, ಎಫ್‌ಎಫ್ ಲೇಔಟ್, ಎಸ್‌ಎಸ್ ಲೇಔಟ್, ಕೆಜಿ ಲೇಔಟ್, ರಾಜೀವ್ ಗಾಂಧಿನಗರ, ಚೌಡೇಶ್ವರಿ ನಗರ.
ಪೀಣ್ಯ 4ನೇ ಹಂತ, 4ನೇ ಮುಖ್ಯ, 8ನೇ ಕ್ರಾಸ್, ಎಚ್‌ಎಂಟಿ, ಬಿ.ಎಂ.ಟಿ. ಗಾರ್ಡನ್, ಪೀಣ್ಯ ಪೊಲೀಸ್ ಸ್ಟೇಷನ್ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್ 6ನೇ ಕ್ರಾಸ್, ರಿಲಯನ್ಸ್ ಕಮ್ಯೂನಿಕೇಷನ್, ಮುನೇಶ್ವರ ದೇವಸ್ಥಾನ ರಸ್ತೆ, ಮೆಕ್ ಲೇಔಟ್, ಕೆಎಚ್‌ಬಿ ಲೇಔಟ್, ರಾಜೇಶ್ವರಿನಗರ, ಫ್ರೆಂಡ್ಸ್ ಸರ್ಕಲ್ 6ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5ನೇ ಮುಖ್ಯ ರಸ್ತೆ, ಯೂಕೋ ಬ್ಯಾಂಕ್ ರಸ್ತೆ, ಥರ್ಲಾಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ.
ರಾಜಗೋಪಾಲ್ ನಗರ ಕಸ್ತೂರಿ ಬಡಾವಣೆ, ಜೆಕೆ ಡಬ್ಲ್ಯೂ ಲೇಔಟ್, ಎಕ್ಸಿಸ್ ಆಸ್ಪತ್ರೆ, ಪೀಣ್ಯ ಗ್ರಾಮ ರಸ್ತೆ 4ನೇ ಬ್ಲಾಕ್, 2ನೇ ಬ್ಲಾಕ್, ಎಂಇಐ ಕಾರ್ಖಾನೆ 10ನೇ ಕ್ರಾಸ್, 1ನೇ ಹಂತ, ಪೀಣ್ಯ ಕೈಗಾರಿಕಾ ಪ್ರದೇಶ ಅಜೆಕ್ಸ್ ರಸ್ತೆ, ಸ್ಲಮ್ ರಸ್ತೆ, ಅನು ಸೋಲಾರ್ ರಸ್ತೆ, ಎಸ್‌ಸಿಎಲ್ ರೋಡ್, ಮೆರಲ್ ಫ್ಯಾಕ್ಟರಿ, ಜನರಲ್ ಮೆಟಲ್ ರಸ್ತೆ, ಮೈಸೂರು ಇಂಜಿನಿಯರ್ ರಸ್ತೆ, ಸನ್‌ರೈಸ್ ಕಾಸ್ಟಿಂಗ್ ರಸ್ತೆ ಮತ್ತು ಸುತ್ತಮುತ್ತಲಿದೆ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ.
ವೈಷ್ಣವಿ ಮಾಲ್, ಕಾವೇರಿ ಮಾಲ್, ಪೀಣ್ಯ 10ನೇ ಮುಖ್ಯ, 11ನೇ ಮುಖ್ಯ ರಸ್ತೆ ಉಡುಪಿ ಹೋಟೆಲ್, ಐಆರ್ ಪಾಲಿಟೆಕ್ನಿಕ್ ರಸ್ತೆ, ಲಕ್ಷ್ಮಿದೇವಿ ನಗರ, ಲಗ್ಗೆರೆ ಹಳೆ ಗ್ರಾಮ, ಲವಕುಶಾ ನಗರ, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ 6ನೇ, 7ನೇ, 8ನೇ, 9ನೇ ಕ್ರಾಸ್, 1ನೇ ಹಂತ ಪಿಐಎ 7ನೇ ಕ್ರಾಸ್, 1ನೇ ಹಂತ ಪಿಯುಎ, ಟಿವಿಎಸ್ ಕ್ರಾಸ್ ರಸ್ತೆ ಹತ್ತಿರ, ಯಶವಂತಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹೀಗೆ ಕಾಮಗಾರಿ ನಡೆಯುವಂತಹ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡುತ್ತಲೇ ಇರುತ್ತದೆ. ಇದರ ಆಧಾರದ ಮೇಲೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಲು ಅನುಕೂಲ ಆದಂತಾಗುತ್ತದೆ.












Click it and Unblock the Notifications