Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೋಮವಾರ, ಮಂಗಳವಾರ ಕರೆಂಟ್‌ ಕಟ್‌

Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳ ಹಾಗೂ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಜೂನ್‌ 23 ಮತ್ತು 24ರಂದು ನಗರದ ಹಲವು ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ ಕಾರಣ ಏನು ಹಾಗೂ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಈ ಕೆಳಕಂಡ ಪ್ರದೇಶಗಳಲ್ಲಿ ಜೂನ್‌ 23 ರ ಸೋಮವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Power Cut in Bengaluru s These Areas on June 23 and 24 Know details

ಜೂನ್‌ 23ರಂದು ಎಲ್ಲೆಲ್ಲಿ ಕರೆಂಟ್‌ ಕಟ್‌: ಇಸ್ರೋ ಲೇಔಟ್‌, ಕುಮಾರಸ್ವಾಮಿ ಲೇಔಟ್, ಇಲ್ಯಾಸ್ ನಗರ, ಯೆಲಚೇನಹಳ್ಳಿ ಗಂಗಾಧರ ನಗರ ವಿವೇಕಾನಂದ ಕಾಲೋನಿ, ಪ್ರಗತಿಪುರ, ಕಾಶಿ ನಗರ, ವಿಕ್ರಮ್ ನಗರ, ನಂಜಪ್ಪ ಬಡಾವಣೆ, ಟೀಚರ್ಸ್‌ ಕಾಲೋನಿ, ಪೀಣ್ಯ, ರಾಜಗೋಪಾಲ ನಗರ, ಜಿಕೆಡಬ್ಲ್ಯೂ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಯಿಸಿದೆ.

ಮಂಗಳವಾರ ಎಲ್ಲೆಲ್ಲಿ ಕರೆಂಟ್‌ ಕಟ್?: ಜೂನ್ 24ರ ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಸಿದೆ. ಕೆಆರ್ ಲೇಔಟ್, ಶಾರದ ನಗರ, ಅರೇಹಳ್ಳಿ, ಇಟ್ಟಮಡು, ಎಜಿಎಸ್‌ ಲೇಔಟ್, ಟಿಜಿ ಲೇಔಟ್, ಭುವನೇಶ್ವರಿ ನಗರ, ಕದಿರೇನಹಳ್ಳಿ, ನಾಯ್ಡು ಲೇಔಟ್ ಮತ್ತು ಸುಮತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಜೂನ್‌ 22ರಂದು ಎಲ್ಲೆಲ್ಲಿ ಕರೆಂಟ್‌ ಕಟ್‌?: ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಎಲೆಕ್ಟ್ರಾನಿಕ್‌ ಸಿಟಿಯ ಹಲವೆಡೆ, ಬೊಮ್ಮನಹಳ್ಳಿ, ಎನ್‌ಜೆಆರ್‌ ಲೇಔಟ್‌, ಚಿಕ್ಕತೋಗೂರು, ಹೊಂಗಸಂದ್ರ, ಕೋನಪ್ಪನ ಅಗ್ರಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್‌ ಕಟ್‌ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಜೂನ್‌ 20, 21, 22ರಂದು ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಆನೇಕಲ್‌, ಯಡವನಹಳ್ಳಿ, ಇಚ್ಚಂಗೂರು, ವಟ್ಟರಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಟೌನ್‌, ಮಾಯಸಂದ್ರ, ದಾಸನಪುರ, ಬಲ್ಲೂರು, ಕಂಬಳಪುರ, ಚಿಕ್ಕನಹಳ್ಳಿ, ವಿಬಿಎಚ್‌ ಅಪಾರ್ಟ್‌ಮೆಂಟ್‌, ರಾಚಮ್ಮನಹಳ್ಳಿ, ಅರವಂತಿಗೆಪುರ, ಪಿ.ಗೊಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+